ಸಿನಿಕನ್ನಡ.ಕಾಮ್ ಹೆಸರೇ ಸೂಚಿಸುವಂತೆ ಕನ್ನಡ ಸಿನಿಮಾರಂಗದ ಕುರಿತಾದ ಮಾಹಿತಿ ತಾಣ. ಅದೇ ಸಂದರ್ಭದಲ್ಲಿ ಇತರ ಭಾಷೆಗಳ ಸಿನಿಮಾ ವಿಶೇಷಗಳನ್ನು ಕೂಡ ಕನ್ನಡದಲ್ಲೇ ನೀಡುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಸಿನಿಮಾಗಳ ಜತೆಯಲ್ಲೇ ಕನ್ನಡ ಕಿರುತೆರೆಯ ವಿಶೇಷಗಳು ಮತ್ತು ರಂಗಭೂಮಿಯ ಆಗು ಹೋಗುಗಳನ್ನು ಕೂಡ ನಿಮ್ಮ ಮುಂದೆ ಇರಿಸಲಿದ್ದೇವೆ. ಒಟ್ಟಿನಲ್ಲಿ ಮನರಂಜನೆ ಮತ್ತು ಮಾಹಿತಿಗೆ ಸಿನಿ ಕನ್ನಡ.ಕಾಮ್ ಸದಾ ಮುಂದೆ ಇರಲಿದೆ.
ಸಿನಿಮಾ ಜಗತ್ತಿನ ಅಧಿಕೃತ ಮಾಹಿತಿ
ಸಾಮಾನ್ಯವಾಗಿ ವೆಬ್ ನ್ಯೂಸ್ ಎಂದೊಡನೆ ಗಾಸಿಪ್ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವುದನ್ನು ನೋಡಿರುತ್ತೇವೆ. ಆದರೆ ನಮ್ಮ ಸಿನಿ ಕನ್ನಡ.ಕಾಮ್ ಗಾಸಿಪ್ ಸುದ್ದಿಗಳನ್ನು ಹರಡುವುದಿಲ್ಲ. ನಾವು ಎಲ್ಲ ಸುದ್ದಿಗಳನ್ನು ಕೂಡ ಸಂಬಂಧ ಪಟ್ಟವರ ಜತೆಗೆ ಮಾತನಾಡಿದ ಮೇಲೆ ಮಾತ್ರ ಪ್ರಕಟಿಸುತ್ತೇವೆ. ಹಾಗಾಗಿ ಸುಳ್ಳು ಮತ್ತು ಜೊಳ್ಳು ಸುದ್ದಿಗಳಿಗೆ ಇಲ್ಲಿ ಸ್ಥಾನವಿರುವುದಿಲ್ಲ. ಒಟ್ಟಿನಲ್ಲಿ ಗುಣಮಟ್ಟದ ಸಂದರ್ಶನಗಳು ಮತ್ತು ಘಟನೆಯನ್ನು ಕುರಿತಾದ ಸಕಾರಾತ್ಮಕ ಚಿಂತನೆಯ ಬರಹಗಳನ್ನು ಇಲ್ಲಿ ಕಾಣಬಹುದು. ಆದುದರಿಂದ ನಮ್ಮ ಗುಣಮಟ್ಟವನ್ನು ಹೀಗೆಯೇ ಉಳಿಸಿಕೊಳ್ಳಲು ಕನ್ನಡದ ಸದ್ಗುಣ ಸಂಪನ್ನ ಓದುಗರಷ್ಟೇ ಬೆನ್ನೆಲುಬು. ಒಬ್ಬ ಕಲಾವಿದನ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ರಚಿಸಲ್ಪಟ್ಟ ದಾಖಲೆ ಡಾ.ರಾಜ್ ಮೂಲಕ ನಮ್ಮ ರಾಜ್ಯಕ್ಕೆ ಸ್ವಂತವಾಗಿದೆ. ಇಂಥ ನಾಡಿನಲ್ಲಿ ನಮ್ಮಲ್ಲಿ ಪ್ರಕಟವಾಗುವ ಸಭ್ಯ ಸಿನಿಮಾ ಸುದ್ದಿಗಳಿಗೆ ಕನ್ನಡ ಸಿನಿಪ್ರಿಯರ ಬೆಂಬಲ ಸದಾ ಇರುವುದೆನ್ನುವ ನಂಬಿಕೆ ನಮಗಿದೆ.