ಅಂಬುಜಾ ದ್ವಾರಕೀಶ್ ನಿಧನ

ಜನಪ್ರಿಯ ನಟ ದ್ವಾರಕೀಶ್ ಅವರ ಪತ್ನಿ ಅಂಬುಜಾ ನಿಧನರಾಗಿದ್ದಾರೆ.

ಎಚ್ ಎಸ್ ಆರ್ ಲೇ ಔಟ್ ನ ತಮ್ಮ ಸ್ವಗೃಹದಲ್ಲಿ ಅಂಬುಜಾ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ಮೃತ ಅಂಬುಜಾ ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು. ಮಕ್ಕಳಾದ ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಐದು ಮಂದಿ ಗಂಡು ಮಕ್ಕಳು ಮತ್ತು ಪತಿಯನ್ನು ಅವರು ಅಗಲಿದ್ದಾರೆ. ಇಂದು ಸಂಜೆ ಅವರ ಅಂತ್ಯ ಸಂಸ್ಕಾರ ನೆರವೇರಲಿರುವುದಾಗಿ ಯೋಗಿಯವರು ತಿಳಿಸಿದ್ದಾರೆ.

Recommended For You

Leave a Reply