ಹೊಸ ವರ್ಷ ಶುರುವಾಯ್ತು. ಸಿನಿಮಾರಂಗದಲ್ಲಿಯೂ ಹೊಸ ವರುಷಕ್ಕೆ ಹೊಸ ಸಿನಿಮಾಗಳ ಅನೌನ್ಸ್ ಸಂಭ್ರಮ ಕೂಡ ಜೋರಾಗಿದೆ. ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನ ಸಕ್ಸಸ್ ಫುಲ್ ನಿರ್ದೇಶಕ ಪಿಸಿ ಶೇಖರ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ರಾಗಾ, ರೊಮಿಯೋ ಅಂತಹ ಅದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿಸಿ ಶೇಖರ್ ಇದೀಗ ತಮ್ಮ ೧೨ ಸಿನಿಮಾ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ ಬಾರಿ ಪಿಸಿ ಶೇಖರ್ ಸಾರಥಿ, ಲ್ಯಾಂಡ್‌ಲಾರ್ಡ್ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಜೊತೆ ಕೈ ಜೋಡಿಸಿದ್ದಾರೆ ಈ ಮೂಲಕ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಹ್ಯಾಟ್ರಿಕ್ ಹಿಟ್ ಕೊಡಲು ಸಜ್ಜಾಗಿದ್ದಾರೆ .

ಈಗಾಲೇ ಸಿನಿಮಾದ ಎಲ್ಲಾ ತಾಯಾರಿಗಳು ಮುಗಿದಿದ್ದು ಇನ್ನೇನು ಚಿತ್ರ ಸೆಟ್ಟೇರಬೇಕಿದೆ. ಸದ್ಯ ಮಹಾನ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಇರುವ ಪಿಸಿ ಶೇಖರ್ ಆಸಿನಿಮಾ ರಿಲೀಸ್‌ಗೂ ಮೊದಲೇ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗಲಿದೆ ಎಂದು ನಿರ್ದೇಶಕ ಪಿಸಿ ಶೇಖರ್ ಹೇಳಿದ್ದಾರೆ. “ಸಾರಥಿ, ಲ್ಯಾಂಡ್‌ಲಾರ್ಡ್ ಅಂತ ದೊಡ್ಡ ಸಿನಿಮಾಗಳನ್ನು ಮಾಡಿರುವ ನಿರ್ಮಾಪಕರು ನನಗೆ ಅವಕಾಶ ಕೊಟ್ಟಿದ್ದು ತುಂಬಾ ಖುಷಿಯಾಗುತ್ತೆ. ಸದ್ಯದಲ್ಲೇ ಸಿನಿಮಾದ ಟೈಟಲ್ ಮತ್ತು ಸ್ಟಾರ್ ಕಾಸ್ಟ್ ಬಗ್ಗೆ ರಿವೀಲ್ ಮಾಡುತ್ತೇವೆ” ಎಂದು ಪಿಸಿ ಶೇಖರ್ ಹೇಳಿದ್ದಾರೆ.
ಇನ್ನೊಂದು ವಿಶೇಷ ಎಂದರೆ ಕೆವಿ ಸತ್ಯಪ್ರಕಾಶ್ ಹಾಗೂ ಪಿಸಿ ಶೇಖರ್ ಅವರ ಗೆಳೆಯ ನಟ ನಿರ್ಮಾಪಕ ಮಿತ್ರ ಅವರು ಈ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪಿಸಿ ಶೇಖರ್ ರಾಗಾದಲ್ಲಿ ಮಿತ್ರ ಅವರು ಹೀರೋ ಆಗಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕ್ಯಾಮರಾ ಹಿಂದೆ ಕೆಲಸ ಮಾಡುತ್ತಿರುವುದು ವಿಶೇಷ.. ರಾಗಾ ಸಿನಿಮಾದಲ್ಲಿ ನಟ ಮಿತ್ರ ಮತ್ತು ಪಿಸಿ ಶೇಖರ್ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿ ವರ್ಕೌಟ್ ಆಗಿತ್ತು. ಹಾಗಾಗಿ ಇದೀಗ ಮತ್ತೆ ಒಟ್ಟಿಗೆ ಸೇರಿರುವುದರಿಂದ ಈ ಸಿನಿಮಾದ ಮೇಲು ನಿರೀಕ್ಷೆ ಹೆಚ್ಚಾಗಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಸಿನಿಮಾತಂಡ.

