ಹೆಣ್ಣುಮಗುವಿಗೆ ತಾಯಿಯಾದ ಭಾವನಾ

ನಟಿ ಭಾವನ ರಾಮಣ್ಣ ಗೆ ಹೆರಿಗೆಯಾಗಿದೆ. ಎರಡು ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಿದ್ದ ಭಾವನಾ ದುರದೃಷ್ಟವಶಾತ್ ಒಂದು ಮಗುವನ್ನು ಕಳೆದುಕೊಂಡಿದ್ದಾರೆ. ಆದರೆ ಹೆಣ್ಣು ಮಗು ಬೇಕು ಎನ್ನುವ ತಮ್ಮ ಕನಸಿನಂತೆ ಸುಪುತ್ರಿಗೆ ತಾಯಿಯಾಗಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಭಾವನಾ ರಾಮಣ್ಣ ಅಂದರೆ ಎಲ್ಲರಿಗೂ ಗೊತ್ತು. ಆದರೆ ವಿವಾಹವಾಗದೇ, ದಾಂಪತ್ಯವಿಲ್ಲದೆ ಐವಿಎಫ್ ಮೂಲಕ‌ ತಾಯಿಯಾಗುವ ನಿರ್ಧಾರ ಮಾಡಿದ್ದು ಮಾತ್ರ ಎಲ್ಲರಿಗೂ ಅಚ್ಚರಿ ನೀಡಿತ್ತು. ಕನ್ನಡ ಚಿತ್ರರಂಗದಲ್ಲಿ ಯಾವ ನಟಿಯೂ ತೆಗೆದುಕೊಂಡಿರದ ತೀರ್ಮಾನವನ್ನು ಭಾವನ ತೆಗೆದುಕೊಂಡಿದ್ದರು. ಹೀಗಾಗಿಯೇ ಭಾವನಾರ ತಾಯಿಯಾಗುವ ಕನಸಿಗೆ ಎಲ್ಲರಿಂದಲೂ ಶುಭಹಾರೈಕೆಯಾಗಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಭಾವನಾ ತಾಯಿಯಾಗುತ್ತಾರೆ ಎಂದು ವೈದ್ಯರು‌ ದಿನಾಂಕ‌ವನ್ನೂ ನಿಗದಿ ಮಾಡಿದ್ದರು. ಆದರೆ ಹೊಟ್ಟೆಯೊಳಗಿದ್ದ ಒಂದು ಮಗುವಿನಲ್ಲಿ ಏಳು ತಿಂಗಳಿಗೇನೇ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದಾಗಿ ವೈದ್ಯರು 8ನೇ ತಿಂಗಳಲ್ಲೇ ಹೆರಿಗೆ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ಎರಡು ವಾರಗಳ‌ ಹಿಂದೆ ಪ್ರಸೂತಿ ನಡೆದಿದ್ದು ಒಂದು ಮಗು ಮೃತಗೊಂಡಿತ್ತು. ಮತ್ತೊಂದು ಹೆಣ್ಣು‌ಮಗುವನ್ನು ಭಾವನಾ ಸುಸೂತ್ರವಾಗಿ ಹೆತ್ತು ಕ್ಷೇಮವಾಗಿದ್ದಾರೆ. ಕೊನೆಗೂ ಭಾವನಾ ತಾಯಿಯಾಗುವ ಕನಸು ನನಸಾಗಿದ್ದಕ್ಕಾಗಿ ಚಂದನವನದ ಮಂದಿ ಕೂಡ ಖುಷಿಯಾಗಿದ್ದಾರೆ.

Recommended For You

Leave a Reply

error: Content is protected !!