ಫೆಬ್ರವರಿ 7ಕ್ಕೆ ತೆರೆಗೆ ಬರಲಿದೆ ‘ಓಜಸ್’

ನವ ನಿರ್ದೇಶಕ ಸಿ ಜೆ ವರ್ಧನ್ ರಚಿಸಿ, ನಿರ್ದೇಶಿಸಿರುವ ಚಿತ್ರ ‘ಓಜಸ್ ದಿ ಲೈಟ್’ ಬಿಡುಗಡೆಗೆ ಸಿದ್ಧವಾಗಿದೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಸಿನಿಮಾದ ವಿಶೇಷಗಳ ಬಗ್ಗೆ ಚಿತ್ರತಂಡ ಹಂಚಿಕೊಂಡಿದೆ.

“ನಾಯಕಿಯ ಮನೆಯಲ್ಲಿ ದಿಗ್ಭ್ರಮೆಗೆ ಒಳಗಾಗುವಂಥ ಘಟನೆಯೊಂದು ನಡೆಯುತ್ತದೆ. ಆದರೆ ಅದಕ್ಕೆ ಹೆದರದೆ ರಾವಣನನ್ನು ರಾಮನಾಗಿಸುವ ಮಹಿಳೆಯೇ ಚಿತ್ರದ ನಾಯಕಿ” ಎಂದರು ನಿರ್ದೇಶಕ ವರ್ಧನ್.

ಮರಳಿ ಬಂದ ನೇಹಾ ಸಕ್ಸೇನ

ವರ್ಷಗಳ ಹಿಂದೆ ಕನ್ನಡದಲ್ಲಿ ವೃತ್ತಿ ಬದುಕು ಶುರು ಮಾಡಿದ ನೇಹಾ ಸಕ್ಸೇನ ಒಂದು ಸುತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಬಳಿಕ ಕನ್ನಡಕ್ಕೆ ವಾಪಾಸಾಗಿದ್ದಾರೆ. “ಚಿತ್ರದಲ್ಲಿ ನನ್ನದು ಜಿಲ್ಲಾಧಿಕಾರಿ ಸುಮಾ ಎನ್ನುವ ಪಾತ್ರ. ಇದು ತುಂಬ ಸೆನ್ಸಿಟಿವ್ ಸಬ್ಜೆಕ್ಟ್ ಆಗಿದ್ದು, ಇಂಥದೊಂದು ಪಾತ್ರ ನನಗೆ ದೊರಕಿರುವುದು ನನ್ನ ಅದೃಷ್ಟ” ಎಂದರು. ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿಭಾಯಿಸಿರುವ ನಟ, ಪತ್ರಕರ್ತ ಯತಿರಾಜ್ ಮಾತನಾಡಿ,”ಇಂಥದೊಂದು ಸಬ್ಜೆಕ್ಟ್ ಆಯ್ದುಕೊಂಡು ಬಿಡುಗಡೆ ತನಕ ಪ್ರಯತ್ನಿಸಿರುವ ನಿರ್ಮಾಪಕ ವರ್ಧನ್ ಅವರದು ಸಾಹಸವೇ ಸರಿ” ಎಂದರು. ತಮ್ಮ ಇದುವರೆಗಿನ ವೃತ್ತಿ ಬದುಕಿನಲ್ಲಿ ಇಂಥದೊಂದು ಗೆಟಪ್ ನಲ್ಲಿ ನಟಿಸಿರುವುದು ಇದೇ ಪ್ರಥಮ ಎಂದು ಅವರು ಹೇಳಿದರು.

ಚಿತ್ರದಲ್ಲಿ ಹಿರಿಯ ನಟಿ ಭವ್ಯ ಅವರು ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದು, ಸಿನಿಮಾವನ್ನು ಬೆಂಗಳೂರು, ಮದ್ದೂರು, ತುಮಕೂರು ‌ಮೊದಲಾದೆಡೆಗಳಲ್ಲಿ‌ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಒಂದು ಹಾಡು ಇದೆ. ಆದರೆ ಆಲ್ಬಮ್ ನಲ್ಲಿ ಒಟ್ಟು ಐದು ಹಾಡುಗಳಿವೆ ಎಂದು ಮಾಹಿತಿ ನೀಡಿದ ನಿರ್ಮಾಪಕ ರಜತ್ ರಘುನಾಥ್ ಚಿತ್ರದ ನಿರ್ಮಾಪಕರಾಗಿದ್ದು, ದಶಕದ ಹಿಂದೆ ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಿ ಇದನ್ನೇ ಪ್ರಥಮ ಚಿತ್ರವಾಗಿ ಆಯ್ಕೆ ಮಾಡಿದ್ದಾಗಿ ಹೇಳಿದರು. ಫೆಬ್ರವರಿ 7ರಂದು ಚಿತ್ರ ಬಿಡುಗಡೆಗೆ ಯೋಜನೆ ಹಾಕಲಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ಚಿತ್ರದಲ್ಲಿ ಸ್ವಾಮೀಜಿ ಪಾತ್ರ ಮಾಡಿರುವ ಹಿರಿಯ ನಿರ್ದೇಶಕ ಜಿ ಮೂರ್ತಿ ಸೇರಿದಂತೆ ಹನುಮಂತರಾಜು, ಶೋಭಾ, ಶಿವಾನಿ,ಮಾರುತಿ, ಮಲ್ಲಿಕಾರ್ಜುನ್ ರಾ ನ್ಯೂಸ್ ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.

Recommended For You

Leave a Reply

error: Content is protected !!
%d bloggers like this: