ಕಿಚ್ಚನ ಫ್ಯಾನ್ಸ್ ಗೆ ಇಂದು ಸಿಗಲಿದೆ ಉತ್ತರ..!

ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ‘ಬದಲಾಗು ನೀನು ಬದಲಾಯಿಸು ನೀನು' ಎನ್ನುವ ಹಾಡು. ಕೊರೊನ ವೈರಸ್ ವಿರುದ್ಧ ಮೂಡಿಬಂದ ಈ ಜಾಗೃತಿ ಗೀತೆಯಲ್ಲಿ ಡಾ. ಶಿವರಾಜ್ ಕುಮಾರ್ ಅವರಿಂದ ಹಿಡಿದು ಧ್ರುವ ಸರ್ಜಾ ತನಕ ಕನ್ನಡದ... Read more »

ಸಹಾಯ ಬೇಡುತ್ತಿರುವ ಜನಪ್ರಿಯ ಪೋಷಕ‌ ನಟಿ

ಕೊರೊನ ಬಂದ ಮೇಲೆ‌ ನಿತ್ಯದ ದುಡಿಮೆಯನ್ನು ನಂಬಿಕೊಂಡ ಯಾರ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಅದರಲ್ಲಿ ಕೂಡ ಕಲಾವಿದರ ಬದುಕು ನಿಜಕ್ಕೂ ದುರಂತಮಯವಾಗಿದೆ. ಯಾಕೆಂದರೆ ವರ್ಷಗಳಿಂದ ನಟನೆಯನ್ನೇ ನಂಬಿರುವ ಬಹುತೇಕರಿಗೆ ಅನ್ನ ನೀಡುವ ಮಾರ್ಗವೇ ನಿಂತ ಹಾಗಿದೆ. ಇದೀಗ ಅಂಥದೊಂದು ಬೇಡಿಕೆಯನ್ನು ಪೋಷಕ‌ ನಟಿ ಲಲಿತಮ್ಮ... Read more »

ವಿಕ್ಕಿಯ ಆ ದಿನಗಳ‌ ನೆನೆದ ಮಾಸ್ತಿ!

ಮಾಸ್ತಿ ಎಂದೊಡನೆ ಕನ್ನಡ ಸಾಹಿತ್ಯ ಲೋಕದಲ್ಲಿ ಖ್ಯಾತನಾಮರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ನೆನಪಾಗಲೇಬೇಕು. ಆದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಸಂಭಾಷಣಾ ಕ್ಷೇತ್ರದ ಆಸ್ತಿಯಾಗಿರುವ ಮಾಸ್ತಿ ಬೇರೆಯೇ ಇದ್ದಾರೆ. ಅದರಲ್ಲೂ ನಿರ್ದೇಶಕ ಸೂರಿ ತಂಡದ ಚಿತ್ರಗಳಲ್ಲಿ ಇವರು‌ ಇದ್ದೇ ಇರುತ್ತಾರೆ. ಇಲ್ಲಿ ಅವರು ಸೂರಿಯ ‘ಕೆಂಡ... Read more »

ಗುಪ್ತವಾಗಿ ಸಹಾಯಹಸ್ತ ನೀಡಿದ ನಟಿ ಯಾರು ಗೊತ್ತಾ?

ಬದುಕಿನಲ್ಲಿ ಯಾರು ಯಾವಾಗ ಹೇಗೆ ಸಹಾಯ ಮಾಡುತ್ತಾರೆ ಎನ್ನುವುದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇವರು ಖಂಡಿತವಾಗಿ ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆ ಇರಿಸಿಕೊಂಡಿದ್ದಾಗಲೇ ಅವರು ಕೈ ಕೊಡಬಹುದು! ಇವರೆಲ್ಲ ನಮಗೆ ಯಾಕೆ ಸಹಾಯ ಮಾಡುತ್ತಾರೆ ಭರವಸೆಯನ್ನೇ ಇರಿಸದಿದ್ದಾಗಲೂ ಕೆಲವರು ದಿಢೀರನೆ ಆಪತ್ಬಾಂಧವರಾಗಿ ಬರುತ್ತಾರೆ. ಅಂಥ... Read more »

ಸಂತು ಎಂಬ ಸಾಮಾನ್ಯ ‘ಅಣ್ಣೆ’ ಆಗಿದ್ದು !

ಇದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿರುವ ಯುವಕನೋರ್ವನ ಕತೆ. ಇಲ್ಲಿ ಅಣ್ಣನನ್ನು ಅಣ್ಣೆ ಎನ್ನುವುದು ತುಳುವರ ವಾಡಿಕೆ. ಸ್ವಂತ ಅಣ್ಣನಲ್ಲದ ವ್ಯಕ್ತಿಯನ್ನು ಊರ ಮಂದಿ ಅಣ್ಣೆ ಎಂದು ಕರೆಯಬೇಕಾದರೆ ಆತ ಊರಿಗೆ ಅಷ್ಟೊಂದು ಪ್ರಭಾವಿಯಾಗಿರಬೇಕು! ಆದರೆ ಹೈಸ್ಕೂಲ್ ಮೆಟ್ಟಿಲು ಹತ್ತಿರದ ಸಂತು ಆ ಸ್ಥಾನಕ್ಕೆ ಏರಿರುವುದು... Read more »

ಅಂತರದೊಂದಿಗೆ ‘ಜೊತೆ ಜೊತೆಯಲಿ’ ಆರಂಭ..!

ಕನ್ನಡ ಧಾರಾವಾಹಿ ಲೋಕದಲ್ಲಿ ಹೊಸ ದಾಖಲೆ ಬರೆದ ಧಾರಾವಾಹಿ `ಜೊತೆ ಜೊತೆಯಲಿ.’ ಕತೆ, ನಿರ್ದೇಶನ, ನಾಯಕನಾಗಿ ನಟಿಸಿರುವ ಅನಿರುದ್ಧ ಜಟ್ಕರ್ ಅವರ ಚಾರ್ಮಿಂಗ್ ಎಲ್ಲವೂ ಸೇರಿ ತಂಡಕ್ಕೆ ಅಂಥದೊಂದು ಯಶಸ್ಸು ದೊರಕಿದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡ ಬಳಿಕ ತಮ್ಮ ಎರಡನೇ ಇನ್ನಿಂಗ್ಸ್... Read more »

ಕೊರೊನಾಗೆ ಬಾಲಿವುಡ್ ಸೆಲೆಬ್ರಿಟಿ ಬಲಿ!

ಬಾಲಿವುಡ್ ‌ನ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ ಸಾಜಿದ್ ವಾಜಿದ್ ಹೆಸರು ಕೇಳಿರದವರು ಅಪರೂಪ. ಅವರಲ್ಲಿ ವಾಜಿದ್ ಇಂದು ಮುಂಜಾನೆ ಕೋವಿಡ್19 ಕಾರಣದಿಂದ ನಿಧನರಾಗಿದ್ದಾರೆ. ‘ದಬಂಗ್’, ‘ವಾಂಟೆಡ್‌’, ‘ಜೈ ಹೊ’ ಮೊದಲಾದ ಜನಪ್ರಿಯ ಚಿತ್ರ‌ಸಂಗೀತದಿಂದ ಹೆಸರಾದವರು ಸಾಜಿದ್ ವಾಜಿದ್ ಸಹೋದರರು. ವಾಜಿದ್ ಗೆ ವರ್ಷಗಳಿಂದ... Read more »

ಮತ್ತೆ ದೇವರಾಗುತ್ತಿರುವ ರವಿಚಂದ್ರನ್!

ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲಬಾರಿಗೆ ದೇವರಾಗಿದ್ದು ‘ಕುರುಕ್ಷೇತ್ರ’ ಚಿತ್ರದ ಮೂಲಕ. ಡಾ.ರಾಜ್ ಕುಮಾರ್ ಅವರನ್ನು ಬಿಟ್ಟರೆ ಕನ್ನಡದಲ್ಲಿ ದೇವರ ಪಾತ್ರ ಮಾಡಲು ಮತ್ತೊಬ್ಬರಿಲ್ಲ ಎನ್ನುವಂಥ ಸಂದರ್ಭದಲ್ಲಿ ರವಿಚಂದ್ರನ್ ಅಭಿಮಾನಿಗಳೇ ಬೆಚ್ಚುವಂತೆ ಶ್ರೀಕೃಷ್ಣನಾಗಿ ನಟಿಸಿದರು ರವಿಚಂದ್ರನ್. ಆದರೆ ಈ ಬಾರಿ ಚಿತ್ರಕ್ಕೆ ದೇವರ ಹೆಸರಿದೆ ಹೊರತು, ರವಿಚಂದ್ರನ್... Read more »

ವೀರಾಸ್ವಾಮಿ ರವಿಗೆ ‘ಪೋಲಿ’ ಅಂದಿದ್ದೇಕೆ..?!

ರವಿಚಂದ್ರನ್ ‘ಪೋಲಿಹುಡುಗ’ ಎನ್ನುವ ಚಿತ್ರದಲ್ಲಿ ನಾಯಕರಾಗಿರುವುದು ನಮಗೆಲ್ಲ ಗೊತ್ತು. ಆದರೆ ರವಿಚಂದ್ರನ್ ಅವರನ್ನು ಪೋಲಿ ಎಂದು ಅವರ ತಂದೆಯೇ ಕರೆದಿದ್ದು ನಿಮಗೆ ಗೊತ್ತೇ.?ಯಾವ ಶಾಟ್ಸ್ ನೋಡಿ ವೀರಾಸ್ವಾಮಿ ಅವರು ರವಿಚಂದ್ರನ್ ಅವರಿಗೆ ‘ಪಕ್ಕಾ ಪೋಲಿ ನನ್ ಮಗ’ ಇವ್ನು ಅಂತ ಹೇಳಿದ್ರು ಎನ್ನುವುದನ್ನು ಯುವ... Read more »

ಅಂಬರೀಷ್ ನೆನಪಲ್ಲಿ ಅನಿರುದ್ಧ್

ಕೆಲವೇ ತಿಂಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮ್ಮನ್ನು ಅಗಲಿ ಎರಡು ವರ್ಷಗಳಾಗಲಿವೆ. ಆದರೆ ಅವರ ಮಾತುಗಳು, ಕಂಠ ಇದೀಗ ತಾನೇ ನಮ್ಮ ಕಿವಿಯಲ್ಲಿ ಮೊಳಗಿದಂತೆ ಅನಿಸುತ್ತದೆ. ಆ ಮಟ್ಟಿಗೆ ಅವರ ಪ್ರಭಾವ ನಮ್ಮನ್ನು ಇಂದಿಗೂ‌ ಬಿಟ್ಟು ಹೋಗಿಲ್ಲ. ಅಂಬರೀಷ್ ಇಂದು ನಮ್ಮ ಜತೆಗಿದ್ದಿದ್ದರೆ... Read more »

ಕೈರಂಗಳದಿಂದ ಯಕ್ಷರಂಗಕ್ಕೆ ವಿನುತ ಕೆ ಗಟ್ಟಿ

ಯುವ ನಟ, ನಿರ್ದೇಶಕ, ಬರಹಗಾರ, ಕವಿ ಎಲ್ಲವೂ ಆಗಿರುವ ಸುಜಯ್ ಬೆದ್ರ ಅವರು ತಾವು ಕಂಡ ರಂಗಭೂಮಿಯ ಯುವ ಪ್ರತಿಭೆ ವಿನುತಾ ಗಟ್ಟಿ ಕೈರಂಗಳ ಇವರನ್ನು ಸಿನಿಕನ್ನಡ.ಕಾಮ್ ಮೂಲಕ ರಂಗ ಪ್ರೇಮಿಗಳಿಗೆ ಪರಿಚಯಿಸಿದ್ದಾರೆ. ಯಕ್ಷಗಾನ ಕರಾವಳಿ ಭಾಗದ ಗಂಡುಕಲೆ. ‘ತೆಂಕು ತಿಟ್ಟು’ ಹಾಗೂ ‘ಬಡಗು... Read more »

‘ಮಗಳು ಜಾನಕಿ’ ಮುಕ್ತಾಯ..!

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಮಗಳು‌ ಜಾನಕಿ’ ಮುಕ್ತಾಯಗೊಂಡಿದ್ದಾಗಿ ಅಧಿಕೃತ ಮಾಹಿತಿ ದೊರಕಿದೆ. ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ‌ಪ್ರಸಾರವಾಗುತ್ತಿದ್ದ ‘ಮಗಳು ಜಾನಕಿ’ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿತ್ತು. ಹಾಗಾಗಿ ಈ ಸುದ್ದಿ ಅವರಿಗೆಲ್ಲ ಆಘಾತ ತಂದಿರುವುದರಲ್ಲಿ ಸಂದೇಹವಿಲ್ಲ.... Read more »

ಕೋವಿಡ್ ಕಾಲದಲ್ಲಿ ಇವರೇಕೆ ಹೀಗೆ?- ಡೇವಿಡ್ ಪ್ರಶ್ನೆ

ಕೋವಿಡ್ 19 ಬಂದ ಮೇಲೆ ಎಲ್ಲರೂ ಆತಂಕಗೊಂಡು ಮನೆಯಲ್ಲಿರುವ ಹಾಗಾಯಿತು. ಆದರೆ ಇದೀಗ ಲಾಕ್ಡೌನ್ ಸಂಪೂರ್ಣವಾಗಿ ಸಡಿಲವಾಗಿದೆ. ಕಿರುತೆರೆಯಲ್ಲಿ ಧಾರಾವಾಹಿ ಸೇರಿದಂತೆ ಎಲ್ಲ ರಂಗಗಳು ಸಕ್ರಿಯವಾಗಿವೆ. ಆದರೆ ನಮ್ಮ ಚಿತ್ರರಂಗಕ್ಕೆ ಏನಾಗಿದೆ? ಆಗಿರುವ ಮಹಾನ್ ನಷ್ಟದ ಅರಿವಿದ್ದರೂ ಇದನ್ನೆಲ್ಲ ಮೆಟ್ಟಿ ನಿಲ್ಲಲು, ಸಂಘಟನಾತ್ಮಕವಾಗಿ ಚುರುಕಾಗಲು... Read more »

ಸುಮನಾ ಕಲ್ಯಾಣ

ಕೊರೊನಾ ಕಾರಣ ಹಲವರ ಕಲ್ಯಾಣ ಸದ್ದಿಲ್ಲದೆ ನಡೆಯುವಂತಾಗಿದೆ. ಆ ಪಟ್ಟಿಗೆ ಕನ್ನಡದ ಜನಪ್ರಿಯ ನಿರ್ದೇಶಕಿ ಸುಮನಾ ಕಿತ್ತೂರು ಕೂಡ ಸೇರಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಾಸವಾಗಿರುವ ಸುಮನಾ ಅವರು ಕಳೆದ ತಿಂಗಳು ಏಪ್ರಿಲ್ 17ರಂದು ಮಾಂಗಲ್ಯ ಬಂಧನಕ್ಕೆ ಒಳಗಾಗಿದ್ದಾರೆ. ಪುದುಚೇರಿಯಲ್ಲಿ... Read more »

ರಾಜೀವ್ ಸ್ಮರಣೆಯಲಿ‌ ಕವಿರಾಜ್

ಇಂದು ದೇಶದ ಮಾಜಿ ಪ್ರಧಾನ‌‌ಮಂತ್ರಿ ರಾಜೀವ ಗಾಂಧಿಯವರು ಇಹಲೋಕ ತ್ಯಜಿಸಿದ ದಿನ.‌ ದೇಶದಾದ್ಯಂತ ಅವರ ಪುಣ್ಯಸ್ಮರಣೆ ಜನಮನದೊಳಗೆ ನಡೆದಿದೆ. ಕನ್ನಡ ಚಿತ್ರರಂಗದ ಜನಪ್ರಿಯ ಗೀತರಚನೆಕಾರ, ಯುವ ಚಿತ್ರ ನಿರ್ದೇಶಕ ಕವಿರಾಜ್ ಅವರು ರಾಜೀವ್ ಗಾಂಧಿಯವರ ಕುರಿತಾದ ತಮ್ಮ ನೆನಪನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಸಿನಿಕನ್ನಡದ... Read more »

ಶಿವಣ್ಣನಿಗೆ ಶರಣೆಂದ ಶಂಭು..!

ಓಂ ಸಿನಿಮಾ ತೆರೆಕಂಡು 25 ವರ್ಷ ಆಗಿದೆ. ಆದರೆ ಇಂದಿಗೂ ಅದರ ಆಚರಣೆ ಮಾಡಲಾಗುತ್ತಿದೆ ಎಂದರೆ ಬಲವಾದ ಕಾರಣಗಳಿವೆ. ಚಿತ್ರ ಎಂಥ ಅಭಿಮಾನಿಗಳನ್ನು ಸೃಷ್ಟಿಸಿದೆ ಎಂದರೆ ಓಂ ತೆರೆಕಾಣುವಾಗ ಹತ್ತು ವರ್ಷದ ಹುಡುಗನಾಗಿದ್ದ ಶಂಭು; ಈಗ ಶಿವಣ್ಣನನ್ನು ಕಂಡರೆ ಶರಣು ಎನ್ನುತ್ತಾರೆ. ಅದಕ್ಕೆ ಕಾರಣ,... Read more »

ಮದುಮಕ್ಕಳ ಕೊಡುಗೈ ದಾನ..!

ಮದುವೆಗೆ ಮುನ್ನವೇ ಮದುವೆಯ, ಹುಟ್ಟಲಿರುವ ಮಕ್ಕಳ, ಮೊಮ್ಮಕ್ಕಳ ಖರ್ಚುಗಳಿಗೆ ಬ್ಯಾಂಕಲ್ಲಿ ಇಡುಗಂಟು ಇಡುವ ಜಮಾನ ಇದು. ಅಂಥದರಲ್ಲಿ ಮದುವೆ ಖರ್ಚನ್ನೇ ಸರಳಗೊಳಿಸಿ ಆ ದುಡ್ಡನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾದರಿಯಾದ ಜೋಡಿ ಇಲ್ಲಿದೆ. ನವ ದಂಪತಿಯ ಹೆಸರು ಅರ್ಜುನ್ ಮತ್ತು ನಂದಿನಿ.... Read more »

‘ರೈ’ ಆಗ್ತಾರ ರಕ್ಷಿತ್ ಶೆಟ್ಟಿ…?

‘ರೈ‘ ಎಂದರೆ ನೆನಪಾಗುವುದೇ ಕರ್ನಾಟಕದ ಕರಾವಳಿ. ಅದಕ್ಕೆ ಕಾರಣ ಅಲ್ಲಿನ ಬಂಟ ಜನಾಂಗದಲ್ಲಿ ಗುರುತಿಸಿರುವ ರೈಗಳು ದೇಶಾದ್ಯಂತ ಮಾಡಿರುವ ಹೆಸರು. ಅದು ಮಿಸ್ ವರ್ಲ್ಡ್ ಐಶ್ವರ್ಯಾ ರೈಯಿಂದ ಹಿಡಿದು ಅಂಡರ್ ವರ್ಲ್ಡ್ ನಲ್ಲಿ ಹೆಸರು ಮಾಡಿದ ಮುತ್ತಪ್ಪ ರೈ ತನಕ ಸಾಕಷ್ಟು ಮಂದಿ ಇದ್ದಾರೆ.... Read more »

ನಿಕಿತಾಗೆ ನೀಡಿದೆ ಚಂದನವನ ಸ್ವಾಗತ

ಸ್ಟಾರ್ ಸುವರ್ಣ ವಾಹಿನಿಯ “ಸತ್ಯಂ ಶಿವಂ ಸುಂದರಂ” ನಲ್ಲಿ ಟೀನಾ ಪಾತ್ರದಿಂದ ಪರಿಚಿತರಾಗಿರುವ ನಟಿ ನಿಖಿತಾ ದೋರ್ತೋಡಿ. ಇವರು ಮಂಗಳೂರು ಮೂಲದ ಪ್ರತಿಭೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ನಟನೆ ಎಂಬುದು ಸುಲಭದ ಮಾತಲ್ಲ, ಒಂದು ಪಾತ್ರ ನಿರ್ವಹಿಸುವುದರಲ್ಲಿ ಕಲಾವಿದನ ಶ್ರಮ ಬಹಳ ದೊಡ್ಡದು, ತಮ್ಮ... Read more »

ರೈ ನೆನಪುಗಳಲಿ ಸಾಹುಕಾರ

ಎಲ್ಲರ ನಿಜ ಬದುಕು ಸಿನಿಮಾ ಆಗದು. ಆದರೆ ಅಂಥ ಸಿನಿಮೀಯ ಬದುಕು ಹೊಂದಿದವರು ಮುತ್ತಪ್ಪ ರೈ. ಒಮ್ಮೆ ಭೂಗತ ಲೋಕದ ಡಾನ್ ಎನಿಸಿಕೊಂಡು ಬಳಿಕ ಜಯಕರ್ನಾಟಕ ಸಂಘಟನೆಯ ಮೂಲಕ ಸಮಾಜ ಸೇವಕರಾಗಿ ಬದಲಾಗಿದ್ದು ಇತಿಹಾಸ. ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ‘ರೈ’ ಎನ್ನುವ... Read more »

ಭೈರಪ್ಪ, ಭಗವಾನ್ ಮತ್ತು ಬಶೀರ್!

‘ಬ’ಕಾರದ ಹೋಲಿಕೆಯ ಹೊರತಾಗಿ ಇದು ಒಂದು ಸಂಬಂಧವೇ ಇರದ ಹೆಸರುಗಳ ಸಮುಚ್ಚಯ ಅನಿಸಿತೆ? ಖಂಡಿತವಾಗಿ ಅಲ್ಲ. ಕಳೆದ ಒಂದು ವಾರದಿಂದ ಫೇಸ್ಬುಕ್ ಎನ್ನುವ ಸಾಮಾಜಿಕ ಜಾಲತಾಣವನ್ನು ಗಮನಿಸಿಕೊಂಡು ಬಂದವರಿದ್ದರೆ ಇವರ ನಡುವಿನ ಸಂಬಂಧ ಏನು ಎನ್ನುವುದು ಸ್ಪಷ್ಟವಾಗಿ ತಿಳಿದಿರುತ್ತದೆ. ಬಿ ಎಂ ಬಶೀರ್ ಸ್ಪಷ್ಟನೆ... Read more »
error: Content is protected !!