‘ವಿಜಯ ಟೈಮ್ಸ್’ ಶಿಬರೂರು ಚಾನೆಲ್ ಶುರು

ಕನ್ನಡದ ಮಾಧ್ಯಮ ಲೋಕದ ದಿಟ್ಟ ಹೆಣ್ಣು ಮಗಳಾಗಿ ಗುರುತಿಸಿಕೊಂಡವರು ವಿಜಯಲಕ್ಷ್ಮಿ ಶಿಬರೂರು. ಇಂದು ಅವರ ಕನಸಿನ ವಾಹಿನಿಯಾದ ‘ವಿಜಯ್ ಟೈಮ್ಸ್’ ಲಾಂಚ್ ಮಾಡಲಾಯಿತು.

ಬೆಂಗಳೂರಿನ ಕೋರಮಂಗಲದಲ್ಲಿರುವ ವಿನೂತನ ಕಚೇರಿಯ ಉದ್ಘಾಟನೆಯನ್ನು ಎನ್ ಎ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಎಂ ಅಲ್ತಾಫ್ ಹುಸೇನ್ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ‘ಸೃಷ್ಟಿ’ ಇನ್ಫೊಟೈನ್ಮೆಂಟ್ ನ ನಿರ್ದೇಶಕ ಅಬ್ದುಲ್ ಜಬ್ಬಾರ್ ಅತಿಥಿಯಾಗಿ ಉಪಸ್ಥಿತರಿದ್ದರು. ವಿಜಯ ಟೈಮ್ಸ್ ಯೂಟ್ಯೂಬ್ ವೆಬ್ ಚಾನೆಲ್ ಆಗಿದ್ದು ಅದರ ಜತೆಯಲ್ಲೇ ಸೃಷ್ಟಿ ಇನ್ಫೋ‌ಟೈನ್ಮೆಂಟ್ ಮೂಲಕ ಮಾಧ್ಯಮ ಲೋಕಕ್ಕೆ ಪ್ರವೇಶಿಸಲು ಬಯಸುವ ಹೊಸಬರಿಗೆ ತರಬೇತಿ ನೀಡುವ ಕೆಲಸವೂ ನಡೆಯಲಿದೆ. ‘ರಿ ಡಿಫೈನಿಂಗ್ ಮೀಡಿಯ’ ಎನ್ನುವ ಧ್ಯೇಯ ವಾಕ್ಯದ ಮೂಲಕ ‘ಬದಲಾವಣೆಯ ಹಾದಿ’ಯನ್ನು ತೆರೆಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಯಾಕೆಂದರೆ ‌ಇಲ್ಲಿ ಟಿಆರ್ ಪಿ ಹಿಂದಿನ ಓಟವಿಲ್ಲ ಎನ್ನುವುದು ವಿಜಯಲಕ್ಷ್ಮಿಯವರು ನೀಡುವ ಭರವಸೆ ಮತ್ತು ಸತ್ಯವೂ‌ ಹೌದು.

ವಿಜಯ ಲಕ್ಷ್ಮೀ ಶಿಬರೂರು ಅವರು
‘ಸುವರ್ಣ ನ್ಯೂಸ್‌’ ಮತ್ತು ‘ನ್ಯೂಸ್18’ ವಾರ್ತಾವಾಹಿನಿಗಳ ತನಿಖಾ ವರದಿ ವಿಭಾಗದ ಸಂಪಾದಕಿಯಾಗಿ ನೀಡಿರುವ ಸುದ್ದಿಗಳು ಹೆಚ್ಚು ಜನಪ್ರಿಯವಾಗಿತ್ತು. ಅವರಿಗೆ ‘ಮೀಡಿಯಾ ಅಕಾಡೆಮಿ’ ಯಿಂದ ಪ್ರಶಸ್ತಿ, ‘ಮಾಧ್ಯಮ ಪುರಸ್ಕಾರ’, ‘ಮಾಧ್ಯಮ ಸನ್ಮಾನ‌ ಪ್ರಶಸ್ತಿ’, ಬಸವ ಪ್ರತಿಷ್ಠಾನ ದಿಂದ ‘ಅಕ್ಕ ವೀರರಾಣಿ ನಾಗಲಾಂಬಿಕ ಪ್ರಶಸ್ತಿ’,’ನರೇಮನ್ ಅವಾರ್ಡ್’, 2019ನೇ ಸಾಲಿನ‌ ‘ಕೆಂಪೇಗೌಡ ಪ್ರಶಸ್ತಿ’, ಕಾರವಾರದ ಜರ್ನಲಿಸ್ಟ್‌ ಅಸೋಸಿಯೇಶನ್‌ ಜಿಲ್ಲಾ ಘಟಕ ಕೊಡಮಾಡುವ ಪ್ರತಿಷ್ಠಿತ ‘ಹರ್ಮನ್‌ ಮೊಗ್ಲಿಂಗ್‌’ ಪ್ರಶಸ್ತಿಯೂ ಇವರಿಗೆ ಲಭಿಸಿವೆ.

ಒಟ್ಟಿನಲ್ಲಿ ವಿಜಯ ಲಕ್ಷ್ಮೀ ಶಿಬರೂರು ಅವರ ‘ವಿಜಯ ಟೈಮ್ಸ್’ ಮಾಧ್ಯಮ ಲೋಕದಲ್ಲಿ ಹೊಸ ಭರವಸೆ‌ ಮೂಡಿಸಿದೆ. ಅದಕ್ಕೆ ಪೂರಕವಾಗಿ‌ ನಾಡಿನಾದ್ಯಂತ ವಿವಿಧ ಕ್ಷೇತ್ರದ ಗಣ್ಯರು ವಾಹಿನಿಗೆ ಶುಭ ಕೋರಿದ್ದಾರೆ. ಕೊರೊನಾ ಕಾರಣದಿಂದಾಗಿ ಚಾನೆಲ್ ಲಾಂಚ್ ಕಾರ್ಯಕ್ರಮ ಚಿಕ್ಕದಾಗಿ‌ ನಡೆಸಿದರೂ, ಅವರ ಪ್ರಯತ್ನಕ್ಕೆ ಇಂಥ ಸಾವಿರಾರು ಜನರ ಬೆಂಬಲ ಇರುವುದು ಸಾಬೀತಾಗಿದೆ. ವಿಜಯ ಟೈಮ್ಸ್ ಸುದ್ದಿಗಳನ್ನು www.vijayatimes.com ಮೂಲಕ ವೀಕ್ಷಿಸಬಹುದು. ಅವರಿಗೆ ಸಿನಿಕನ್ನಡ.ಕಾಮ್ ಶುಭಾಶಯಗಳು

Recommended For You

Leave a Reply

error: Content is protected !!