ಶಿವಣ್ಣನ ‘ಡ್ಯಾಡ್’ ಗೆ ಶರವೇಗದ ಚಿತ್ರೀಕರಣ!

ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ವರ್ಷದಿಂದ ವರ್ಷಕ್ಕೆ ಯುವಕರಾದ ನಟನಿದ್ದರೆ ಅದು ಶಿವರಾಜ್ ಕುಮಾರ್ ಮಾತ್ರ. ವೇಗ, ಉತ್ಸಾಹದಲ್ಲಿ ಯುವಕನಾದರೂ ನಟನೆಯ ವಿಚಾರದಲ್ಲಿ ಅಪ್ಪನೆಂದು ಸಾಬೀತು ಪಡಿಸಿರುವ ಶಿವಣ್ಣ ಇದೀಗ ಪರದೆಯ ಮೇಲೆಯೂ ಮತ್ತೊಮ್ಮೆ ಅಪ್ಪನಾಗಿದ್ದಾರೆ. ಡ್ಯಾಡ್ ಎನ್ನುವ ಶೀರ್ಷಿಕೆಯಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿರುವ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ತಿಯಾಗಿದೆ.

ಡ್ಯಾಡ್ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ನೆರವೇರಿತ್ತು. ಇದೀಗ ಅರಮನೆ ನಗರಿ ಮೈಸೂರಿನಲ್ಲೇ ಚಿತ್ರದ ಮೊದಲ ಹಂತದ ಚಿತ್ರೀಕರಣವೂ ಮುಕ್ತಾಯವಾಗಿದೆ. ಗಣೇಶ ಹಬ್ಬ ಮುಗಿಸಿಕೊಂಡು ಎರಡನೇ ಹಂತದ ಚಿತ್ರೀಕರಣವೂ ಶರವೇಗದಲ್ಲಿ ಶುರುವಾಗಲಿದೆ. ಟಾಲಿವುಡ್ ನಿರ್ದೇಶಕ ಅನಿಲ್ ಕೆನ್ನೆಗಂಟಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

‘ಡ್ಯಾಡ್’ ಮುಹೂರ್ತದ ದೃಶ್ಯ

ಚಿತ್ರದಲ್ಲಿ ಶಿವರಾಜ್‍ಕುಮಾರ್ ವೈದ್ಯನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಟ ಸುರಾಜ್‍ ವೆಂಜಾರಮೂಡ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್‍ ಜನ್ಯ ಅವರ ಸಂಗೀತ ನಿರ್ದೇಶನ ಹಾಗೂ ಬಿ.ರಾಜಶೇಖರ್ ಅವರ ಛಾಯಾಗ್ರಹಣವಿದೆ. ತೆಲುಗು ನಿರ್ಮಾಪಕ ಹರೀಶ್‍ ಪೆದ್ದಿ ಈ ಡ್ಯಾಡ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Recommended For You

Leave a Reply

error: Content is protected !!