ಇದು ಸಿನಿಕನ್ನಡ.ಕಾಮ್ ನ ಹೊಸ ಅಂಕಣ. ಇದರಲ್ಲಿ ಭಾರತೀಯ ಚಿತ್ರರಂಗದ ರಸ ನಿಮಿಷಗಳ ಸಂಗಮವಿರಲಿದೆ. ಚಿತ್ರವೊಂದು ತೆರೆಗೆ ಬರುವವರೆಗೆ ಮತ್ತು ತೆರೆಕಂಡ ಬಳಿಕ ಪರದೆ ಹಿಂದೆ ಸದ್ದಿಲ್ಲದೇ ಹೋದ ಕುತೂಹಲಕಾರಿ ಘಟನೆಗಳ ಕುರಿತು ಬೆಳಕು ಚೆಲ್ಲಲಿದೆ ‘ತೆರೆ ಮರೆಯ ಕತೆಗಳು’. ಅಂಕಣಕಾರ ವೆಂಕಟೇಶ್ ನಾರಾಯಣ ಸ್ವಾಮಿಯವರು ಕಳೆದ ಮೂರು ದಶಕಗಳಿಂದ ದಕ್ಷಿಣ ಭಾರತದ ಚಿತ್ರರಂಗದ ಹಲವಾರು ದಿಗ್ಗಜ ನಿರ್ದೇಶಕರ ತಂಡದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಾಗಾಗಿ ಅವರ ಬರಹಗಳಲ್ಲಿ ಅನುಭವದ ಛಾಯೆಯೂ ನುಸುಳಿರುವುದನ್ನು ಕಾಣಬಹುದಾಗಿದೆ. ಮುಂದೆ ಓದಿ..
ಒಂದು ಸಿನಿಮಾ ಯಶಸ್ಸಿನಲ್ಲಿ ಕಂಟೆಂಟ್ ಗಿಂತ ಮುಖ್ಯವಾಗಿ ಅದರ ‘ಪ್ರೆಸೆಂಟೇಶನ್’ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದಕ್ಕೆ ತಮಿಳಿನ ಪ್ರಖ್ಯಾತ ಸ್ಕ್ರೀನ್ ಪ್ಲೇ ರೈಟರ್ ಕೆ. ಭಾಗ್ಯರಾಜ್ ರವರದೇ ಎರಡು ಚಿತ್ರಗಳ ಉದಾಹರಣೆಗಳಿವೆ!!!
1.ಒಂದು ಸುಂದರ ಹುಡುಗಿಗೆ ಯಾರೋ ಒಬ್ಬ ಅಯೋಗ್ಯ ಬಲವಂತದಿಂದ ತಾಳಿ ಕಟ್ಟಿದ ಮಾತ್ರಕ್ಕೇ ಕಾಲ ಪೂರ್ತಿ ಅವಳು ಕಣ್ಣೀರಲ್ಲಿ ಕೈತೊಳೆಯುತ್ತಾ ಅವನೊಂದಿಗೆ ಇರಬೇಕೆಂಬುದು ಯಾವ ನ್ಯಾಯ?!! ಎನ್ನುತ್ತಾ ಆಕೆಯ ಕತ್ತಲ್ಲಿ ತಾನು ಕಟ್ಟಿರುವ ತಾಳಿಯನ್ನ ತಾನೇ ಕಿತ್ತುಹಾಕಿ….. ತನ್ನ ಹೆಂಡತಿಯಾದ ಕಥಾನಾಯಕಿಯನ್ನು ಅವಳ ಮಾಜಿ ಪ್ರಿಯಕರನೊಂದಿಗೆ (ಕಥಾನಾಯಕ) ಕಳುಹಿಸುವ ಹಾಗೆ ಕ್ಲೈಮ್ಯಾಕ್ಸ್ ಮಾಡಿದ್ದಾರೆ.
ಚಿತ್ರ-ಪುದಿಯವಾರ್ಪುಗಳ್
(ತಮಿಳು)
2.ಸರ್, ನನ್ನ ಪ್ರೇಯಸಿ ನಿಮ್ಮ ಹೆಂಡತಿಯಾಗಬಹುದು… ಆದರೆ ನಿಮ್ಮ ಹೆಂಡತಿ ನನ್ನ ಪ್ರೇಯಸಿಯಾಗಲು ಸಾಧ್ಯವಿಲ್ಲಾ. 20ನೇ ಶತಮಾನದಲ್ಲಿ ಏನೆಲ್ಲಾ ಬದಲಾಗಬಹುದು…. ಆದರೆ 1+1= 3 ಆಗದು. ಇದೇ ನಮ್ಮ ದಾಂಪತ್ಯ ತತ್ವ… ಇದೇ ನಮ್ಮ ಸಂಸ್ಕೃತಿ…..ಎನ್ನುವ ನೀಳವಾದ ಸಂಭಾಷಣೆಗಳನ್ನು ಮಾತನಾಡುವುದರೊಂದಿಗೆ ಕಥಾನಾಯಕ……ತನ್ನ ಮಾಜಿ ಪ್ರೇಯಸಿಗೆ ಅದಾಗಲೇ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿ ಮದುವೆಯಾಗಿರುವ ಡಾಕ್ಟರ್ ಜೊತೆಗೆ ಸೇರಿಸಿ ಹೊರಡುವಂತೆ ಕ್ಲೈಮ್ಯಾಕ್ಸ್ ಮಾಡಿದ್ದಾರೆ!
ಚಿತ್ರ- ಅಂದ ಏಳು ನಾಟ್ಕಳ್
ಕನ್ನಡದ ‘ಲವ್ ಮಾಡಿ ನೋಡು’
ಆಶ್ಚರ್ಯವೆಂದರೆ!!! ಒಬ್ಬರೇ ರೈಟರ್ ಒಂದಕ್ಕೊಂದು ವಿರುದ್ದವಾದ ಅಂತ್ಯವಿರುವಂತೆ ಚಿತ್ರಿಸಿರುವ ಈ ಎರಡೂ ಕ್ಲೈಮ್ಯಾಕ್ಸ್ ನ್ನು ಒಪ್ಪಿಕೊಂಡ ಪ್ರೇಕ್ಷಕರು…. ಎರಡೂ ಚಿತ್ರಗಳನ್ನೂ ಸಿಲ್ವರ್ ಜ್ಯೂಬಿಲಿ ಆಚರಿಸುವ ಹಂತಕ್ಕೆ ಯಶಸ್ಸುಗೊಳಿಸಿದ್ದರು!!!