‘ಸರೋಜಾ ದೇವಿ’ ಪ್ರಶಸ್ತಿಗೆ ತಾರಾಗ್ರಹ

ಇತ್ತೀಚೆಗಷ್ಟೇ ನಿಧನರಾದ ಕನ್ನಡದ ಹಿರಿಯ ನಟಿ ಬಿ ಸರೋಜಾದೇವಿ. ಇವರ ಹೆಸರಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಿಸುವಂತೆ ನಟಿ, ರಾಜಕಾರಣಿ ತಾರಾ ಅನುರಾಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ನೀಡಿದ್ದಾರೆ. ತಾರಾ ನೀಡಿರುವ ಮನವಿಯಲ್ಲಿ “ಈಗಾಗಲೇ ಕನ್ನಡ ಚಿತ್ರರಂಗದ ಪ್ರತಿಭೆಗಳಿಗೆ ರಾಜ್ಯ ಪ್ರಶಸ್ತಿಗಳನ್ನು ಚಿತ್ರರಂಗದ ಕೆಲವು... Read more »

ಭಕ್ತ ಪ್ರಹ್ಲಾದದ ಸ್ಫೂರ್ತಿಯಲ್ಲಿ ‘ಮಹಾವತಾರ್ ನರ್ ಸಿಂಹ’

‘ಮಹಾವತಾರ್ ನರ್ ಸಿಂಹ’ ಹೆಸರು ಕೇಳಿ ಇದು ಯಾವ ಭಾಷೆಯ ಸಿನಿಮಾ ಎಂದು ಮೂಗು ಮುರಿಯಬೇಡಿ. ಖಂಡಿತವಾಗಿ ಇದು ಕನ್ನಡದ್ದೇ ಸಿನಿಮಾ. ಖ್ಯಾತ ನಿರ್ಮಾಣ ಸಂಸ್ಥೆ ಪ್ರಸ್ತುತ‌ ಪಡಿಸುತ್ತಿರುವ ಈ ಚಿತ್ರ ಮೂಲತಃ ಹಿಂದಿಯಲ್ಲಿ ತಯಾರಾದಂಥ ಅನಿಮೇಷನ್‌ ಚಿತ್ರ. ಇದೇ ಕಾರಣದಿಂದಲೇ ಹಿಂದಿಯ ಉಚ್ಚಾರಣೆಗೆ... Read more »

ಕಾಂತಾರದ ಹೆಸರಲ್ಲಿ ಅಪಪ್ರಚಾರ.. ರಿಷಬ್ ತಂಡದ ಪ್ರತಿಕ್ರಿಯೆ ಏನು?

ಕಾಂತಾರ ಕನ್ನಡಿಗರ ಅಭಿಮಾನದ ಚಿತ್ರ. ಆದರೆ ಕರಾವಳಿಯ ಒಂದಷ್ಟು ದೈವಾರಾಧಕರು ಮಾತ್ರ ಈ ಚಿತ್ರದಲ್ಲಿ ದೈವವನ್ನು ಬಳಸಿಕೊಂಡಿದ್ದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಸಾಕಷ್ಟು ಮಂದಿ ಕರಾವಳಿಗರೇ, ನಮ್ಮ ದೈವದ ಶಕ್ತಿಯನ್ನು ತೋರಿಸುವ ಚಿತ್ರ ಮಾಡಿದ್ದಕ್ಕಾಗಿ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಆದರೆ ಆಕ್ರೋಶ ವ್ಯಕ್ತಪಡಿಸಿದವರು... Read more »

ಮೇಘಶ್ರೀ ತಂಡಕ್ಕೆ ಒಲಿದ ವಿಜಯದ ಕಿರೀಟ

ಮೇಘ ಎನ್ನುವ ಹೆಸರು ಕನ್ನಡ ಚಿತ್ರರಂಗದ ಹಲವು ನಟಿಯರಿಗಿದೆ. ಆದರೆ ಇವರ್ಯಾರ ಹೆಸರಲ್ಲೂ ಇರದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಮೇಘಶ್ರೀ ತೀರ್ಥಹಳ್ಳಿ. ಮೊದಲ ಕನ್ನಡ ‘ಕ್ವೀನ್ಸ್ ಬೌಲಿಂಗ್ ಟೂರ್ನಮೆಂಟ್’ ನಲ್ಲಿ ಮೇಘಶ್ರೀ ನಾಯಕತ್ವದ ತಂಡ ಕಪ್ ಗೆದ್ದಿದೆ. ಮಾರ್ಚ್ 14ರಂದು ಶುಕ್ರವಾರ ಕನ್ನಡ ಚಿತ್ರರಂಗದ ಮೊದಲ... Read more »

‘ರಂಗಸೌರಭ’ ದಿಂದ 6 ದಿನಗಳ ರಂಗಸ್ಫರ್ಧೆ; ದಶ ದಿನಗಳ ರಾಜ್ಯ ಮಟ್ಟದ ರಂಗೋತ್ಸವ

ಕರ್ನಾಟಕದ ಹೆಮ್ಮೆಯ ರಂಗ ತಂಡ ‘ರಂಗ ಸೌರಭ’ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯನ್ನು ಏರ್ಪಡಿಸಿದೆ. ಫೆಬ್ರವರಿ 18 ರಿಂದ ಮಾರ್ಚ್ 1ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಸ್ಪರ್ಧೆ ಆಯೋಜಿತಗೊಂಡಿದ್ದು, ಹಿರಿಯ ಚಿತ್ರನಟ ಅನಂತ್​ನಾಗ್ ಉದ್ಘಾಟನೆ ನಡೆಸಲಿದ್ದಾರೆ. ಬೆಂಗಳೂರಿನ... Read more »

‘ಕಣ್ಣಪ್ಪ’ ಆಡಿಯೋ ಲಾಂಚ್​ನಲ್ಲಿ ಸುಮಲತಾ, ಭಾರತಿ ಅತಿಥಿ ಸ್ಥಾನದಲ್ಲಿ

ಕಣ್ಣಪ್ಪ ಚಿತ್ರದ ವಸ್ತು ಕನ್ನಡದಲ್ಲಿ ಡಾ.ರಾಜ್ ಕುಮಾರ್ ಪ್ರಥಮ ಚಿತ್ರ ಎಂದೇ ಗುರುತಿಸಲಾದ ಬೇಡರ ಕಣ್ಣಪ್ಪ ಚಿತ್ರದ್ದಾಗಿದೆ. ಬೇಡರ ಕಣ್ಣಪ್ಪ ಚಿತ್ರ ಮಾತ್ರವಲ್ಲ, ಚಿತ್ರದ ಹಾಡು “ಶಿವಪ್ಪ ಕಾಯೋ ತಂದೇ..” ಇಂದಿಗೂ ಜನಪ್ರಿಯ. ಹೀಗಾಗಿಯೇ ಹೊಸದೊಂದು ಕಣ್ಣಪ್ಪ ಸಿನಿಮಾ ಬಂದಾಗ ಕನ್ನಡಿಗರ ಮನಗೆಲ್ಲುವುದು ಸವಾಲಿನ... Read more »

‘ನಾಗವಲ್ಲಿ ಬಂಗಲೆ’ ಫೆಬ್ರವರಿಯಲ್ಲಿ ತೆರೆಗೆ!

ನಾಗವಲ್ಲಿ ಎನ್ನುವ ಹೆಸರು ಕೇಳಿದರೆ ಆಪ್ತಮಿತ್ರ ಸಿನಿಮಾ ನೆನಪಾಗಲೇಬೇಕು. ಆಪ್ತಮಿತ್ರ ಎಂದಮೇಲೆ ಸಾಹಸ ಸಿಂಹ ವಿಷ್ಣುವರ್ಧನ್, ರಮೇಶ್ ಅರವಿಂದ್ , ನಾಗವಲ್ಲಿ ಸೌಂದರ್ಯ, ಅವಿನಾಶ್ ಮತ್ತು ಈ ಪಾತ್ರಗಳ ಜೊತೆಯಲ್ಲೇ ನೆನಪಾಗುವುದು ನಾಗವಲ್ಲಿ ಸೇರಿದ್ದ ಕಟ್ಟಡ. ಈಗ ಅದೇ ಕಟ್ಟಡದ ಹೆಸರಿಟ್ಟುಕೊಂಡು ತೆರೆಗೆ ಸಿದ್ಧವಾಗಿರುವ... Read more »

ಶಿವಣ್ಣನಿಂದ ವಾಣಿಜ್ಯ ಮಂಡಳಿಯ ಕ್ಯಾಲೆಂಡರ್ ರಿಲೀಸ್

ನಟ ಶಿವರಾಜ್ ಕುಮಾರ್ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ ಬಳಿಕ ಭೇಟಿ ಮಾಡಲು ಗಣ್ಯರ ದಂಡೇ ಆಗಮಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಣ್ಣನನ್ನು ಭೇಟಿಯಾಗಿ ಕುಶಲ ವಿಚಾರಿಸಿದಂದೇ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಮತ್ತು ಬಳಗದವರು ಕೂಡ ಭೇಟಿ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ... Read more »

ಛೂ ಮಂತರ್: ಮಂತ್ರವಿಲ್ಲ, ಮಾಯೆ ಇಲ್ಲ ಮೋಡಿಗಾಗಿ ನೋಡಿ

ಚಿತ್ರ: ಛೂ ಮಂತರ್ನಿರ್ದೇಶನ: ನವನೀತ್ನಿರ್ಮಾಣ: ತರುಣ್ ಶಿವಪ್ಪತಾರಾಗಣ: ಶರಣ್, ಅದಿತಿ ಪ್ರಭುದೇವ, ಚಿಕ್ಕಣ್ಣ ಮೊದಲಾದವರು ಛೂ ಮಂತರ್ ಹೆಸರೇ ಹೇಳುವಂತೆ ಮಂತ್ರ ತಂತ್ರಗಳ‌ ಕತೆ. ಶರಣ್ ಗೆ ಈ ಪಾತ್ರ ಹೊಸದೇನಲ್ಲ. ಆದರೆ ಸಾಧ್ಯವಾದ ಮಟ್ಟಿಗೆ ಹೊಸ ಬಗೆಯಲ್ಲಿ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.... Read more »

‘ಪಿನಾಕ’ ಗೋಲ್ಡನ್​ ಸ್ಟಾರ್ ಗಣೇಶ್ ಟೀಸರ್ ಹೇಗಿದೆ?

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಹೊಸ ಚಿತ್ರ ‘ಪಿನಾಕ’ದ ಟೀಸರ್ ರಿಲೀಸಾಗಿದೆ. ‘ಮುಂಗಾರು ಮಳೆ’ಯ ಮೂಲಕ ಸ್ಟಾರ್ ನಟನಾದ ಗಣೇಶ್, ಈ ಬಾರಿ ಮಳೆಯಿಂದ ದೂರಾಗಿ ಬೆಂಕಿಯೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಪಿನಾಕ ಅಂದರೆ ಶಿವನ ಆಯುಧ ಎನ್ನುವ ಅರ್ಥ ಇದೆ. ಸೌಮ್ಯ ಸ್ವಭಾವದ ಗಣೇಶ ಇಲ್ಲಿ... Read more »

ವ್ಯಾಲಂಟೈನ್ ಡೇ ಗೆ’ಭುವನಂ ಗಗನಂ’ ಪ್ರದರ್ಶನಂ!

ಪುನೀತ್ ರಾಜ್ ಕುಮಾರ್ ನಟನೆ ವಂಶಿ ಚಿತ್ರದ ಜನಪ್ರಿಯ ಗೀತೆ ‘ಭುವನಂ ಗಗನಂ..’ ಎಂದು ಆರಂಭವಾಗುತ್ತದೆ‌. ಇದೀಗ ಅದೇ ಸಾಲನ್ನೇ ಹೆಸರಾಗಿಸಿಕೊಂಡು ಚಿತ್ರವೊಂದು ತಯಾರಾಗಿದೆ. ಕನ್ನಡದ ಯುವನಟರು ಪ್ರಧಾನ ಪಾತ್ರದಲ್ಲಿರುವ ಈ ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ತೆರೆಕಾಣಲಿದೆ. ಎಸ್‌ವಿಸಿ ಫಿಲ್ಮ್ಸ್ ಬ್ಯಾನರ್‌ನಡಿ... Read more »

ವಿ.ಮನೋಹರ್ ಸಂಗೀತದ 150ನೇ ಚಿತ್ರದ ಹಾಡು ರಿಲೀಸ್

ವಿ ಮನೋಹರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿ 4 ದಶಕಗಳಾಗಿವೆ. ಎಸ್​ಪಿ ಬಾಲಸುಬ್ರಹ್ಮಣ್ಯಂಗೆ ಮೊದಲ ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಗಳಿಸಿಕೊಟ್ಟ ಹಾಡಿಗೆ ಸಂಗೀತ ನಿರ್ದೇಶಕ ಇವರೇ. ಓ ಮಲ್ಲಿಗೆ ಚಿತ್ರದಲ್ಲಿನ ಮುದ್ದಾದ ಬಲೆ ಹೆಣೆದ ಹಾಡಿನ ಮೂಲಕ ಮನೋಹರ್ ಈ ಸಾಧನೆ ಮಾಡಿದ್ದರು.... Read more »

ಕ್ಯಾನ್ಸರ್ ಗೆದ್ದ ಶಿವಣ್ಣನ ಭರವಸೆಯ ಸಂದೇಶ

ಅಮೆರಿಕಾದ ಫ್ಲೋರಿಡಾದಲ್ಲಿ ಚಿಕಿತ್ಸೆಯಲ್ಲಿರುವ ಶಿವರಾಜ್​ಕುಮಾರ್​ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಖುದ್ದು ಶಿವಣ್ಣ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹೊಸ ವರ್ಷದಂದು ಶಿವಣ್ಣ ಕಳಿಸಿರುವ ವಿಡಿಯೋ ಸಂದೇಶದಲ್ಲಿ ಕ್ಯಾನ್ಸರ್​ನಿಂದ ಪೂರ್ತಿಯಾಗಿ ಗುಣಮುಖರಾಗಿದ್ದಾಗಿ ಹೇಳಿದ್ದಾರೆ. ಶಿವಣ್ಣ ಜತೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಜತೆಯಲ್ಲೇ ಕುಳಿತು... Read more »

ಮರಿ ಟೈಗರ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾ ಆನಂದ್

ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿರುವ ಹೊಸ ಚಿತ್ರ ‘ಬಲರಾಮನ ದಿನಗಳು’. ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅದ್ದೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆ‌.ಎಂ.ಚೈತನ್ಯ ನಿರ್ದೇಶಕರು. ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಜಕುಮಾರ,... Read more »

‘ಕೋಟಿ’ ಮಾತನಾಡುವ ಟ್ರೈಲರ್

ಕೋಟಿ ಎನ್ನುವುದು ಈ ಸಿನಿಮಾಗೆ ಸಂಬಂಧಿಸಿ ಸಂಖ್ಯೆಯಷ್ಟೇ ಅಲ್ಲ. ನಾಯಕನ ಹೆಸರೂ ಹೌದು. ಟ್ರೈಲರ್ ಬಿಡುಗಡೆಯ ಬಳಿಕ ಮಾತನಾಡಿದ ಚಿತ್ರದ ನಾಯಕ ಧನಂಜಯ್ ಕೂಡ ಇದನ್ನೇ ಹೇಳಿದ್ದಾರೆ.ಕೋಟಿ ಪೂರ್ತಿ ಸೌತ್ ನಲ್ಲಿ ಮಾತ್ರವಲ್ಲ ಮುಂಬೈನಲ್ಲೂ ಸಿಗಲ್ಲ ಎನ್ನುವ ಸಂಭಾಷಣೆ ಟ್ರೈಲರ್ ನಲ್ಲಿದೆ. ಕೋಟಿಯಂಥ ವ್ಯಕ್ತಿ... Read more »

‘ಕಲ್ಕಿ 2898 AD’ ಇದೀಗ ಅಮೆಜಾನ್ ನಲ್ಲಿ..!

ದೇಶದಲ್ಲೇ ದುಬಾರಿ ಬಂಡವಾಳ ಹಾಕಿ ನಿರ್ಮಾಣಗೊಂಡಿರುವ ಚಿತ್ರ, ಪ್ರಭಾಸ್ ನಾಯಕತ್ವದ ಕಲ್ಕಿ 2898 ಎ ಡಿ. ಇಂಥದೊಂದು ಚಿತ್ರವನ್ನು ರಿಲೀಸ್ ಗೂ ಮೊದಲು ಅಮೆಜಾನ್ ನಲ್ಲಿ ಯಾಕೆ ರಿಲೀಸ್ ಮಾಡುತ್ತಾರೆ ಎನ್ನುವ ಸಂದೇಹ ಸಹಜ. ಆದರೆ ಅಮೆಜಾನ್ ನಲ್ಲಿ ರಿಲೀಸಾಗುತ್ತಿರುವುದು ಕಲ್ಕಿಯ ಎರಡು ಪಾತ್ರಗಳ... Read more »

ಪ್ರಕಾಶ್ ರಾಜ್ ಮಾತು ಮರೆಸಿದ ಫೊಟೊ ಈ ವಾರ ರಿಲೀಸ್

ಸೂಚನೆಯೇ ನೀಡದೆ ಕೇಂದ್ರ ಸರ್ಕಾರವು ಘೋಷಿಸಿದ ಲಾಕ್‌ಡೌನ್‌‌ ಏನೆಲ್ಲ ಪರಿಣಾಮ‌ ಮಾಡಿತ್ತು? ಮುಖ್ಯವಾಗಿ ವಲಸೆ ಕಾರ್ಮಿಕರಿಗೆ ಎದುರಾದ ಕಷ್ಟಗಳೇನು ಎನ್ನುವುದನ್ನು ಪರದೆಗೆ ಇಳಿಸಿರುವ ಚಿತ್ರವೇ ಫೊಟೋ. ಈ ವಾರ ತೆರೆಕಾಣುತ್ತಿರುವ ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ ಉತ್ಸಾಹದಿಂದ ಮಾತು... Read more »

ಸಂಗೀತ ನಿರ್ದೇಶಕರನ್ನು ಕಾಡಿದ ಚೇತನ್ ಮುಂಡಾಡಿ!

ಜನುಮದ ಜೋಡಿ, ದುನಿಯಾದಂಥ ಚಿತ್ರಗಳ ಮೂಲಕ ಜನ್ಮ ಪೂರ್ತಿ ಕೇಳುವಂಥ ಹಾಡುಗಳನ್ನು ನೀಡಿದವರು ವಿ ಮನೋಹರ್. ಪ್ರಶಸ್ತಿ, ಪ್ರಸಿದ್ಧಿ ಎಲ್ಲವನ್ನೂ ಪಡೆದಿರುವ ಈ ಸಂಗೀತ ನಿರ್ದೇಶಕರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಇವರು ಹೊಸದಾಗಿ ಒಪ್ಪಿಕೊಂಡಿರುವ ‘ಭಾವಪೂರ್ಣ’ ಚಿತ್ರ. ‘ಮದಿಪು’ ಎನ್ನುವ ಚಿತ್ರ... Read more »

ಹಳಬರು ಬರುತ್ತಿಲ್ಲ; ಹೊಸಬರನ್ನು ಕೇಳುವವರಿಲ್ಲ …!

ಪಿವಿಆರ್-ಇನಾಕ್ಸ್ ಇಂದಿನಿಂದ ಒಂದು ವಾರ (ಮೇ 19ರಿಂದ 25) ಕಾಲ ಹೊಸ ಆಫರ್ ಶುರು ಮಾಡಿದೆ. ಕನ್ನಡದ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೇವಲ 99 ರೂ.ಗಳಿಗೆ ತೋರಿಸುವುದಕ್ಕೆ ಮುಂದಾಗಿದೆ. ಈಗಾಗಲೇ ಒಮ್ಮೆ ಬಿಡುಗಡೆಯಾಗಿ ಹಿಟ್ ಆಗಿರುವ ‘ಕೆಜಿಎಫ್’, ‘ಗಂಧದ ಗುಡಿ’, ‘ರಾಜ್ಕುಮಾರ’, ‘ಯಜಮಾನ’, ‘ಗರುಡ ಗಮನ... Read more »

‘ಎಲ್ಲಾ ನಿನಗಾಗಿ’ ಧನ್ಯ..!

ಧನ್ಯಾ ರಾಮ್ ಕುಮಾರ್ ಮತ್ತೆ ಬಂದಿದ್ದಾರೆ. ಕಳೆದ ವಾರವಷ್ಟೇ ‘ಜಡ್ಜ್ ಮೆಂಟಲ್’ ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಧನ್ಯಾ ರಾಮ್ ಕುಮಾರ್. ಇದೀಗ ಮತ್ತೊಂದು ಹೊಸ ಚಿತ್ರ ‘ಎಲ್ಲಾ ನಿನಗಾಗಿ’ಗೂ ನಾಯಕಿಯಾಗಿದ್ದಾರೆ‌ ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ‘ಎಲ್ಲಾ ನಿನಗಾಗಿ’ ಎನ್ನುವ... Read more »

ಚಿತ್ರ ನಿರ್ಮಾಣದತ್ತ ಶಿವಣ್ಣನ ಮಗಳು ನಿವೇದಿತಾ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸದಾ ಯುವ ಚಿತ್ರತಂಡಕ್ಕೆ ಬಲವಾಗಿ ನಿಲ್ಲುತ್ತಾರೆ. ಶಿವಣ್ಣನ ಮಗಳು ನಿವೇದಿತಾ ಕೂಡ ಈಗ ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಮೂಲಕ ಮುತ್ತುರಾಜನ ಮೊಮ್ಮಗಳು ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲು... Read more »