‘ಡಾಲಿ’ ಮನೆಗೆ ಬಂದ ಪುಟ್ಟ ಕಂದ: ತಂದೆಯಾದ ಸಂಭ್ರಮದಲ್ಲಿ ನಟ ಧನಂಜಯ್!

ಚಂದನವನದ ಜನಪ್ರಿಯ ನಟ, ‘ನಟರಾಕ್ಷಸ’ ಧನಂಜಯ್ ಹಾಗೂ ಧನ್ಯತಾ ದಂಪತಿಯ ಬಾಳಲ್ಲಿ ಈಗ ಸಂಭ್ರಮದ ಹಬ್ಬ. ಇತ್ತೀಚೆಗಷ್ಟೇ ತಂದೆ-ತಾಯಿಯಾಗಲಿರುವ ಸಿಹಿಸುದ್ದಿ ಹಂಚಿಕೊಂಡಿದ್ದ ಈ ಜೋಡಿ, ಈಗ ಮುದ್ದಾದ ಗಂಡು ಮಗುವನ್ನು ಬರಮಾಡಿಕೊಂಡಿದೆ. ಮೇ 2ರಂದು ಧನ್ಯತಾ ಅವರು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಪುಟ್ಟ ಕೈಗಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಧನಂಜಯ್ ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ದಾಂಪತ್ಯಕ್ಕೆ ಹೊಸ ಮೆರುಗು:
ವೈದ್ಯೆ ಧನ್ಯತಾ ಹಾಗೂ ಧನಂಜಯ್ ಅವರು ಪ್ರೀತಿಸಿ, ಹಿರಿಯರ ಸಮ್ಮತಿಯೊಂದಿಗೆ 2025ರ ಫೆಬ್ರವರಿ 16ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು. ಮದುವೆಯಾದ ಮೊದಲ ವರ್ಷದ ಸಂಭ್ರಮದಲ್ಲಿರುವಾಗಲೇ ಈ ದಂಪತಿಗೆ ‘ಪುಟ್ಟ ಡಾಲಿ’ಯ ಆಗಮನವಾಗಿದ್ದು, ಕುಟುಂಬದಲ್ಲಿ ಹೊಸ ಕಳೆ ತಂದಿದೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ:
ಧನಂಜಯ್ ಅವರು ಮಗುವಿನ ಕೈ ಹಿಡಿದಿರುವ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ, ಚಿತ್ರರಂಗದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. “ನಮ್ಮ ಡಾಲಿ ಈಗ ಅಪ್ಪನಾದರು”, “ಪುಟ್ಟ ಕಂದನಿಗೆ ಸ್ವಾಗತ” ಎಂಬ ಕಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

Recommended For You

Leave a Reply

error: Content is protected !!