ಮೇಕಿಂಗ್​ ನಲ್ಲೇ ಬೆಚ್ಚಿ ಬೀಳಿಸುವ ‘ಡಾಮ್ನೇಶನ್’

ಡಾಮ್ನೇಶನ್ ಎನ್ನುವ ಈ ಚಿತ್ರದ ಹೆಸರಿನ ಅರ್ಥ ‘ಖಂಡನೆ’. ಇದೊಂದು ಹಾರರ್ ಸಬ್ಜೆಕ್ಟ್​ನ ಕಿರುಚಿತ್ರ. 9ವರೆ ನಿಮಿಷಗಳ ಈ ಕಿರುಚಿತ್ರದಲ್ಲಿ ಒಂದೇ ಒಂದು ಸಂಭಾಷಣೆಯಿಲ್ಲ. ಆದರೂ ಪ್ರೇಕ್ಷಕರನ್ನು ಭಯಪಡಿಸುವಲ್ಲಿ ಯಶಸ್ವಿಯಾಗುತ್ತದೆ.

ಈ ಕಿರುಚಿತ್ರದಲ್ಲಿ ಇರುವುದು ಒಂದೇ ಒಂದು ಪಾತ್ರ ಮಾತ್ರ. ಈ ಪಾತ್ರವನ್ನು ಯುವನಟಿ ಸಾಹಿತ್ಯ ಶೆಟ್ಟಿ ನಿರ್ವಹಿಸಿದ್ದಾರೆ. ತನ್ನ ಮುಖಭಾವದಲ್ಲೇ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಕೆ ರಂಗಭೂಮಿ ಕಲಾವಿದೆ. ಮಂಡ್ಯ ರಮೇಶ್ ಅವರ ‘ನಟನ’ದಲ್ಲಿ ಗುರುತಿಸಿಕೊಂಡಾಕೆ.

ಆಯ್ದುಕೊಂಡಿರುವ ಸಬ್ಜೆಕ್ಟ್ ಮತ್ತು ಮೌನದಲ್ಲೇ ಮಾತಾಡಿರುವ ಕಾರಣ ಇದನ್ನೊಂದು ಪ್ಯಾನ್ ವರ್ಲ್ಡ್ ಕಿರುಚಿತ್ರ ಎಂದೇ ಹೇಳಬಹುದು. ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಅಕ್ಷಯ್ ಸಿದ್ದಾರ್ಥ್​. ಇದನ್ನೊಂದು ಹಾಲಿವುಡ್ ಸಿನಿಮಾದಂತೆ ಮೇಕಿಂಗ್ ಮಾಡುವಲ್ಲಿ ಕಲಾ ನಿರ್ದೇಶನ ಮತ್ತು ಪ್ರಸಾದನದ ಪಾತ್ರ ಪ್ರಮುಖ. ಇವರೆಡರ ಜವಾಬ್ದಾರಿಯನ್ನು ಯೋಗಾನಂದ್ ಎಲ್ ನಿರ್ವಹಿಸಿದ್ದಾರೆ. ಹರಿಗೋಬಿಂದ್ ಪಾಚಟ್ ಮತ್ತು ವಿಶ್ವಜಿತ್ ವಿ ಎಸ್ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನ ಕೂಡ ಹರಿಗೋಬಿಂದ್ ಅವರದ್ದೇ.
ಯೂಟ್ಯೂಬ್​ನಲ್ಲಿ ಲಭ್ಯವಿರುವ ಈ ಕಿರುಚಿತ್ರದ ಡಿಸ್ಕ್ರಿಪ್ಷನ್ ಥೀಮ್ ಏನೆಂದು ತಿಳಿಯಲು ಸಹಾಯ ಮಾಡುತ್ತದೆ.

ಲಿಲಿಯನ್ ಮಾರ್ನಿಂಗ್‌ಸ್ಟಾರ್, ಅತೀವವಾದ ಆಘಾತ ಮತ್ತು ಸಂಕಟಗಳನ್ನು ಅನುಭವಿಸಿದ ನಿಗೂಢ ಕಲಾವಿದೆ, ಆ ಎಲ್ಲಾ ದುಃಖಗಳಿಂದ ತನ್ನನ್ನು ರಕ್ಷಿಸಿದವನಿಗೆ ಉಡುಗೊರೆಯನ್ನು ಸಿದ್ಧಪಡಿಸುತ್ತಿದ್ದಾಳೆ. ಅವಳು ತನ್ನ ರಕ್ಷಕನನ್ನು ಭೇಟಿಯಾಗಲು ಉತ್ಸುಕಳಾಗಿದ್ದಾಳೆ ಎಂದು ಬರೆಯಲಾಗಿದೆ. ಇದನ್ನು ಓದಿದ ಮೇಲೆಯೂ ಕತೆ ಅರ್ಥ ಮಾಡಿಕೊಳ್ಳಲು ಕಷ್ಟವಾದೀತು. ಬಹುಶಃ ಇದೊಂದು ಪ್ರಯೋಗಾತ್ಮಕ ಕಿರುಚಿತ್ರವಾಗಿರುವುದೇ ಇದಕ್ಕೆ ಕಾರಣ ಇರಬಹುದು. ನಿರ್ದೇಶಕರ ಪ್ರಯತ್ನಕ್ಕೆ ಅನುಸಾರವಾಗಿ ಒಂದಷ್ಟು ಪ್ರಶಸ್ತಿಗಳು ಕೂಡ ಇದಕ್ಕೆ ಲಭ್ಯವಾಗಿವೆ.

Recommended For You

Leave a Reply

error: Content is protected !!