‘ಮಂಡ್ಯದ ಗಂಡು’ ಶೀರ್ಷಿಕೆಗೆ ಅಂಬಿ ಅಭಿಮಾನಿಗಳ ವಿರೋಧ

“ಮಂಡ್ಯದ ಗಂಡು ಎನ್ನುವ ಹೆಸರು ಅಂಬರೀಷ್ ಅವರಿಗೆ ಮಾತ್ರ. ಅವರು ಏಳುಕೋಟಿ ಕನ್ನಡದ ಆಸ್ತಿ. ಅದು ಚಿತ್ರದ ಶೀರ್ಷಿಕೆ ಮಾತ್ರವಲ್ಲ, ಅವರಿಗೆ ಸಿಕ್ಕಿರುವಂಥ ಬಿರುದುಗಳು. ಹಾಗಾಗಿ ಮಂಡ್ಯದ ಗಂಡು, ಕಲಿಯುಗ ಕರ್ಣ ಮೊದಲಾದ ಯಾವುದೇ ಹೆಸರನ್ನು ಕೂಡ ಮುಂದೆ ಯಾರೂ ಬಳಸಬಾರದು” ಎಂದು ಅಂಬರೀಷ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೈ ನೇಮ್ ಈಸ್ ಮಂಡ್ಯದ ಗಂಡು’ ಎನ್ನುವುದು ಹೊಸ ಚಿತ್ರದ ಹೆಸರು. ಚಿತ್ರದ ಹೀರೋ‌ ಮಂಡ್ಯದವರೇ. ಆದರೆ ನಾವು ವಾಣಿಜ್ಯ ಮಂಡಳಿಗೂ ಈ‌ ಬಗ್ಗೆ ದೂರು ನೀಡಿದ್ದೇವೆ. ಅದಕ್ಕೆ ಅವರು ಅಂಬರೀಷ್ ಅಭಿಮಾನಿಗಳಿಗೆ ನೋವಾಗುವಂಥ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದಾರೆ ” ಎಂದು ‘ಸಿನಿ ಕನ್ನಡ’ಕ್ಕೆ ತಿಳಿಸಿದ್ದಾರೆ.

ಮುಹೂರ್ತದಲ್ಲಿರುತ್ತಾರೆ ಅಭಿಷೇಕ್ – ದರ್ಶನ್!

ವಿಶೇಷ ಏನೆಂದರೆ ‘ಮೈ ನೇಮ್ ಈಸ್ ಮಂಡ್ಯದ ಗಂಡು’ ಚಿತ್ರದ ಮುಹೂರ್ತ ನಾಳೆ ನೆರವೇರಲಿದೆ. ಚಿತ್ರದ‌ ಮುಹೂರ್ತಕ್ಕೆ ಅಂಬರೀಷ್ ಪುತ್ರ ಅಭಿಷೇಕ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿರುವುದು ವಿಶೇಷ. ಶೀರ್ಷಿಕೆಗಳನ್ನು ಇಟ್ಟು ಚಿತ್ರ ಮಾಡುತ್ತಿರುವವರು ಕೂಡ ಮಂಡ್ಯದ ಅಂಬರೀಷ್ ಅಭಿಮಾನಿಗಳೇ ಎನ್ನುವುದು ಇದಕ್ಕೆ ಮತ್ತೊಂದು ಕಾರಣ.

ಉಮೇಶ್ ಬಣಕಾರ್ ಪ್ರತಿಕ್ರಿಯೆ

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿದಾಗ ಉಪಸ್ಥಿತರಿದ್ದ ಗೌರವಾಧ್ಯಕ್ಷ ಉಮೇಶ್ ಬಣಕಾರ್ ನೀಡಿದೆ ಪ್ರತಿಕ್ರಿಯೆ ಹೀಗಿದೆ.
“ಮಂಡ್ಯದ ಗಂಡು ಶೀರ್ಷಿಕೆಯನ್ನು ಇದುವರೆಗೆ ಯಾರೂ ರಿಜಿಸ್ಟರ್ ಮಾಡಿಲ್ಲ. ಅದೇ ರೀತಿ ಟೈಟಲ್ ಸಮಿತಿ ಕಡೆಯಿಂದ ಶೀರ್ಷಿಕೆಗೆ ಒಪ್ಪಿಗೆ ನೀಡುವ ಯಾವುದೇ ಅವಕಾಶ ಇಲ್ಲ. ಯಾಕೆಂದರೆ ಕಾರ್ಯಕಾರಿ ಸಮಿತಿಯಿಂದ ಅಪ್ರೂವ್ ಆದ ಮೇಲೆಯೇ ಶೀರ್ಷಿಕೆ ಇಡಲು ಸಾಧ್ಯ. ಅದರಲ್ಲಿಯೂ ಒಂಬತ್ತರಷ್ಟು ಅಂಬರೀಶ್ ಅಭಿಮಾನಿಗಳ ಸಂಘಗಳು ಶೀರ್ಷಿಕೆಗೆ ನೀಡದಂತೆ ವಾಣಿಜ್ಯ ಮಂಡಳಿಗೆ ಮನವಿ ನೀಡಿವೆ. ಹಾಗಾಗಿ ಆ ಚಿತ್ರದ ಶೀರ್ಷಿಕೆ ಬದಲಾಗುವ ಸಾಧ್ಯತೆಗಳೇ ಹೆಚ್ಚು ಎಂದು ಉಮೇಶ್ ಬಣಕಾರ್ ತಿಳಿಸಿದ್ದಾರೆ.

Recommended For You

Leave a Reply

error: Content is protected !!
%d bloggers like this: