
ಕೋಟಿ ಎನ್ನುವುದು ಈ ಸಿನಿಮಾಗೆ ಸಂಬಂಧಿಸಿ ಸಂಖ್ಯೆಯಷ್ಟೇ ಅಲ್ಲ. ನಾಯಕನ ಹೆಸರೂ ಹೌದು. ಟ್ರೈಲರ್ ಬಿಡುಗಡೆಯ ಬಳಿಕ ಮಾತನಾಡಿದ ಚಿತ್ರದ ನಾಯಕ ಧನಂಜಯ್ ಕೂಡ ಇದನ್ನೇ ಹೇಳಿದ್ದಾರೆ.ಕೋಟಿ ಪೂರ್ತಿ ಸೌತ್ ನಲ್ಲಿ ಮಾತ್ರವಲ್ಲ ಮುಂಬೈನಲ್ಲೂ ಸಿಗಲ್ಲ ಎನ್ನುವ ಸಂಭಾಷಣೆ ಟ್ರೈಲರ್ ನಲ್ಲಿದೆ. ಕೋಟಿಯಂಥ ವ್ಯಕ್ತಿ... Read more »

ಸೂಚನೆಯೇ ನೀಡದೆ ಕೇಂದ್ರ ಸರ್ಕಾರವು ಘೋಷಿಸಿದ ಲಾಕ್‌ಡೌನ್ ಏನೆಲ್ಲ ಪರಿಣಾಮ ಮಾಡಿತ್ತು? ಮುಖ್ಯವಾಗಿ ವಲಸೆ ಕಾರ್ಮಿಕರಿಗೆ ಎದುರಾದ ಕಷ್ಟಗಳೇನು ಎನ್ನುವುದನ್ನು ಪರದೆಗೆ ಇಳಿಸಿರುವ ಚಿತ್ರವೇ ಫೊಟೋ. ಈ ವಾರ ತೆರೆಕಾಣುತ್ತಿರುವ ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ ಉತ್ಸಾಹದಿಂದ ಮಾತು... Read more »

ಜನುಮದ ಜೋಡಿ, ದುನಿಯಾದಂಥ ಚಿತ್ರಗಳ ಮೂಲಕ ಜನ್ಮ ಪೂರ್ತಿ ಕೇಳುವಂಥ ಹಾಡುಗಳನ್ನು ನೀಡಿದವರು ವಿ ಮನೋಹರ್. ಪ್ರಶಸ್ತಿ, ಪ್ರಸಿದ್ಧಿ ಎಲ್ಲವನ್ನೂ ಪಡೆದಿರುವ ಈ ಸಂಗೀತ ನಿರ್ದೇಶಕರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಇವರು ಹೊಸದಾಗಿ ಒಪ್ಪಿಕೊಂಡಿರುವ ‘ಭಾವಪೂರ್ಣ’ ಚಿತ್ರ. ‘ಮದಿಪು’ ಎನ್ನುವ ಚಿತ್ರ... Read more »

ಪಿವಿಆರ್-ಇನಾಕ್ಸ್ ಇಂದಿನಿಂದ ಒಂದು ವಾರ (ಮೇ 19ರಿಂದ 25) ಕಾಲ ಹೊಸ ಆಫರ್ ಶುರು ಮಾಡಿದೆ. ಕನ್ನಡದ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೇವಲ 99 ರೂ.ಗಳಿಗೆ ತೋರಿಸುವುದಕ್ಕೆ ಮುಂದಾಗಿದೆ. ಈಗಾಗಲೇ ಒಮ್ಮೆ ಬಿಡುಗಡೆಯಾಗಿ ಹಿಟ್ ಆಗಿರುವ ‘ಕೆಜಿಎಫ್’, ‘ಗಂಧದ ಗುಡಿ’, ‘ರಾಜ್ಕುಮಾರ’, ‘ಯಜಮಾನ’, ‘ಗರುಡ ಗಮನ... Read more »

ಧನ್ಯಾ ರಾಮ್ ಕುಮಾರ್ ಮತ್ತೆ ಬಂದಿದ್ದಾರೆ. ಕಳೆದ ವಾರವಷ್ಟೇ ‘ಜಡ್ಜ್ ಮೆಂಟಲ್’ ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಧನ್ಯಾ ರಾಮ್ ಕುಮಾರ್. ಇದೀಗ ಮತ್ತೊಂದು ಹೊಸ ಚಿತ್ರ ‘ಎಲ್ಲಾ ನಿನಗಾಗಿ’ಗೂ ನಾಯಕಿಯಾಗಿದ್ದಾರೆ ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ‘ಎಲ್ಲಾ ನಿನಗಾಗಿ’ ಎನ್ನುವ... Read more »

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸದಾ ಯುವ ಚಿತ್ರತಂಡಕ್ಕೆ ಬಲವಾಗಿ ನಿಲ್ಲುತ್ತಾರೆ. ಶಿವಣ್ಣನ ಮಗಳು ನಿವೇದಿತಾ ಕೂಡ ಈಗ ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಮೂಲಕ ಮುತ್ತುರಾಜನ ಮೊಮ್ಮಗಳು ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲು... Read more »

ನಾಲ್ಕನೇ ವರ್ಷದ ಚಂದನವನ ಫಿಲ್ಮ್ ಕ್ರಿ ಟಿಕ್ಸ್ ಅಕಾಡೆಮಿ ಅವಾರ್ಡ್ ಮಾರ್ಚ್ 5 ರಂದು ಅದ್ಧೂರಿಯಾಗಿ ನೆರವೇರಲಿದೆ. ಇದರ ಪೂರ್ವಭಾವಿಯಾಗಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರಿನ ಪಟ್ಟಿ ಹಾಗೂ2023ನೇ ವರ್ಷದ ಟ್ರೋಫಿಯ ಅನಾವರಣಗೊಳಿಸಲಾಗಿದೆ. ಸಮಾರಂಭದಲ್ಲಿ ಅಗಲಿದ ನಟ ‘ಸಂಚಾರಿ ವಿಜಯ್’ ಹೆಸರಲ್ಲಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದು... Read more »

ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ ಕಾಲವಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮುಂಜಾನೆ 6.15ನಿಮಿಷಕ್ಕೆ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ದೊರೆ ಭಗವಾನ್ ಎನ್ನುವ ಜೋಡಿ ನಿರ್ದೇಶನ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿತ್ತು. ಇವರಿಬ್ಬರೂ ಜೊತೆಯಾಗಿ ಸಾಕಷ್ಟು ಸೂಪರ್ ಹಿಟ್... Read more »

ಕನ್ನಡ ಚಿತ್ರರಂಗದ ಯುವ ನಿರ್ದೇಶಕಿ ಮತ್ತು ನಟ ನಿಹಾಲ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಇಂದು ವಿವಾಹ ಸಮಾರಂಭ ನೆರವೇರಿತು. ನಟಿಯರಾದ ವಿನಯಾ ಪ್ರಸಾದ್, ಪ್ರಥಮಾ ಪ್ರಸಾದ್ ಸೇರಿದಂತೆ ಚಿತ್ರರಂಗದ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡು ಶುಭಕೋರಿದರು. ಫೆಬ್ರವರಿ... Read more »

ಕನ್ನಡದ ಪ್ರತಿಭೆಗಳು ಬಾಲಿವುಡ್ ಗೆ ಹೋಗುವುದು ಹೊಸತೇನಲ್ಲ. ಆದರೆ ಹಾಸನದ ಅಭಿನವ ಕಿರಣ್ ಅವಕಾಶ ಪಡೆದ ರೀತಿಯೇ ವಿಶೇಷ. ಅಭಿನವ ಕಿರಣ್ ಮೂಲತಃ ಹಾಸನದವರು. ಬಿ.ಕಾಮ್ ಮುಗಿಸಿ, ಬಿಎಡ್ ಮಾಡಿದ್ದಾರೆ.ಆದರೆ ಆಯ್ಕೆ ಮಾಡಿರುವ ಕ್ಷೇತ್ರವೇ ಬೇರೆ. ಶಾಲಾ ಕಾಲೇಜಿನಲ್ಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ... Read more »

ಕನ್ನಡದ ಯುವ ಗಾಯಕಿ ಶ್ವೇತಾ ದೇವನಹಳ್ಳಿ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದಾರೆ. ಕನ್ನಡದ ಪ್ರತಿಭಾವಂತ ಗಾಯಕಿ ಶ್ವೇತಾ ಮತ್ತು ಗುಜರಾತ್ ನ ಚೆಲುವ ಜೆನಿಲ್ ಪರ್ಮಾರ್ ವಿವಾಹ ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಜಲರಾಮ್ ಸಭಾಭವನದಲ್ಲಿ ಇಂದು ಶುಕ್ರವಾರ ನೆರವೇರಿತು. 2016ರಲ್ಲಿ ವಾಯ್ಸ್ ಇಂಡಿಯಾ... Read more »

ತಮಿಳುನಾಡಿನ ಚೆನ್ನೈನಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ(77) ವಿಧಿವಶರಾಗಿದ್ದಾರೆ. ಇವರ ಕಲಾ ಸೇವೆಗೆ ಇತ್ತೀಚೆಗಷ್ಟೇ ಪದ್ಮಭೂಷಣ ಪ್ರಶಸ್ತಿ ಘೋಷಿಸಿ ಗೌರವಿಸಲಾಗಿತ್ತು. ದುರಂತ ಎನ್ನುವಂತೆ ಪ್ರಶಸ್ತಿ ಪಡೆಯುವ ಮೊದಲೇ ಮನೆಯಲ್ಲಿ ಕುಸಿದು ಸಾವನ್ನಪ್ಪಿದ್ದಾರೆ. ವಾಣಿ ಜಯರಾಂ ತಮಿಳು ನಾಡಿನಲ್ಲಿ ಹುಟ್ಟಿ ಬೆಳೆದ ಗಾಯಕಿಯಾದರೂ ಕನ್ನಡ... Read more »

ಕಾಂತಾರದ ಬಳಿಕ ರಿಷಬ್ ಶೆಟ್ಟಿಗೆ ಭರ್ಜರಿ ಆಫರ್ ಗಳ ಸುರಿಮಳೆಯಾಗುತ್ತಿದೆ. ಆದರೆ ರಿಷಬ್ ಮಾತ್ರ ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವುದು ಸತ್ಯದ ಸಂಗತಿ. ಮೋಹನ್ ಲಾಲ್ ನಿಂದ ಆಫರ್! ಮಾಲಿವುಡ್ ನಟ ಮೋಹನ್ ಲಾಲ್ ದೇಶದಲ್ಲೇ ಶ್ರೇಷ್ಠ ನಟ ಎಂದು ಗುರುತಿಸಿಕೊಂಡವರು. 300ಕ್ಕೂ... Read more »

ಕಿಚ್ಚ ಸುದೀಪ್ ಕನಸಿನ ಕೂಸು KCC (ಕನ್ನಡ ಚಲನಚಿತ್ರ ಕಪ್) ತಂಡಗಳ ರಚನೆ ಮಾಡಲಾಗಿದೆ. 6 ಆಕರ್ಷಕ ತಂಡಗಳ ರಚನೆಯಾಗಿವೆ. ಫೆಬ್ರವರಿ 24 ಮತ್ತು 25ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾವಳಿ ನೆರವೇರಲಿದೆ. ನಿರ್ದೇಶಕ ನಂದ ಕಿಶೋರ್ ಮೆಂಟರ್ ಆಗಿರುವ ತಂಡಕ್ಕೆ ‘ಹೊಯ್ಸಳ... Read more »

ಹಿರಿಯ ನಟ ಲಕ್ಷ್ಮಣ್ (74) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಮುಂಜಾನೆ ಎದೆ ನೋವಿನಿಂದ ಬಳಲುತ್ತಿದ್ದ ಲಕ್ಷ್ಮಣ್ ಅವರನ್ನು ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಖಳನಟನಾಗಿರುವ ಲಕ್ಷ್ಮಣ್ ಇದುವರೆಗೆ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.... Read more »

ಕನ್ನಡದ ಯುವ ನಟರಲ್ಲಿ ಭರವಸೆ ಮೂಡಿಸಿದ್ದ ಧನುಷ್ ಯಾನೇ ಮುತ್ತುರಾಜ್ ನಿಧನರಾಗಿದ್ದಾರೆ. ದಿಢೀರ್ ಅನಾರೋಗ್ಯದಿಂದ ಇವರ ಸಾವಾಗಿದೆ. ಯುವನಟ ಧನುಷ್ ನಟ ಮಾತ್ರವಲ್ಲ, ಕತೆ, ಚಿತ್ರಕತೆ, ಸಂಭಾಷಣೆ, ಹಾಡು ಬರೆದು ನಿರ್ದೇಶಿಸಿ ಬಹುಮುಖ ಪ್ರತಿಭೆ ಎನಿಸಿದ್ದರು. ಪ್ಯಾರ್ ಕ ಗೋಲ್ ಗುಂಬಜ್ ಸಿನಿಮಾ ಅದಕ್ಕೊಂದು... Read more »

ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ ಗೌರಿ. ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಬರ್ಕಾ ಬಿಸ್ಟ್ ಎನ್ನುವ ನಟಿಯನ್ನು ಪರಿಚಯಿಸಲಾಗಿತ್ತು. ಆದರೆ ಇದೀಗ ಬರ್ಕಾ ಬದಲಿಗೆ ಅಪೂರ್ವ ಎಂಟ್ರಿಯಾಗಿದ್ದಾರೆ. ಮೈಸೂರಿನ ಚೆಲುವೆಗೆ ಎಂದು ಹೆಸರಿಟ್ಟು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕ್ರೇಜಿಸ್ಟಾರ್ ಅವರಿಗೇನೇ ಸಲ್ಲುತ್ತದೆ. 2016ರಲ್ಲಿ... Read more »

ಚಲನಚಿತ್ರ ಪತ್ರಕರ್ತರ ಬೆಂಬಲ ಇರದಿದ್ದರೆ ನಾವು ಈ ಮಟ್ಟಕ್ಕೇರಲು ಸಾಧ್ಯವಾಗುತ್ತಿರಲಿಲ್ಲ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಕೃತಜ್ಞತೆ ಸೂಚಿಸಿದರು. ಅವರು ‘ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. “ಕನ್ನಡದಲ್ಲಿ ಹೊಸ ಅಲೆಯ ಸಿನಿಮಾಗಳು ಬೆಳೆಯಲು ಸರ್ಕಾರದಿಂದ ಸಿಗುವ ಸಬ್ಸಿಡಿಯಷ್ಟೇ... Read more »

777 ಚಾರ್ಲಿ ಚಿತ್ರದ ಶ್ರೇಷ್ಠ ನಿರ್ದೇಶನಕ್ಕಾಗಿ ನವ ಯುವ ನಿರ್ದೇಶಕ ಕಿರಣ್ ರಾಜ್ ಅವರಿಗೆ ಪ್ರಶಸ್ತಿ ಲಭಿಸಿದೆ. ರಾಘವೇಂದ್ರ ಚಿತ್ರವಾಣಿ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ಸಮಾರಂಭವು ಇದೇ ಜನವರಿ 25ರಂದು ನೆರವೇರಲಿದೆ. ರಕ್ಷಿತ್ ಶೆಟ್ಟಿ ನಟನೆಯ 777ಚಾರ್ಲಿ ಸಿನಿಮಾ ಕಳೆದ ವರ್ಷದ ಹಿಟ್... Read more »

ಕರಿ ಹೈದ ಕರಿ ಅಜ್ಜ ಚಿತ್ರದಲ್ಲಿ ಹಿರಿಯ ನಟಿ ಭವ್ಯಾ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲಿ ಅವರು ಮಂಗಳೂರು ಕರಾವಳಿಯ ಪಂಜ ಎನ್ನುವಲ್ಲಿಗೆ ರಾಣಿಯಾಗಿ ಕಾಣಿಸಿದ್ದಾರೆ. ಪಂಜದ ತಾಯಿ ಎನ್ನುವ ಕಾರಣದಿಂದ ಪಂಜಂತಾಯಿ ಎಂದು ಕರೆಸಿಕೊಳ್ಳುವ ರಾಣಿ. ಈ ಪಾತ್ರವಾಗಿ ನಟಿಸುವಾಗ ಭವ್ಯಾ... Read more »