ಟಾಕ್ಸಿಕ್ ರಿಲೀಸ್ ದಿನಾಂಕ ಮತ್ತೆ ಮುಂದೆ ಹೋಗಿದೆ ಎಂದು ಯಶ್ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯ ಪೂರ್ಣರೂಪ ಈ ಕೆಳಗಿದೆ.
”ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಮತ್ತೆ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ‘ಟಾಕ್ಸಿಕ್’ ಅಂತಹ ಒಂದು ಪಯಣ. ಸಿನೆಮಾಕಾನ್‌ನಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಸಿಕ್ಕ ಅಭೂತಪೂರ್ವ ಜಾಗತಿಕ ಪ್ರತಿಕ್ರಿಯೆಯು, ಈ ಚಿತ್ರವು ವಿಶ್ವದಾದ್ಯಂತ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ತಲುಪಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.
’ಟಾಕ್ಸಿಕ್’ ಸಿದ್ಧವಾಗಿದೆ. ಸದ್ಯ ನಾವು ಜಾಗತಿಕ ವಿತರಣೆ ಮತ್ತು ಸಹಭಾಗಿತ್ವದ ಕಾರ್ಯಗಳಲ್ಲಿ ತೊಡಗಿದ್ದೇವೆ. ಈ ಹಿನ್ನೆಲೆಯಲ್ಲಿ, ನಾವು ಚಿತ್ರದ ಬಿಡುಗಡೆಯ ಸಮಯವನ್ನು ಮರುಹೊಂದಿಸಲು ನಿರ್ಧರಿಸಿದ್ದೇವೆ. ಈ ಮೊದಲು ಘೋಷಿಸಿದಂತೆ ಜೂನ್ 4 ರಂದು ಸಿನಿಮಾ ಬಿಡುಗಡೆಯಾಗುವುದಿಲ್ಲ, ಬದಲಾಗಿ ಜಾಗತಿಕ ಮಾರುಕಟ್ಟೆಗೆ ಪೂರಕವಾದ ದಿನಾಂಕದಂದು ವಿಶ್ವದಾದ್ಯಂತ ತೆರೆಕಾಣಲಿದೆ. ‘ಟಾಕ್ಸಿಕ್’ ಶೀಘ್ರದಲ್ಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಬರಲಿದೆ.
ಭಾರತೀಯ ಚಿತ್ರರಂಗವು ಜಾಗತಿಕ ವೇದಿಕೆಯಲ್ಲಿ ತನ್ನ ಧ್ವನಿಯನ್ನು ಬಲವಾಗಿ ಕೇಳಿಸುತ್ತಿರುವ ಈ ಸಮಯದಲ್ಲಿ, ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಬ್ಬ ನಟ ಮತ್ತು ನಿರ್ಮಾಪಕನಾಗಿ, ನಮ್ಮ ಸಿನಿಮಾ ಜಾಗತಿಕ ಮಟ್ಟದಲ್ಲಿ ಅಂದುಕೊಂಡ ಪ್ರಭಾವವನ್ನು ಬೀರುವಂತೆ ಮಾಡಲು ಈ ಸಮಯವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದು ಭಾರತೀಯ ಚಿತ್ರರಂಗಕ್ಕೆ ನಾನು ನೀಡುವ ಸಣ್ಣ ಕೊಡುಗೆ ಎಂದು ಭಾವಿಸುತ್ತೇನೆ.
ಪ್ರತಿಯೊಂದು ಹಂತದಲ್ಲೂ ನಿಮ್ಮ ಬೆಂಬಲ ನನ್ನೊಂದಿಗಿದೆ, ಅದಕ್ಕಾಗಿ ನಾನು ಚಿರಋಣಿ. ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ, ಕೆಲವು ಪಯಣಗಳು ಅದನ್ನು ಕೇಳುತ್ತವೆ. ನಿಮ್ಮ ಸಂಭ್ರಮಕ್ಕೆ ಸಕ್ಕತ್ ಸಿನಿಮಾ ನೀಡುವುದಾಗಿ ನಾವು ಭರವಸೆ ನೀಡುತ್ತೇವೆ — ಇದು ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ಕ್ಷಣವಾಗಲಿದೆ.”
ಇವಿಷ್ಟು ಯಶ್ ನೀಡಿರುವಂಥ ಹೇಳಿಕೆ. ನಿರ್ಮಾಣ ಸಂಸ್ಥೆ ಕೂಡ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದೆ.
KVN & Moster Mind Creations ನಿಂದ ಅಧಿಕೃತ ಪ್ರಕಟಣೆ
ಅಂತರಾಷ್ಟ್ರೀಯ ವ್ಯಾಪಾರ ಸಹಯೋಗಕ್ಕಾಗಿ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ ಚಿತ್ರತಂಡ.ಹಾಲಿವುಡ್ ನ ಸಿನಿಮಾಕಾನ್ ನಲ್ಲಿ ಟಾಕ್ಸಿಕ್ ಚಿತ್ರದ 9 ನಿಮಿಷಗಳ ತುಣುಕು ಪ್ರದರ್ಶನದ ಮೇಲೆ, ಟಾಕ್ಸಿಕ್ ವ್ಯಾಪಾರದ ದೃಷ್ಟಿಯಲ್ಲಿ ದೊಡ್ಡ ಬೆಳವಣಿಗೆ ಆಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಅದ್ರಂತೆ ಇಂಟರ್ನ್ಯಾಷನಲ್ ಸಿನಿಮಾ ವಿತರಣಾ ಸಂಸ್ಥೆಗಳೊಂದಿಗಿನ ಸಹಭಾಗಿತ್ವದ ಕೆಲಸಗಳು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ತಿರೋದ್ರಿಂದ ಟಾಕ್ಸಿಕ್ ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.
ಹಾಗಾದರೆ ಟಾಕ್ಸಿಕ್ ಬಿಡುಗಡೆ ಯಾವಾಗ?
ಸಿನೆಮಾಕಾನ್‌ನಲ್ಲಿನ ಅಭೂತಪೂರ್ವ ಪ್ರತಿಕ್ರಿಯೆಯ ನಂತರ, ಜಾಗತಿಕ ಮಟ್ಟದ ಬಿಡುಗಡೆಗಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ದಿನಾಂಕ ಬದಲಾವಣೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ (Monster Mind Creations) ಸಂಸ್ಥೆಗಳು ಇಂದು ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಬಿಡುಗಡೆಯನ್ನು ಮುಂದೂಡಿರುವುದಾಗಿ ಘೋಷಿಸಿವೆ. ಈ ಹಿಂದೆ ಜೂನ್ 4, 2026 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವು, ಈಗ ವಿಶ್ವದಾದ್ಯಂತ ಹೊಸ ದಿನಾಂಕದಂದು ತೆರೆಕಾಣಲಿದ್ದು, ಆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಇತ್ತೀಚೆಗೆ ನಡೆದ ಸಿನೆಮಾಕಾನ್ (CinemaCon) ಪ್ರೆಸೆಂಟೇಶನ್‌ನಲ್ಲಿ ಜಾಗತಿಕ ವಿತರಕರು ಮತ್ತು ಚಿತ್ರೋದ್ಯಮದ ಪ್ರಮುಖರಿಂದ ದೊರೆತ ಭರ್ಜರಿ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿ ಸಿಕ್ಕ ಪ್ರೋತ್ಸಾಹವು ಚಿತ್ರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಹೊಸ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಈ ಕಾರಣದಿಂದಾಗಿ ಚಿತ್ರತಂಡವು ತಮ್ಮ ಬಿಡುಗಡೆಯ ಯೋಜನೆಯನ್ನು ಮರುಪರಿಶೀಲಿಸಿ, ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಬದಲಾಯಿಸಿಕೊಂಡಿದೆ.
ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ‘ಟಾಕ್ಸಿಕ್’ ಸಿನಿಮಾ ಜಾಗತಿಕ ಪ್ರೇಕ್ಷಕರನ್ನು ತಲುಪಲು ಬೇಕಾದ ಅಂತರಾಷ್ಟ್ರೀಯ ಸಹಭಾಗಿತ್ವ ಮತ್ತು ವಿತರಣಾ ಹಕ್ಕುಗಳ ಪ್ರಕ್ರಿಯೆಯಲ್ಲಿ ತಂಡವು ಪ್ರಸ್ತುತ ಕಾರ್ಯನಿರತವಾಗಿದೆ. ಈ ಚಿತ್ರಕ್ಕೆ ಯಶ್ ಮತ್ತು ಗೀತು ಮೋಹನ್ ದಾಸ್ ಕಥೆ ಬರೆದಿದ್ದು, ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ.
ಯಶ್ ಅವರ ಅಧಿಕೃತ ಹೇಳಿಕೆ
”ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಮತ್ತೆ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ‘ಟಾಕ್ಸಿಕ್’ ಅಂತಹ ಒಂದು ಪಯಣ. ಸಿನೆಮಾಕಾನ್‌ನಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಸಿಕ್ಕ ಅಭೂತಪೂರ್ವ ಜಾಗತಿಕ ಪ್ರತಿಕ್ರಿಯೆಯು, ಈ ಚಿತ್ರವು ವಿಶ್ವದಾದ್ಯಂತ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ತಲುಪಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.
’ಟಾಕ್ಸಿಕ್’ ಸಿದ್ಧವಾಗಿದೆ. ಸದ್ಯ ನಾವು ಜಾಗತಿಕ ವಿತರಣೆ ಮತ್ತು ಸಹಭಾಗಿತ್ವದ ಕಾರ್ಯಗಳಲ್ಲಿ ತೊಡಗಿದ್ದೇವೆ. ಈ ಹಿನ್ನೆಲೆಯಲ್ಲಿ, ನಾವು ಚಿತ್ರದ ಬಿಡುಗಡೆಯ ಸಮಯವನ್ನು ಮರುಹೊಂದಿಸಲು ನಿರ್ಧರಿಸಿದ್ದೇವೆ. ಈ ಮೊದಲು ಘೋಷಿಸಿದಂತೆ ಜೂನ್ 4 ರಂದು ಸಿನಿಮಾ ಬಿಡುಗಡೆಯಾಗುವುದಿಲ್ಲ, ಬದಲಾಗಿ ಜಾಗತಿಕ ಮಾರುಕಟ್ಟೆಗೆ ಪೂರಕವಾದ ದಿನಾಂಕದಂದು ವಿಶ್ವದಾದ್ಯಂತ ತೆರೆಕಾಣಲಿದೆ. ‘ಟಾಕ್ಸಿಕ್’ ಶೀಘ್ರದಲ್ಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಬರಲಿದೆ.
ಭಾರತೀಯ ಚಿತ್ರರಂಗವು ಜಾಗತಿಕ ವೇದಿಕೆಯಲ್ಲಿ ತನ್ನ ಧ್ವನಿಯನ್ನು ಬಲವಾಗಿ ಕೇಳಿಸುತ್ತಿರುವ ಈ ಸಮಯದಲ್ಲಿ, ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಬ್ಬ ನಟ ಮತ್ತು ನಿರ್ಮಾಪಕನಾಗಿ, ನಮ್ಮ ಸಿನಿಮಾ ಜಾಗತಿಕ ಮಟ್ಟದಲ್ಲಿ ಅಂದುಕೊಂಡ ಪ್ರಭಾವವನ್ನು ಬೀರುವಂತೆ ಮಾಡಲು ಈ ಸಮಯವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದು ಭಾರತೀಯ ಚಿತ್ರರಂಗಕ್ಕೆ ನಾನು ನೀಡುವ ಸಣ್ಣ ಕೊಡುಗೆ ಎಂದು ಭಾವಿಸುತ್ತೇನೆ.
ಪ್ರತಿಯೊಂದು ಹಂತದಲ್ಲೂ ನಿಮ್ಮ ಬೆಂಬಲ ನನ್ನೊಂದಿಗಿದೆ, ಅದಕ್ಕಾಗಿ ನಾನು ಚಿರಋಣಿ. ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ, ಕೆಲವು ಪಯಣಗಳು ಅದನ್ನು ಕೇಳುತ್ತವೆ. ನಿಮ್ಮ ಸಂಭ್ರಮಕ್ಕೆ ಸಕ್ಕತ್ ಸಿನಿಮಾ ನೀಡುವುದಾಗಿ ನಾವು ಭರವಸೆ ನೀಡುತ್ತೇವೆ — ಇದು ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ಕ್ಷಣವಾಗಲಿದೆ.”
ಚಿತ್ರದ ವಿವರಗಳು
’ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾದ ಈ ಚಿತ್ರವು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರದ ಹೊಸ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಹೊರಬೀಳಲಿದೆ.