ರಾಜಾಹುಲಿಗೆ ರೆಹಮಾನ್ ಪ್ರಶ್ನೆ

ಪವರ್ ಟಿವಿ ಎನ್ನುವ ಕನ್ನಡ ವಾರ್ತಾವಾಹಿನಿ ಮಾಧ್ಯಮ ಲೋಕವನ್ನು ಪ್ರವೇಶಿಸುವಾಗಲೇ ಅದೊಂದು ಪವರ್‌ಫುಲ್ ಎಂಟ್ರಿಯಾಗಿ ಕಂಡಿತ್ತು. ಆದರೆ ಆಡಳಿತ ಸರ್ಕಾರ ಭಾಗಿಯಾಗಿರುವ ಭ್ರಷ್ಟಾಚಾರದ ಬಗ್ಗೆ ಸತತ ವರದಿ ಮಾಡುತ್ತಿರುವಂತೆ ಅದರ ಪವರ್ ತೆಗೆದು ಕೂರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಹೇಳಲೇಬೇಕಾಗಿದೆ. ಇಂಥದೊಂದು... Read more »

ಪ್ರಶಂಸೆ ಪಡೆಯುತ್ತಿದೆ `ಲಾಸ್ಟ್ ಸೀನ್’ ಆಲ್ಬಮ್ ಸಾಂಗ್

ಆಲ್ಬಂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಎನ್ ವಿನಾಯಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಆಫ್ಟರ್ 8 ಪಿಮ್ ಎನ್ನುವ ಹಾಡಿನ ಮೂಲಕ ಕಿಕ್ ಏರಿಸಿದ ಇವರು ಈ ಬಾರಿ ನಾಗರಿಕ ಸಮಾಜದ ಕ್ರೌರ್ಯವೊಂದನ್ನು ತೋರಿಸುವ ಮೂಲಕ ಕಿಕ್ ಇಳಿಸಿದ್ದಾರೆ! ಅದೇ ವೇಳೆ ಹಾಡಿನ... Read more »

ಮೂವರು ನಾಯಕರ `ಶಂಭೋ ಶಿವ ಶಂಕರ’

‘ಶಂಭೋ ಶಿವ ಶಂಕರ’ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಹೆಸರು ಕೇಳಿದರೆ ಭಕ್ತಿ ಪ್ರಧಾನ ಚಿತ್ರದಂತೆ ಇದ್ದರೂ ಇದು ಸಿನಿಮಾದ ಪ್ರಧಾನ ಪಾತ್ರದಲ್ಲಿರುವ ಮೂವರು ಯುವಕರ ಕತೆ ಹೇಳುವ ಸಿನಿಮಾ. ಮುಹೂರ್ತದ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಚಿತ್ರತಂಡ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದೆ.... Read more »

ಮರೆಯಾದ ಗಾಯಕನ ಮರೆಯಲಾಗದ ನೆನಪುಗಳು

ಏನೇ ಸಮಸ್ಯೆಗಳಿದ್ದರೂ ಇತರರಿಗೆ ತೋರಿಸದ ಮನುಷ್ಯ ಬಾಲಸುಬ್ರಹ್ಮಣ್ಯಂ ಎಂದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಹೇಳಿದ ಮಾತು. ಇದು ನಿಜ ಕೂಡ. ಅವರ ಈ ಗುಣವನ್ನು ಅವರು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿಯೂ ತೋರಿಸಿದ್ದರು. ತಾವು ವೆಂಟಿಲೇಟರ್‌ ಚಿಕಿತ್ಸೆಗೆ ಒಳಗಾಗುತ್ತಿದ್ದರೂ ಅಲ್ಲಿಂದಲೇ ಕೈ ಎತ್ತಿ ಹೆಬ್ಬೆರಳು... Read more »

ರಾಕ್ಲೈನ್ ಸುಧಾಕರ್ ನಿಧನ

ಹಾಸ್ಯ ಮತ್ತು ಖಳ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಹಿರಿಯನಟ ರಾಕ್ಲೈನ್ ಸುಧಾಕರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿಂದೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕಚೇರಿಯಲ್ಲಿ ವೃತ್ತಿಯಲ್ಲಿದ್ದ ಸುಧಾಕರ್ ಅವರನ್ನು ಅದೇ ಕಾರಣದಿಂದಲೇ `ರಾಕ್ಲೈನ್ ಸುಧಾಕರ್’ ಎಂದೇ ಗುರುತಿಸಲಾಗುತ್ತಿತ್ತು. ಪೃಥ್ವಿ ಅಂಬಾರ್ ನಾಯಕತ್ವದ `ಶುಗರ್‌ಲೆಸ್‌’... Read more »

`ಲಗ್ನ ಪತ್ರಿಕೆ’ ಹಂಚುತ್ತಿರುವ ಅರವಿಂದ್ ಕೌಶಿಕ್!

ಅರವಿಂದ್ ಕೌಶಿಕ್ ಸಿನಿಮಾ ನಿರ್ದೇಶಕರಾಗಿ ಹೆಸರು ಮಾಡಿದವರು. ಕಲಾವಿದೆ ಶಿಲ್ಪಾ ಜತೆಗೆ ಅವರ ವಿವಾಹ ದಶಕದ ಹಿಂದೆಯೇ ನೆರವೇರಿತ್ತು. ಆದರೆ ಇದೀಗ ಬಂದು ಸುದ್ದಿಯ ಪ್ರಕಾರ ಅವರು ಇವತ್ತಿನಿಂದಲೇ ಹೊಸದಾಗಿ ಲಗ್ನ ಪತ್ರಿಕೆ ಹಂಚಲು ಶುರು ಮಾಡಿದ್ದಾರೆ. ವಿಶೇಷ ಅಂದರೆ ಇದಕ್ಕೆ ಅವರ ಪತ್ನಿಯೂ... Read more »

ಹಿರಿಯ ಕಲಾವಿದರನ್ನು ಸನ್ಮಾನಿಸಿದ ಇಂದ್ರಜಿತ್

ಎಲ್ಲ ವರ್ಷಗಳಲ್ಲಿಯೂ ಸಮಾಜಮುಖಿ ಕೆಲಸದೊಂದಿಗೆ ಜನ್ಮದಿನಾಚರಣೆ ಮಾಡುವ ಪತ್ರಕರ್ತ, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಬಾರಿ ಕೂಡ ಅಂಥದೇ ಒಂದು ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಕನ್ನಡ ಚಿತ್ರರಂಗದ ಐದು ಮಂದಿ ಹಿರಿಯ ಕಲಾವಿದರಿಗೆ ಸನ್ಮಾನ ಮಾಡುವ ಜತೆಗೆ... Read more »

ಸರಿಯಾದ ತನಿಖೆ ನಡೆದರೆ ಶವಗಳು ಎದ್ದು ಕೂರಲಿವೆ..! – ಇಂದ್ರಜಿತ್ ಲಂಕೇಶ್

ಇಂದು ಇಂದ್ರಜಿತ್ ಲಂಕೇಶ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಕೂಡ ಅವರು ಡ್ರಗ್ಸ್ ವಿಚಾರದಲ್ಲಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡರು. “ಎರಡು ವಾರಗಳಿಂದ ನಾನು ಹೆಸರು ಕೊಟ್ಟ ಮೇಲೆ ಏನು ಡೆವಲಪ್ ಆಗಿದೆ ಎನ್ನುವುದು ನೀವೆಲ್ಲ ನೋಡಿದ್ದೀರ. ಆದರೆ... Read more »

‘ಆರ್ ಸಿ ಬಿ’ ಹಾಡಲ್ಲಿ ಕನ್ನಡ ಎಲ್ಲಿ..?!

ಈ ವರ್ಷದ ಐಪಿಎಲ್ ಪಂದ್ಯಾವಳಿ ಇಂದಿನಿಂದ ಶುರುವಾಗುತ್ತಿದೆ. ಕೋವಿಡ್ ನಿಂದ ಮುಂದೂಡಲ್ಪಟ್ಟಿದ್ದ ದೇಶದ ಪ್ರತಿಷ್ಠಿತ ಕ್ರೀಡಾ ಚಟುವಟಿಕೆ ತಡವಾಗಿಯಾದರೂ ಆರಂಭವಾಗಿರುವುದು ಕ್ರಿಕೆಟ್ ಪ್ರೇಮಿಗಳ ಕುಂದುತ್ತಿರುವ ಉತ್ಸಾಹಕ್ಕೆ ಮರುಜೀವ ಕೊಟ್ಟಂತಾಗಿದೆ. ಐಪಿಎಲ್ ಶುರುವಾದಾಗಿನಿಂದಲೂ ಬೇರೆ ಬೇರೆ ಕಾರಣಗಳಿಗೆ ಆರ್ ಸಿ ಬಿ ತಂಡದ ಮ್ಯಾನೇಜ್ಮೆಂಟ್ ಸುದ್ದಿಯಾಗುತ್ತಲೇ... Read more »

‘ನಾನು ಅನಿರುದ್ಧ್‌ ಅವರಲ್ಲಿ ವಿಷ್ಣುವನ್ನು ಕಾಣುತ್ತೇನೆ’- ವಿಜಯಲಕ್ಷ್ಮಿ ಸಿಂಗ್

ವಿಜಯಲಕ್ಷ್ಮಿಯವರು ಬೆಳ್ಳಿಪರದೆಯಲ್ಲಿ ನಿರ್ದೇಶಕಿಯಾಗಿ ಹೆಸರು ಮಾಡಿದವರು. ಆದರೆ `ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ್ ಅವರ ತಾಯಿಯ ಪಾತ್ರ ಮಾಡುತ್ತಿರುವ ಅವರು ಒಂದಷ್ಟು ವಿಶೇಷಗಳ ಬಗ್ಗೆ ಮಾತನಾಡಿದ್ದಾರೆ. ವಿಷ್ಣುವರ್ಧನ್ ಬಗ್ಗೆ ಮಾತನಾಡಿದ ಅವರು, “ವಿಷ್ಣು ಅವರ ಬದುಕಿನ ಬೇರೆ ಬೇರೆ ಮಜಲುಗಳನ್ನು ನಾನು ನೋಡಿದ್ದೇನೆ. ನನ್ನ... Read more »

ಚಿಕ್ಕಪ್ಪನ ಬರ್ತ್ ಡೇಗೆ ಥೀಮ್ ಸಾಂಗ್ ಮಾಡಬೇಕಿತ್ತು…! : ನಿರಂಜನ್ ಸುಧೀಂದ್ರ

ಉಪೇಂದ್ರ ಎಂಬ ಸೂಪರ್ ಸ್ಟಾರ್ ಹೆಸರು ಬೆನ್ನಿಗಿದ್ದರೂ ಅದರ ಹಿಡಿತದಿಂದ ಹೊರಬಂದು ಚಿತ್ರರಂಗದಲ್ಲಿ ತನ್ನದೇ ಗುರುತು ಮೂಡಿಸಬೇಕು ಎಂಬ ಅಗಾಧವಾದ ಆಕಾಂಕ್ಷೆ ಹೊತ್ತು ಬರುತ್ತಿರುವ ‘ನಿರಂಜನ್ ಸುಧೀಂದ್ರ’ ಎಂಬ ಸ್ಫುರದ್ರೂಪಿ ಹುಡುಗನ ಮೊದಲ ಸಿನಿಮಾ ‘ಸೂಪರ್ ಸ್ಟಾರ್’ ನ ಟೀಸರ್ ಈಗಾಗಲೇ ದಾಖಲೆ ವೀಕ್ಷಣೆ... Read more »

ಕೆಜಿಎಫ್ ಸಿನಿಮಾ, ವಾಸ್ತವ, ವಿರೋಧಗಳ ಬಗ್ಗೆ ರೈ ಮಾತು

ಕೆ.ಜಿ.ಎಫ್ ಚಿತ್ರದ ಎರಡನೇ ಭಾಗದಲ್ಲಿ ಪ್ರಕಾಶ್ ರೈ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಸಿನಿಮಾ ನೋಡುವುದಿಲ್ಲ ಎಂದು ತೀರ್ಮಾನ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಪ್ರಕಾಶ್ ರೈ ಅವರಿಗೆ ಏನು ಅನಿಸುತ್ತದೆ? `ರಾಜಕೀಯದಲ್ಲಿ ಒಬ್ಬ ಅಭ್ಯರ್ಥಿಯನ್ನು ಆರಿಸಬೇಕಾದಾಗ ಆತನ... Read more »

ತೇಜಸ್ವಿ ಫ್ಯಾನ್ಸ್ ಸಿನಿಮಾ..!

‘ಸಿನಿಮಾಮರ’ ಕನ್ನಡದಲ್ಲಿ ಸಾಹಿತ್ಯ ಕೃತಿಗಳನ್ನ ಆಧರಿಸಿದ ಹಾಗೂ ವಿಷಯಾಧಾರಿತ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಆರಂಭವಾಗಿ ಬರುವ ಹೊಸ ಸಂಸ್ಥೆ. ಕನ್ನಡ ನಾಡು ಕಂಡ ಅಪರೂಪದ ಚಿಂತಕ ಕತೆಗಾರ ವಿಚಾರವಾದಿ ಪರಿಸರಪ್ರೇಮಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಸಿ ಕನ್ನಡ ಸಂಸ್ಕೃತಿಯನ್ನು ಅಪಾರವಾಗಿ ಪ್ರಭಾವಿಸಿ ಬಹುದೊಡ್ಡ... Read more »

ಗೀತ ರಚನೆಕಾರ `ತಂಗಾಳಿ ನಾಗರಾಜ್’ ನಿಧನ

ಕನ್ನಡದ ಜನಪ್ರಿಯ ಗೀತ ಸಾಹಿತಿ `ತಂಗಾಳಿ’ ನಾಗರಾಜ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರಿಗೆ 53 ವರ್ಷ ವಯಸ್ಸಾಗಿತ್ತು. ಸರಿಯಾಗಿ 18 ವರ್ಷಗಳ ಹಿಂದೆ ತೆರೆಕಂಡ ಸಿನಿಮಾ ‘ಹಾರ್ಟ್ ಬೀಟ್ಸ್'. ವಿಜಯರಾಘವೇಂದ್ರ ನಾಯಕರಾಗಿದ್ದ ಆ ಚಿತ್ರದಲ್ಲಿ ಚಿತ್ರಕ್ಕಿಂತ ಹೆಚ್ಚು... Read more »

‘ಹೀರೋ’ ರಿಷಬ್ ಗೆ ಗಾನವಿ ನಾಯಕಿ ಎಂದರು ಭರತ್ !

ಲಾಕ್ ಡೌನ್ ಸಂದರ್ಭದಲ್ಲಿ ಚಿತ್ರೀಕರಣ ಗೊಂಡಿರುವ ರಿಷಬ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿರುವ ‘ಹೀರೋ’ ಚಿತ್ರದಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.ಅದನ್ನು ಕಂಡೊಡನೆ ಕಥೆಯ ಬಗ್ಗೆ ಕುತೂಹಲ ಮೂಡಿಸುವಂತಿದೆ. ಪ್ರಸ್ತುತ ಸದಭಿರುಚಿಯ ಚಿತ್ರಗಳನ್ನು ತೆರೆಗೆ ತರುವಲ್ಲಿ ಮುಂಚೂಣಿಯಲ್ಲಿರುವ ರಿಷಬ್ ಶೆಟ್ಟಿ ಅವರೇ... Read more »

ತೆಲುಗು ನಟ ಜಯಪ್ರಕಾಶ್ ರೆಡ್ಡಿ ಇನ್ನಿಲ್ಲ

ತೆಲುಗಿನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ನಿಧನರಾಗಿದ್ದಾರೆ. ಎಪ್ಪತ್ತನಾಲ್ಕು ವರ್ಷ ವಯಸ್ಸಿನವರಾಗಿದ್ದ ಜಯಪ್ರಕಾಶ್ ರೆಡ್ಡಿಯವರು ಇಂದು ಮುಂಜಾನೆ ಟಾಯ್ಲೆಟ್‌ಗೆಂದು ಹೋದವರು ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ‘ಬ್ರಹ್ಮಪುತ್ರುಡು' ಎನ್ನುವ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಜಯಪ್ರಕಾಶ್ ರೆಡ್ಡಿಯವರನ್ನು ವೆಂಕಟೇಶ್ ನಾಯಕರಾಗಿ ನಟಿಸಿದ 'ಪ್ರೇಮಿಂಚಿಕೊಂದಾಂ ರಾ’ ಹೆಚ್ಚು... Read more »

ನಟ ಸಿದ್ದರಾಜು ಕಲ್ಯಾಣ್ಕರ್ ನಿಧನ

ನಿನ್ನೆ ಸೋಮವಾರ 60ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡ ಸಿದ್ದರಾಜು ಕಲ್ಯಾಣ್ಕರ್ ರಾತ್ರಿ ಹೊತ್ತಿಗೆ ನಿಧನರಾಗಿದ್ದಾರೆ! ಬಹುಶಃ ವಿಧಿ ವಿಪರ್ಯಾಸ ಎನ್ನುವುದು ಇದಕ್ಕೇ ಇರಬಹುದು. ಅವರ ಸಾವಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರುವುದೇ ಕಾರಣ ಎಂದು ತಿಳಿದು ಬಂದಿದೆ. ಸ್ಟಾರ್‌ ಸುವರ್ಣ ವಾಹಿನಿಯ `ಪ್ರೇಮಲೋಕ’ ಧಾರಾವಾಹಿಯಲ್ಲಿ ನಿನ್ನೆಯೂ... Read more »

ತಮಿಳು, ತೆಲುಗಲ್ಲಿಯೂ ಬರಲಿದೆ `ಆ ಕರಾಳ ರಾತ್ರಿ’

ಎರಡು ವರ್ಷಗಳ ಹಿಂದೆ ತೆರೆಕಂಡು ಪ್ರೇಕ್ಷಕರಿಂದ ಪ್ರಶಂಸೆಗೊಳಗಾದ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ ಆ ಕರಾಳ ರಾತ್ರಿ. 2018ರ ಶ್ರೇಷ್ಠ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದಿರುವ ಈ ಸಿನಿಮಾ ಇದೀಗ ತಮ್ಮ ನಿರ್ದೇಶನದಲ್ಲೇ ತಮಿಳು ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ದಯಾಳ್... Read more »

ಕಿರಿಕ್ ಹುಡುಗಿಗೇನೇ ಪಾರ್ಕಲ್ಲಿ ಕಿರಿಕ್..!

ಸಂಯುಕ್ತಾ ಹೆಸರಿನಲ್ಲಿ ಈ ಹಿಂದೆ ಏನೇ ಕಿರಿಕ್‌ಗಳು ನಡೆದಿರಬಹುದು. ಆದರೆ ಇದು ಅವುಗಳ ಆಧಾರದಲ್ಲಿ ನೋಡಬೇಕಾದ ಘಟನೆಯೇ ಅಲ್ಲ. ಯಾಕೆಂದರೆ ಇದನ್ನು ಸ್ವತಃ ಆಕೆಯೇ ಸಾಕ್ಷ್ಯಾಧಾರ ಸಮೇತ ಸಾಬೀತು ಪಡಿಸಿದ್ದಾರೆ. ಎಚ್ ಎಸ್ ಆರ್ ಬಡಾವಣೆಯ ಪಾರ್ಕ್ ಒಂದರಲ್ಲಿ ಸಂಯುಕ್ತಾ ತಮ್ಮ ಸ್ನೇಹಿತೆಯರೊಂದಿಗೆ ‘ಹುಲ... Read more »

ಸಾದ್-ಶಾಲಿನಿ ಹಾಸ್ಯರಸ ರಹಸ್ಯ..!

ಪಾಪ ಪಾಂಡು ಧಾರವಾಹಿಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಶಾಲಿನಿ ಮತ್ತು ‘ಹಂಬಲ್ ಪೊಲಿಟಿಷಿಯನ್ ನೋಗ್ರಾಜ್’ ಚಿತ್ರದ ನಿರ್ದೇಶಕ ಸಾದ್ ಖಾನ್ ಇವರಿಬ್ಬರೂ ತಮ್ಮದೇ ರೀತಿಯಲ್ಲಿ ಅದ್ಭುತ ಪ್ರತಿಭೆಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಭರವಸೆ ಮೂಡಿಸಿರುವ ಸಾದ್ ಖಾನ್... Read more »

ಎಸ್ಪಿಬಿ ಆರೈಕೆಗೆ ಚಂದನವನದ ಹಾರೈಕೆ

ಪದ್ಮಶ್ರೀ, ಪದ್ಮಭೂಷಣ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಪೀಡಿತರಾಗಿ ಚಿಕಿತ್ಸೆಯಲ್ಲಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ದೇಶದೆಲ್ಲೆಡೆ ಅವರ ಆರೋಗ್ಯಕ್ಕಾಗಿ ಸಂಗೀತಾಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮುಂದಿನ ಜನ್ಮ ಇದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಎಂದು ಹೇಳುವ ಬಾಲಸುಬ್ರಹ್ಮಣ್ಯಂ ಅವರನ್ನು ಇದೇ ಜನ್ಮದಲ್ಲಿ ಕನ್ನಡಿಗನಾಗಿ ಸ್ವೀಕರಿಸಿರುವ... Read more »
error: Content is protected !!