ಅಪರೂಪದ ಚಿತ್ರ ‘ಅಪೊಕ್ಯಾಲಿಪ್ಟೊ’

ಈ ಬಾರಿ ಹಳೆಯದೊಂದು ಹಾಲಿವುಡ್ ಸಿನಿಮಾದ ವಿಮರ್ಶೆಯನ್ನು ನೀಡುತ್ತಿದ್ದೇವೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬರಹಗಳ‌ ಮೂಲಕ ಜನಪ್ರಿಯರಾಗಿರುವ ಚೇತನ್ ಶಶಿ ಬರೆದಿದ್ದಾರೆ.

ಜಗತ್ತಿನ ಶೇಕಡ 98ರಷ್ಟು ಜನರಿಗೆ ಇಂತಹದ್ದೊಂದು ಭಾಷೆ ಅಸ್ತಿತ್ವದಲ್ಲಿದೆ ಅನ್ನೋದೆ ಗೊತ್ತಿರಲಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಇರೋ ಭಾಷೆಯಲ್ಲಿ, ಅದೂ ಕೂಡ ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಸಿನಿಮಾ ಮಾಡಿ ಪ್ರಪಂಚದಾದ್ಯಂತ ಅದೇ ಭಾಷೆಯಲ್ಲಿ ರಿಲೀಸ್ ಮಾಡಿ ಇತಿಹಾಸ ಸೃಷ್ಟಿಸೋದು ಅಂದ್ರೆ ಅದು ತಮಾಷೆಯ ವಿಷಯವೇ ಅಲ್ಲ.

ಅಪೋಕ್ಯಾಲಿಪ್ಟೋ ಮೂಲತಃ ಹಾಲಿವುಡ್ ಸಿನಿಮಾ, ಹಾಲಿವುಡ್ ಅಂದ್ರೆ ಅದು ಇಂಗ್ಲೀಷ್ ಭಾಷೆಯಲ್ಲಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೊ ವಿಚಾರ. ಆದರೆ ಈ ಅಪೋಕ್ಯಾಲಿಪ್ಟೋ ಸಿನಿಮಾ ಸಂಪೂರ್ಣವಾಗಿ ಮಯಾ ಭಾಷೆಯಲ್ಲಿದೆ. ಮಾಯನ್ ನಾಗರೀಕತೆಯಲ್ಲಿ ಅಮೇರಿಕಾದ ಆದಿವಾಸಿಗಳು ಬಳಸುತ್ತಿದ್ದ ಭಾಷೆಯಿದು. ಇಂದು ಈ ಭಾಷೆಯನ್ನ ಕೆನಡಾ ಪ್ರಾಂತ್ಯದಲ್ಲಿ ಅಲ್ಲಿನ ಮೂಲನಿವಾಸಿಗಳು ಬಳಸುತ್ತಾರೆ ಆದರೆ ಅದು ಮಾಯನ್ ನಾಗರೀಕತೆಯ ಭಾಷೆಗೆ ಹೋಲಿಸಿದರೆ ಬಹುತೇಕ ಮಾರ್ಪಾಡಾಗಿದೆ. ಇಂತಹ ಅರ್ಥವಾಗದ ಹಳೆಯ ಮಯಾ ಭಾಷೆ ಬಳಸಿ ಹಾಲಿವುಡ್ ಸಿನಿಮಾ ಮಾಡಿ ಗೆಲ್ಲೋದು ಅಂದ್ರೆ ನಿಜಕ್ಕೂ ಎರಡೆರಡು ಗುಂಡಿಗೆ ಬೇಕು. ಭಾಷೆ ಬಾರದವರಿಗೂ ಈ ಸಿನಿಮಾ ಇಷ್ಟವಾಗುತ್ತೆ ಅಂದ್ರೆ… ಒಂದು ಸಿನಿಮಾ ಪ್ರೇಕ್ಷಕನನ್ನು ತನ್ನತ್ತ ಸೆಳೆಯೋದಕ್ಕೆ ಭಾಷೆ ಮುಖ್ಯವಾಗುವುದೇ ಇಲ್ಲ ಅನ್ನೋದು ಸಾಬೀತಾಯಿತು. ಹೌದು.. ಈ ಸಿನಿಮಾ ಯಶಸ್ಸಿಗೆ ನೇರ ಕಾರಣ ಹೆಜ್ಜೆ ಹೆಜ್ಜೆಗೂ ಕುತೂಹಲವನ್ನೇ ತನ್ನೊಡಲಲ್ಲಿ ತುಂಬಿಕೊಂಡ ಅದರ ಕತೆ ಜೊತೆಗೆ ಪಾತ್ರಧಾರಿಗಳ ಮನೋಜ್ಞ ಅಭಿನಯ.

ಮಾಯನ್ ನಾಗರೀಕತೆಯ ಕಾಲದಲ್ಲಿ ಕಾಡುಗಳಲ್ಲಿ ನೆಲೆಸಿದ್ದ ಆದಿವಾಸಿಗಳ ಸುತ್ತ ಹೆಣೆಯಲಾದ ಕತೆಯಿದು. ಬಲಾಢ್ಯರು ದುರ್ಬಲರನ್ನು ಶೋಷಿಸುವುದು ಅಂದಿನ ಕಾಲದಿಂದಲೂ ನಡೆಯುತ್ತಲೇ ಇದೆ. ತಮ್ಮ ಅಸ್ತಿತ್ವಕ್ಕಾಗಿ ದುರ್ಬಲರನ್ನು ತಮ್ಮ ಸ್ವೇಚ್ಛೆಗೆ ಬಳಸಿಕೊಳ್ಳೋದು ಅವರ ಮೇಲೆ ಮಾರಣಾಂತಿಕ ದಾಳಿ ನಡೆಸೋದು, ಆತ್ಮಸ್ಥೈರ್ಯವಿಲ್ಲದ ದುರ್ಬಲರು ಕೊನೆಗೊಂದು ದಿನ ಬಲಾಢ್ಯರ ಜೊತೆ ಸೆಣೆಸಲಾಗದೆ ಸಾಯುವುದು ಕಾಮನ್ ವಿಷಯಗಳು. ಈ ಸಿನಿಮಾದಲ್ಲೂ ಅದು ಹಾಗೆ ಇದೆ.
ಆದರೆ ಒಂದು ವ್ಯತ್ಯಾಸ ಏನಂದ್ರೆ.. ಕಥಾನಾಯಕ ಶತ್ರುಗಳ ವಿರುದ್ಧ ತಿರುಗಿ ಬಿದ್ದು ತನ್ನ ಹಿರೋಯಿಸಮ್ ನಿರೂಪಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ಅವರಿಂದ ಪಾರಾಗುವುದಕ್ಕೋಸ್ಕರ ಯತ್ನಿಸುವುದು, ನಂತರ ಹಂತ ಹಂತವಾಗಿ ತನ್ನ ಚಾಣಾಕ್ಷತೆಯಿಂದ ಒಬ್ಬೊಬ್ಬರನ್ನೆ ಕೊಂದು ತನ್ನ ಗುರಿ ಸೇರುವುದು.

ಈ ಫಿಲಂ ಸ್ಟೋರಿನ ಒಂದು ಸಾಲಿನಲ್ಲಿ ಹೇಳಬೇಕು ಅಂದ್ರೆ “ಬದುಕಿಗಾಗಿ ಮಿಂಚಿನ ಓಟ” ಅಷ್ಟೆ. ಸ್ಟೋರಿ ಸಿಂಪಲ್ ಆಗಿದೆ ಬಟ್ ಪ್ರೇಕ್ಷಕನನ್ನು ಎಕ್ಸೈಟ್ಮೆಂಟ್ ಅನ್ನೋ ಪೀಕಲ್ಲಿ ನಿಲ್ಲಿಸುವಷ್ಟು ಎಫೆಕ್ಟೀವ್ ಆಗಿದೆ. ಬಲಾಢ್ಯರ ದಾಳಿಯಾದಾಗ ತನ್ನ ಗರ್ಭಿಣಿ ಹೆಂಡತಿ ಮತ್ತು ಮಗನನ್ನು ಒಂದು ಬಾವಿಯಲ್ಲಿ ಅಡಗಿಸಿಟ್ಟು ರಕ್ಷಣೆ ಮಾಡಿ.. ಮತ್ತೆ ಬರುತ್ತೇನೆ ಎಂದು ವಾಗ್ದಾನ ಮಾಡಿ ಬಲಾಢ್ಯರ ಕೈಸೆರೆಯಾಗುವ ನಾಯಕ.. ನರಬಲಿಯಿಂದ ಪಾರಾಗಿ ಮತ್ತೆ ತನ್ನ ಗರ್ಭಿಣಿ ಹೆಂಡತಿ ಹಾಗೂ ಮಗುವನ್ನು ಸೇರಲು ಪಡುವ ನಾನಾ ನರಕದಷ್ಟು ಹಿಂಸೆಗಳು ದುರ್ಗಮ ಕಾಡಿನಲ್ಲಿ ನಿರಂತರವಾದ ಓಟವೇ ಚಿತ್ರದ ಜೀವಾಳ.

ಈ ಸಿನಿಮಾದಲ್ಲಿ ಪ್ರಾಚೀನ ಪದ್ದತಿಯ ಒಂದು ಸೈನ್ಸ್ ಇದೆ ಅದೇನಂದ್ರೆ.. ನಾಯಕ ತನ್ನ ಹೆಂಡತಿ ಹಾಗೂ ಮಗನನ್ನ ನೀರಿಲ್ಲದ ಬಾವಿಯಲ್ಲಿ ಬಚ್ಚಿಟ್ಟಿರುತ್ತಾನೆ ಆದರೆ ನಾಯಕ ಶತ್ರುಗಳಿಂದ ಪಾರಾಗಿ ಮತ್ತೆ ಹೆಂಡತಿ ಮಗನನ್ನು ಸೇರುವಷ್ಟರಲ್ಲಿ ಜೋರು ಮಳೆ ಬಂದು ಬಾವಿಯಲ್ಲಿ ನೀರು ಶೇಖರಣೆ ಆಗುತ್ತಾ ಹೋಗುತ್ತೆ. ತುಂಬು ಗರ್ಭಿಣಿಯಾದ ನಾಯಕಿಗೆ ಅದೇ ಸಮಯಕ್ಕೆ ಪ್ರಸವದ ನೋವು ಕಾಣಿಸುತ್ತೆ. ಸಹಾಯಕ್ಕಾಗಿ ಯಾರೂ ಇಲ್ಲದ ಆ ಸಮಯದಲ್ಲಿ ಬಾವಿಗೆ ತುಂಬುತ್ತಿದ್ದ ಮಳೆಯ ನೀರು ಆಕೆಗೆ ಆಸರೆಯಾಗುತ್ತೆ.

ಆಶ್ಚರ್ಯ ಆಯ್ತಾ..? ನೀರು ಹೇಗೆ ಆಸರೆ ಆಯ್ತು ಅಂತ?!ಸಿನಿಮಾದ ಆ ದೃಶ್ಯ ನೋಡುವಾಗ ಎಲ್ಲರಿಗೂ ಆ ಸೈನ್ಸ್ ಅರ್ಥವಾಗಲ್ಲ.. ಅದರ ಅರಿವಿದ್ದವರಿಗೆ ಮಾತ್ರ ಅರ್ಥ ಆಗೋದು..ಸಾಮಾನ್ಯವಾಗಿ ಡೆಲಿವರಿ ಅಂದ್ರೆ ಮನೆಯಲ್ಲಾಗುತ್ತೆ, ಆಸ್ಪತ್ರೆಯಲ್ಲಾಗುತ್ತೆ. ಅಥವಾ ನಾರ್ಮಲ್ ಡೆಲಿವರಿ ಅಥವಾ ಸಿಜರಿನ್ ಡೆಲಿವರಿ ಮಾತ್ರ ಎಲ್ಲರಿಗೂ ಗೊತ್ತು ಆದರೆ ನೀರಿನೊಳಗೆ ಮಾಡುವ ಡೆಲಿವರಿ ಬಗ್ಗೆ ಬಹುತೇಕ ಜನರಿಗೆ ಗೊತ್ತೇ ಇಲ್ಲ. ಇದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ.. ಬಟ್ ಈಗ ಕಡಿಮೆ. ಆದರೆ ಇತ್ತೀಚೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಈ ಅಂಡರ್ ವಾಟರ್ ಬೇಬಿ ಡೆಲಿವರಿ ಕಾನ್ಸೆಪ್ಟ್ ತುಂಬಾ ಟ್ರೆಂಡ್ ಆಗ್ತಿದೆ.

ಪ್ರಸವದ ಸಮಯದಲ್ಲಿ ನೀರಿನೊಳಗೆ ಡೆಲಿವರಿ ಮಾಡುವುದರಿಂದ ತಾಯಿಗೆ ಕಡಿಮೆ ನೋವಾಗುತ್ತದೆ, ಕಡಿಮೆ ರಕ್ತಸ್ರಾವ ಆಗುತ್ತೆ, ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಿದ್ದಾಗ ಅಥವಾ ಗರ್ಭಿಣಿಗೆ ಬಿಪಿ ಸಮಸ್ಯೆಯಿದ್ದಾಗ ಈ ಅಂಡರ್ ವಾಟರ್ ಡೆಲಿವರಿ ಮಾಡಿದರೆ ಸಮಾನ್ಯಕ್ಕಿಂತ ಕಡಿಮೆ ರಿಸ್ಕ್ ಅನ್ನೋದನ್ನ ಆಧುನಿಕ ವಿಜ್ಞಾನ ಕೂಡ ಒಪ್ಪಿಕೊಂಡಿದೆ‌. ಹಾಗಾದ್ರೆ ನೀರಿನೊಳಗೆ ಡೆಲಿವರಿಯಾದ ಮಗು ಉಸಿರಾಡುವುದಾದರೂ ಹೇಗೆ ಅದಕ್ಕೆ ಅಪಾಯ ಆಗಲ್ವಾ ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ.. ಖಂಡಿತ ಇಲ್ಲ. ಬಾಹ್ಯ ಗಾಳಿಯ ಸಂಪರ್ಕವಿಲ್ಲದಿದ್ದರೂ ಮಗು ತಾಯಿಯ ಗರ್ಭದೊಳಗೆ ಕರುಳ ಬಳ್ಳಿಯ ಮೂಲಕ ಉಸಿರಾಡುತ್ತಿರುತ್ತದೆ. ನೀರಿನೊಳಗೆ ಡೆಲಿವರಿಯಾದಾಗಲೂ ಕೆಲವು ನಿಮಿಷಗಳ ಕಾಲ ಅದು ಉಸಿರಾಟಕ್ಕೆ ಕರುಳು ಬಳ್ಳಿಯನ್ನೇ ಆಶ್ರಯಿಸಿರುತ್ತೆ. ಸೋ ಡೆಲಿವರಿಯ ನಂತರ ತಕ್ಷಣ ನೀರಿನಿಂದ ಮಗುವನ್ನು ಮೇಲೆತ್ತುವುದರಿಂದ ಅದಕ್ಕೆ ಯಾವ ಅಪಾಯವೂ ಸಂಭವಿಸುವುದಿಲ್ಲ.

ಕಿತ್ತೋದ ಲವ್ ಸ್ಟೋರಿ, ಹೀರೋಗಳ ಅದೇ ಹೊಡಿಬಡಿ ದೃಶ್ಯಗಳಿಗೋಸ್ಕರ ವರ್ಷಕ್ಕೆ ಹತ್ತು ಫಿಲಂ ಮಾಡಿ ಜನ ಫಿಲಂ ನೋಡೋದೆ ಇಲ್ಲ ಚಿತ್ರಗಳನ್ನ ಚಿತ್ರಮಂದಿರದಲ್ಲೇ ನೋಡಿ ಅಂತ ಭಿಕ್ಷೆ ಕೇಳೋ ಬದಲು ಹತ್ತು ವರ್ಷಕ್ಕೆ ಒಂದರಂತೆ ಅಪೋಕ್ಯಾಲಿಪ್ಟೋ ರೀತಿಯ ಫಿಲಂ ಮಾಡಿದ್ರೆ ಸ್ವಲ್ಪ ಇಂಟ್ರೆಸ್ಟಾಗಿ ನೋಡ್ಬಹುದು. ಇತ್ತೀಚಿನ ನಮ್ಮ ಭಾರತೀಯ ಚಿತ್ರರಂಗದ ದುರಂತ ಏನಂದ್ರೆ… ಕತೆಗಳಿಂದ ಹೀರೋಗಳು ಹುಟ್ತಿಲ್ಲ‌.. ಬದಲಾಗಿ ಹೀರೋಗಳಿಗಾಗಿಯೇ, ಹಿರೋಯಿಸಮ್ ತೋರಿಸೋದಕ್ಕಾಗಿಯೇ ಕತೆಗಳು ಹುಟ್ತಿವೆ.

When the end comes not everyone is ready to go

ಕಾಡಿನ ನರರೂಪ ರಾಕ್ಷಸರ ನಡುವಲ್ಲೂ ಸಿನಿಮಾ ಹ್ಯಾಪಿ ಎಂಡಿಂಗ್ ಪಡ್ಕೊಳುತ್ತೆ ಅನ್ನೋದೆ ಈ ಸಿನಿಮಾದ ವಿಶೇಷ. ನೋಡಿಲ್ಲದಿದ್ರೆ ಒಂದ್ಸಲ ನೋಡಿ ಚೆನ್ನಾಗಿದೆ ಸಿನಿಮಾ ವಲ್ಗರ್ ಅಂತಹದ್ದು ಏನೂ ಇಲ್ಲ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದು.

Recommended For You

Leave a Reply

error: Content is protected !!