ಗಾಯಕಿ ಸುಷ್ಮಿತಾ ಆತ್ಮಹತ್ಯೆ

ಕನ್ನಡ ಚಿತ್ರರಂಗದ ಯುವ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಸ್ಪುರದ್ರೂಪಿ ಪ್ರತಿಭೆ ಸುಷ್ಮಿತಾ (26) ಇಂದು ಮುಂಜಾನೆ ಆತ್ಮಹತ್ಯೆಗೈದಿದ್ದಾರೆ.

ಮೃತ ಗಾಯಕಿ ಸುಷ್ಮಿತಾರ ಶವಪರೀಕ್ಷೆಯನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

ಆತ್ಮಹತ್ಯೆ ಮಾಡುವ ಸ್ವಲ್ಪ ಮೊದಲು ಸುಷ್ಮಿತಾ ತನ್ನ ತಾಯಿಗೆ ತೋರಿಸುವಂತೆ ತಮ್ಮನಿಗೆ ಕಳಿಸಲಾದ ವಾಟ್ಸ್ಯಾಪ್ ಸಂದೇಶವೊಂದು ಹೀಗಿದೆ.

“ಅಮ್ಮ ನನ್ನನ್ನು ಕ್ಷಮಿಸು. ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಾ ಇದ್ದೇನೆ. ನನಗೆ ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಚಿತ್ರಹಿಂಸೆ ಕೊಡುತ್ತಿದ್ದರು. ಮಾತೆತ್ತಿದ್ದರು ಮನೆ ಬಿಟ್ಟು ಹೋಗು ಅಂತಾ ಇದ್ದರು. ಮೆಂಟಲಿ ತುಂಬಾ ಹಿಂಸೆ ಆಗುತ್ತಿತ್ತು. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್ ವೈದೇಹಿ, ಗೀತಾ ನೇರವಾಗಿ ಕಾರಣವಾಗಿರುತ್ತಾರೆ. ಎಷ್ಟು ಬೇಡಿಕೊಂಡರೂ, ಕಾಲು ಹಿಡಿದರೂ ಅವನ ಮನಸು ಕರಗಲೇ ಇಲ್ಲ. ಅವರ ಮನೆಯಲ್ಲಿ ನನಗೆ ಸಾಯಲು ಇಷ್ಟ ಇರಲಿಲ್ಲ. ಮದುವೆಯಾದಾಗಿನಿಂದ ಇದೇ ರೀತಿ ಹಿಂಸೆ ಅಮ್ಮ. ಯಾರ ಹತ್ತಿರಾನೂ ಹೇಳಿಕೊಂಡಿರಲಿಲ್ಲ. ನನ್ನನ್ನು ನಮ್ಮ ಊರಿನಲ್ಲಿ ಮಣ್ಣು ಮಾಡು ಅಥವಾ ಸುಡು. ನನ್ನ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ಇಲ್ಲವಾದರೆ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ. ಅಮ್ಮ ಮಿಸ್ ಯು. ನಿನಗೋಸ್ಕರ ನನ್ನ ತಮ್ಮ ಸಚಿನ್ ಇದ್ದಾನೆ. ಅವನನ್ನ ಚೆನ್ನಾಗಿ ನೋಡಿಕೋ. ಮತ್ತೊಮ್ಮೆ ಕ್ಷಮೆಯಾಚಿಸುತ್ತಿದ್ದೇನೆ.
ಅಮ್ಮನಿಗೆ ತೋರಿಸು ಮರೆಯಬೇಡ.

ಇವಿಷ್ಟು‌ ಕೊನೆಯ ಸಂದೇಶ. ಸುಷ್ಮಿತಾ ಎಂಬಿಎ ಪದವೀಧರೆಯಾಗಿದ್ದು, ಚಿತ್ರಗೀತೆ, ಸುಗಮ ಸಂಗೀತ, ಭಾವಗೀತೆಗಳನ್ನು ಹಾಡುವ ಮೂಲಕ ಗುರುತಿಸಿಕೊಂಡಿದ್ದರು.

Recommended For You

Leave a Reply