
ನಟ ಶಿವರಾಜ್ ಕುಮಾರ್ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ ಬಳಿಕ ಭೇಟಿ ಮಾಡಲು ಗಣ್ಯರ ದಂಡೇ ಆಗಮಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಣ್ಣನನ್ನು ಭೇಟಿಯಾಗಿ ಕುಶಲ ವಿಚಾರಿಸಿದಂದೇ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಮತ್ತು ಬಳಗದವರು ಕೂಡ ಭೇಟಿ ಮಾಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾದ ನರಸಿಂಹಲು, ಮಾಜಿ ಅಧ್ಯಕ್ಷರಾದ ಸಾ.ರಾ ಗೋವಿಂದು, ಎನ್ ಎಂ ಸುರೇಶ್ ಹಾಗೂ ಪದಾಧಿಕಾರಿಗಳು ಶಿವರಾಜ್ ಕುಮಾರ್ ಅವರ ನಾಗವಾರದ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಶಿವಣ್ಣನ ಆರೋಗ್ಯದ ಬಗ್ಗೆ ಕುಶಲೋಪರಿ ನಡೆಸಿದ ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಈ ವರ್ಷದ ಕ್ಯಾಲೆಂಡರ್ ಅನ್ನು ಶಿವರಾಜಕುಮಾರ್ ಅವರಿಂದಲೇ ಬಿಡುಗಡೆ ಮಾಡಿಸಲಾಗಿದೆ.