ಡಿಡಿ ಪ್ರೊಡಕ್ಷನ್ ಲಾಂಛನದಲ್ಲಿ ಅದ್ಬುತವಾಗಿ ನಿರ್ಮಾಣಗೊಂಡಿದೆ ’90 ಎಂ ಎಲ್’ ಮನೆಮಂದಿಯೆಲ್ಲಾ ಜೊತೆಯಾಗಿ ಕುಳಿತು ಆನಂದಿಸಬಹುದಾದ ಈ ಮನೋರಂಜನಾ ಚಿತ್ರ. ಒಂದು ಉತ್ತಮ ಸಾಮಾಜಿಕ ಸಂದೇಶ ನೀಡುವಂತಹದ್ದಾಗಿದೆ. ಹಾಸ್ಯದ ಜೊತೆಯಲ್ಲಿ, ಎಲ್ಲಾ ಕುಟುಂಬಗಳಿಗೂ ಮುಖ್ಯವಾಗಿ ಹದಿಹರೆಯದವರಿಗೂ ಒಳ್ಳೆಯ ಸಂದೇಶ ನೀಡುವುದಾಗಿದೆ-90 ಎಂಎಲ್.
ಒಂದು ಮನೆಯಲ್ಲಿ ಮಕ್ಕಳೆದುರು ಮದ್ಯ ಸೇವಿಸುವ ಹಾಗೆಯೇ ಸೇವಿಸಿದ ನಂತರದ ವರ್ತನೆಗಳ ಪರಿಣಾಮವನ್ನು ಈ ಚಿತ್ರದ ಕಥೆಯಲ್ಲಿ ಎಲ್ಲಾ ಸ್ಥರದ ಕುಟುಂಬಗಳ, ಯುವಜನತೆಯ ಮೇಲಾಗುವ ದ್ವಂದ್ವಗಳನ್ನು ಹಾಸ್ಯದ ಜೊತೆಗೆ ಮನೋರಂಜನಾತ್ಮಕವಾಗಿ ಮಾನಸಿಕ ಬದಲಾವಣೆಗಳನ್ನು ಸುಂದರವಾಗಿ ವಿವರಿಸಲಾಗಿದೆ.

ಚಿತ್ರದ ನಾಯಕನಾಗಿ `ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ‘ ಖ್ಯಾತಿಯ ವಿನೀತ್ ಕುಮಾರ್ ನಟೆಸಿದ್ದು, ಇವರೊಬ್ಬ ಭರವಸೆಯ ನಟ ಎಂದು ಈಗಾಗಲೇ ಸಾಬೀತು ಮಾಡಿದ್ದಾರೆ. ನಾಯಕಿಯಾಗಿ ಈಗಾಗಲೇ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ರುಹಾನಿ ಶೆಟ್ಟಿ ಈ ಚಿತ್ರದಲ್ಲೂ ತನ್ನ ಪ್ರತಿಭೆ ಮೆರೆದಿದ್ದಾರೆ.
ಉತ್ಸಾಹಿ ಯುವಕ ಡೋಲ್ಫಿ ಡಿಸೋಜಾ ನಿರ್ಮಾಣದ “90 ಎಂಎಲ್ ‘’ಅನ್ನು ಯುವ ನಿರ್ದೇಶಕ ರಂಜಿತ್ ಸಿ ಬಜಾಲ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತುಳಸೀದಾಸ್ ಮಂಜೇಶ್ವರ ಸಂಭಾಷಣೆ ಬರೆದಿದ್ದಾರೆ. ತಾರಾಗಣದಲ್ಲಿ ತುಳುನಾಡಿನ ಮಂದಿಯ ಮನಗೆದ್ದಿರು ನಟರಾದ ಅರವಿಂದ ಬೋಳಾರ್ , ನವೀನ್ ಡಿ, ಪಡೀಲ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್ , ಉಮೇಶ್ ಮಿಜಾರ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಶನ್ ಶೆಟ್ಟಿ, ನಮಿತಾ, ಶೈಲಶ್ರೀ ಮೂಲ್ಕಿ ಕೂಡಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಕರಾವಳಿ ಜಿಲ್ಲೆಗಳ ವಿವಿಧ ಲೊಕೇಶನ್ ಗಳಲ್ಲಿ ಈ ಚಿತ್ರದ ಶೂಟಿಂಗ್ ನಡೆದಿದೆ. ಸಿನಿಮಾಟೋಗ್ರಾಫರ್ ಆಗಿ ಅರ್ಜುನ್ ಎಂವಿ ಕಾರ್ಯನಿರ್ವಹಿಸಿದ್ದು, ವಿಶಾಲ್ ದೇವಾಡಿಗ ಎಡಿಟಿಂಗ್ ಕೈಚಳಕ ಮೆರೆದಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ವೈರಲ್ ಆಗುತ್ತಿದ್ದು ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಈ ಹಾಡುಗಳಿಗೆ ಕೀರ್ತನ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರವನ್ನು ಆಸ್ವಾದಿಸಲು ಎಪ್ರಿಲ್ ನಲ್ಲಿ ರಿಲೀಸ್ ಮಾಡಲಾಗುವುದು ಎಂದು ನಿರ್ಮಾಪಕ ಡೋಲ್ಫಿ ಡಿಸೋಜ ತಿಳಿಸಿದ್ದಾರೆ.
ವರದಿ: ರಾಜೇಶ್ ಶೆಟ್ಟಿ

