ಬಿಗ್ ಬಾಸ್ ಎಂಟನೇ ಸೀಸನ್ ನಲ್ಲಿ ಬಹು ನಿರೀಕ್ಷಿತ ಸದಸ್ಯರಾಗಿದ್ದವರು ಮಂಜು ಪಾವಗಡ. ಎಲ್ಲರ ನಿರೀಕ್ಷೆಯಂತೆ ಮಂಜು ಪಾವಗಡ ವಿಜೇತರಾಗಿ ಟ್ರೋಫಿ ಮತ್ತು ಪ್ರಶಸ್ತಿ ಮೊತ್ತ 53ಲಕ್ಷವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿಯ ಸೀಸನಲ್ಲಿ ಮಂಜು ಪಾವಗಡ ಅವರೊಂದಿಗೆ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಬೈಕ್ ರೇಸರ್ ಅರವಿಂದ್ ಕೆ.ಪಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಅರವಿಂದ್ ಜೋಡಿಯಾಗಿ ಮನೆಯೊಳಗೆ ಜನಪ್ರಿಯರಾಗಿದ್ದ ದಿವ್ಯಾ ಉರುಡುಗ ತೃತೀಯ ಸ್ಥಾನ ಪಡೆದಿದ್ದಾರೆ.

ಈ ಬಾರಿ ಬಿಗ್‍ಬಾಸ್ ಸೀಸನ್ ವಿಜೇತರಾದ ಮಂಜು ಪಾವಗಡ ಅವರಿಗೆ 53 ಲಕ್ಷ ರೂಪಾಯಿ, ರನ್ನರ್ ಅಪ್‍ಗೆ ಅರವಿಂದ್ ಅವರು 11 ಲಕ್ಷ ರೂಪಾಯಿ, ಮೂರನೇ ಸ್ಥಾನ ಪಡೆದ ದಿವ್ಯಾ ಉರುಡುಗ ಅವರಿಗೆ 6 ಲಕ್ಷ ರೂಪಾಯಿ, ನಾಲ್ಕನೇ ಸ್ಥಾನ ಪಡೆದ ವೈಷ್ಣವಿಗೆ 3.5 ಲಕ್ಷ ರೂಪಾಯಿ ಹಾಗೂ ಐದನೇ ಸ್ಥಾನ ಪಡೆದ ಪ್ರಶಾಂತ್ ಸಂಬರಗಿ 2.5 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ.
ಒಟ್ಟು 45,03,495 ಮತಗಳನ್ನು ಗಳಿಸಿರುವ ಮಂಜು ಅವರಿಗೆ ಅರವಿಂದ್ ಅವರಿಂದ ಮೂರು ಲಕ್ಷ ಮತಗಳು ಅಧಿಕವಾಗಿದ್ದವು. ಅರವಿಂದ್ ಅವರು ಗಳಿಸಿದ ಮತಗಳು 43,35,957 ಆಗಿದ್ದವು. ತೃತೀಯ ಸ್ಥಾನದಲ್ಲಿದ್ದ ದಿವ್ಯಾ ಉರುಡುಗ 11,61,205 , ವೈಷ್ಣವಿ 10,21,831 ಮತ್ತು ಪ್ರಶಾಂತ್ 6, 69,020ಲಕ್ಷದ ಆಸುಪಾಸಿನಲ್ಲಿ ಮತಗಳನ್ನು ಪಡೆದಿದ್ದರು. ಪ್ರಥಮ, ದ್ವಿತೀಯ ಸ್ಥಾನದಲ್ಲಿರುವವರು ಪಡೆದ ಮತಗಳ ಸಂಖ್ಯೆ ಇದುವರೆಗಿನ ಸೀಸನ್ ಗಳಲ್ಲೇ ಅತ್ಯಧಿಕ ಎಂದು ಸುದೀಪ್ ಅವರು ವೇದಿಕೆಯ ಮೇಲೆ ಘೋಷಿಸಿದ್ದಾರೆ.
