ಸಿನಿ ಪತ್ರಕರ್ತರಿಗೆ ನೆರವಾದ ಆನಂದ್ ಆಡಿಯೋ ಸಂಸ್ಥೆ

ಕೊರೊನ ವೈರಸ್ ಹರಡುವ ಭೀತಿಯಿಂದ ಕೈಗೊಂಡ ದಿಢೀರ್ ಲಾಕ್ಡೌನ್ ಕ್ರಮ ಇಡೀ ದೇಶವಾಸಿಗಳನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಅದರಲ್ಲಿ ಸುದ್ದಿಗಳನ್ನು ತಲುಪಿಸುವ ಮಾಧ್ಯಮದ ಮಂದಿ ಕೂಡ ಹೊರತಾಗಿಲ್ಲ. ಟಿ.ವಿ ಮಾಧ್ಯಮಗಳು ನಿಮಗೆ ಸಕ್ರಿಯವಾಗಿ ಕಂಡರೂ ಕೂಡ ಅಲ್ಲಿ ಕಾರ್ಯ ನಿರ್ವಹಿಸುವವರಲ್ಲಿ ಅರ್ಧಕ್ಕರ್ಧ ಮಂದಿಗೆ ರಜೆ... Read more »

ಮಂಡ್ಯ ರಮೇಶ್ ಅತ್ತಿದ್ದೇಕೆ..?!

ಮಂಡ್ಯ ರಮೇಶ್ ಕಣ್ಣೀರಾಗಿದ್ದಾರೆ. ಅದು ಕೂಡ ಫೇಸ್ಬುಕ್ ನಲ್ಲಿ. ಕೊರೊನದಿಂದಾಗಿ ಸಂಭವಿಸಿರುವ ಲಾಕ್ಡೌನ್ ಪರಿಣಾಮ ಮನೆ ಸೇರಿಕೊಂಡ ಎಲ್ಲರ ಕತೆಯೂ ಇಷ್ಟೇ ಎಂದುಕೊಂಡಿರ? ಖಂಡಿತವಾಗಿ ಇಲ್ಲ. ಈ ಕಣ್ಣೀರಿಗೆ ಒಂದು ವಿಭಿನ್ನವಾದ ಕಾರಣವೇ ಇದೆ. ಫೇಸ್ಬುಕ್ ಸೇರಿದಂತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇರುವವರೆಲ್ಲ ಒಂದೊಂದು... Read more »

ಸಿನಿರಂಗಕ್ಕೆ ಸುಧಾಮೂರ್ತಿ ಸಹಾಯ

ಎಲ್ಲೆಲ್ಲಿ ಸಂಕಷ್ಟಗಳು ಎದುರಾಗುವುದೋ ಅಲ್ಲಲ್ಲಿ ಸರ್ಕಾರ ಏನು ಮಾಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ಫೋಸಿಸ್ ಕಡೆಯಿಂದ ಏನಾದರೂ ಸಹಾಯ ಮಾಡಿಯೇ ಬಿಡುತ್ತಾರೆ ಎನ್ನುವಷ್ಟು ನಂಬಿಕೆಯನ್ನು ಸುಧಾಮೂರ್ತಿಯವರು ಸೃಷ್ಟಿಸಿಬಿಟ್ಟಿದ್ದಾರೆ. ಇದೀಗ ನಂಬಿಕೆಯ ಮುಂದುವರಿದ ಭಾಗವಾಗಿ ಸಿನಿಮಾ ಕಾರ್ಮಿಕರ ನೆರವಿಗೆ ಸುಧಾಮೂರ್ತಿ ಧಾವಿಸಿದ್ದಾರೆ. ಕೊರೋನಾ ವೈರಸ್‌ನಿಂದಾಗಿ ಸಮಸ್ಯೆಗೆ... Read more »

ಕರುಳು ಕರಗಿಸುವಂತಿದೆ ಈ ಕಿರುಚಿತ್ರ..!

ಲಾಕ್ಡೌನ್ ಕಾರಣದಿಂದ ದೇಶದ ಎಲ್ಲ ರೀತಿಯ ವ್ಯವಹಾರಗಳು ನಿಲುಗಡೆಯಾಗಿವೆ. ಆದರೆ ಈ ಸಂದರ್ಭದಲ್ಲಿ ಕೂಡ ಚಿತ್ರರಂಗದಲ್ಲಿರುವ ಸೃಜನಶೀಲರು ತಮ್ಮಿಂದಾದ ಜಾಗೃತಿಯನ್ನು ಮನರಂಜನೆಯ ಮೂಲಕವೇ ನೀಡುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳಿಬ್ಬರು ಸೇರಿಕೊಂಡು ಮಾಡಿರುವ ಕಿರುಚಿತ್ರವೊಂದು ಆ ನಿಟ್ಟಿನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಏಳು... Read more »

ವಿಶಿಷ್ಟ ನಿರ್ಮಾಪಕ ವೀರಾಸ್ವಾಮಿಯವರ ಸ್ಮರಣೆ

ಇಂದು ಕನ್ನಡ ಚಿತ್ರರಂಗದಲ್ಲಿ ಹಲವಾರು ಮಂದಿ ನಿರ್ಮಾಪಕರಿದ್ದಾರೆ. ಆದರೆ ಅವರಲ್ಲಿ ಸಿನಿಮಾ ನಿರ್ಮಾಣವನ್ನೇ ಮುಖ್ಯವಾಗಿರಿಸಿಕೊಂಡವರು ಬೆರಳೆಣಿಕೆಯ ಮಂದಿ ಮಾತ್ರ. ಬಡ್ಡಿಗೆ ದುಡ್ಡು ಪಡೆದವರು, ಸಿನಿಮಾ ಮೋಹದಿಂದ ಆಸ್ತಿ ಮಾರಿ ಯಾಮಾರಿ ಹೋದವರೆಲ್ಲ ನಿರ್ಮಾಪಕರು ಎನಿಸಿರುವ ಸಂದರ್ಭದಲ್ಲಿ ವೀರಾಸ್ವಾಮಿಯವರು ಎಂದರೆ ಒಂದು ರೀತಿ ಅದ್ಭುತ ಎಂದೇ... Read more »

ವೈರಸ್ ಮರೆತ ಒಂದು ದಿವಸ; ವೈವಾಹಿಕ ಬದುಕಿಗೆ ನಿಖಿಲ್ ಪ್ರವೇಶ!

ಕನ್ನಡ ಚಿತ್ರರಂಗದ ಯುವನಟ, ನವ ರಾಜಕಾರಣಿ ನಿಖಿಲ್ ಕುಮಾರ್ ಅವರ ವಿವಾಹ ಇಂದು ಬೆಂಗಳೂರಿನಲ್ಲಿ ನೆರವೇರಿದೆ. ರಾಮನಗರ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ರೇವತಿಯವರೊಂದಿಗೆ ವಿವಾಹ ನೆರವೇರಿದೆ. ಕುಟುಂಬ ಸದಸ್ಯರ ನಡುವೆ ನಿಖಿಲ್ ಕುಮಾರ ಸ್ವಾಮಿ ಮತ್ತು ರೇವತಿ... Read more »

ಚಿ. ಉದಯಶಂಕರ್ ಪತ್ನಿ ಶಾರದಮ್ಮ ನಿಧನ

ಕನ್ನಡದ ಖ್ಯಾತ ಚಿತ್ರ ಸಾಹಿತಿ, ಗೀತರಚನೆಕಾರ ದಿವಂಗತ ಚಿ. ಉದಯಶಂಕರ್‌ ಅವರ ಪತ್ನಿ ಶಾರದಮ್ಮ(74) ಇಂದು ನಿಧನರಾದರು. ಪತಿ ಉದಯಶಂಕರ್ ಅವರು 1993ರಲ್ಲಿಯೇ ನಿಧನರಾಗಿದ್ದರು. ಇದೀಗ ಪುತ್ರ ಗುರುದತ್ ಸೇರಿದಂತೆ ಮಕ್ಕಳಿಂದ ತಾಯಿ ಕೂಡ ದೂರವಾಗಿದ್ದಾರೆ.ಶಾರದಮ್ಮ ಅವರು ಸ್ವಲ್ಪ ಕಾಲದಿಂದ ಅನಾರೋಗ್ಯದಲ್ಲಿದ್ದರು. ಮೂವರು ಮಕ್ಕಳಲ್ಲಿ... Read more »

ಸೆಕ್ಸೀ ನಗುವಿನ ನಾಯಕಿ ಸಾಕ್ಷಿ ಮೇಘನಾ

ಸಾಮಾನ್ಯವಾಗಿ ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದವರು ಬಾಲಕಲಾವಿದರಾಗಿ ಮಾತ್ರ ಗುರುತಿಸುತ್ತಾರೆ; ಮುಂದೆ ನಾಯಕ ಅಥವಾ ನಾಯಕಿಯಾಗಿ ಗುರುತಿಸಲ್ಪಡುವುದಿಲ್ಲ ಎನ್ನುವ ಮಾತಿದೆ. ಆದರೆ ಅದಕ್ಕೆ ಆಪಾದನೆಯಾಗಿ ಕಾಣಿಸುವ ನವನಾಯಕಿ ಸಾಕ್ಷಿ ಮೇಘನಾ. ಇವರು `ಜೋಗಯ್ಯ’ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. ಪ್ರಸ್ತುತ ನಾಲ್ಕೈದು ಚಿತ್ರಗಳಲ್ಲಿ ನಾಯಕಿಯಾಗಿದ್ದು... Read more »

ಅಮ್ಮಂದಿರಿಗೆ ಜನ್ಮದಿನದ ಶುಭ ಕೋರಿದ ಶರಣ್

ಕನ್ನಡ ಚಿತ್ರರಂಗದ ಜನಪ್ರಿಯ ತಾರೆಯರ ಪಟ್ಟಿ ಮಾಡಿದರೆ ಅದರಿಂದ ಶ್ರುತಿ ಮತ್ತು ಶರಣ್ ಅವರನ್ನು ಹೊರಗಿಡಲಾಗದು. ಅಷ್ಟೊಂದು ಪ್ರಮುಖ ಸಿನಿಮಾಗಳಲ್ಲಿ ನಾಯಕಿಯಾಗಿ ನಾಯಕರಾಗಿ ತಾರೆಯಾಗಿ ಮರೆದಿದ್ದಾರೆ. ಹಾಸ್ಯದಿಂದ ನಾಯಕನ ಸ್ಥಾನಕ್ಕೆ ಧುಮುಕಿರುವ ಶರಣ್ ಪ್ರಸ್ತುತ ಕನ್ನಡದ ಯುವತಾರೆಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ಬ್ಯುಸಿ... Read more »

ಮುಖ್ಯಮಂತ್ರಿಗೆ ಮನವಿ ನೀಡಿದ ತಾರಾ ಅನುರಾಧ

ಕೋವಿಡ್ 19 ದಾಳಿ ಹಾಗೂ ಇದನ್ನು ತಡೆಯಲು ಜಾರಿಯಲ್ಲಿರುವ ಲಾಕ್ಡೌನ್ ನಿಂದಾಗಿ ಇತರ ಕ್ಷೇತ್ರಗಳಂತೆ ಕನ್ನಡ ಚಲನಚಿತ್ರರಂಗವೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಂತಹ ಕೆಲ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ನಟಿ, ರಾಜಕಾರಣಿ ತಾರಾ ಅವರು ಇಂದು ಮುಖ್ಯಮಂತ್ರಿಗಳಿಗೆ ಒಂದು ವರದಿಯನ್ನು ನೀಡಿ, ಪರಿಹರಿಸುವಂತೆ... Read more »

ಕರಿಚಿರತೆ ಕಂಡಂತೆ ಅಣ್ಣಾವ್ರ ಅಭಿಮಾನ

ಇವತ್ತು ಡಾ.ರಾಜ್ ಕುಮಾರ್ ಪುಣ್ಯಸ್ಮರಣೆ ದಿನ. ಚಿತ್ರರಂಗದವರು ಸೇರಿದಂತೆ ಕನ್ನಡಿಗರೆಲ್ಲರು ಕೂಡ ಲಾಕ್ಡೌನ್ ನಡುವೆಯೂ ಡಾ.ರಾಜ್ ನೆನಪಿನಲ್ಲಿದ್ದಾರೆ. ಅದು ಆ ಧೀಮಂತ ವ್ಯಕ್ತಿಗಿರುವಂಥ ಶಕ್ತಿ. ಇಂದು ಅಣ್ಣಾವ್ರ ನೆನಪನ್ನು ಹಂಚಿಕೊಂಡ ತಾರೆಯರಲ್ಲಿ ಕನ್ನಡದ ‘ಕರಿಚಿರತೆ’ ದುನಿಯಾ‌ವಿಜಯ್ ಕೂಡ ಒಬ್ಬರು. ಎಂದಿನಂತೆ ಫೇಸ್ಬುಕ್ ಮೂಲಕ ಮನಸು... Read more »

ಅಭಿಮಾನಿಗಳನ್ನು ಅಭಿನಂದಿಸಿದ ದುನಿಯಾ ವಿಜಯ್

ಅಭಿಮಾನಿಗಳನ್ನು ಸ್ನೇಹಿತರಂತೆ ಕಾಣುವ ನಟನಿದ್ದರೆ ಬಹುಶಃ ಅದು ದುನಿಯಾ ವಿಜಯ್ ಎನ್ನಬಹುದು. ಯಾಕೆಂದರೆ ಅವರು ಸೆಲ್ಫೀ ಹೊಡೆಸಿಕೊಳ್ಳುವಾಗ ಮಾತ್ರ ಅಭಿಮಾನಿಯ ಹೆಗಲ‌ಮೇಲೆ ಕೈ ಹಾಕುವ ಸ್ಟಾರ್ ಅಲ್ಲ. ಸದಾ ಬೆಂಬಲವಾಗಿ ಧೈರ್ಯ ನೀಡುವ ಸ್ಟಾರ್. ಹಾಗಾಗಿಯೇ ಅವರ ಅಭಿಮಾನಿಗಳಿಗೂ ಸಹ ದುನಿಯಾ ವಿಜಯ್ ಎಂದರೆ... Read more »

ಅಮೆಜಾನ್ ನಲ್ಲಿ ‘ಬಬ್ರೂ’

ಸುಮನ್ ನಗರಕರ್ ಪ್ರೊಡಕ್ಷನ್ಸ್‌ ಹಾಗೂ ಯುಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಸುಜಯ್ ರಾಮಯ್ಯ ನಿರ್ದೇಶನದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಬಬ್ರೂ‌ ಚಿತ್ರ ಈಗ ಅಮೇಜಾನ್ ಪ್ರೈಮ್ ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ.ಸುಮನ್ ನಗರಕರ್,‌ ಮಾಹಿ ಹಿರೇಮಠ್, ಪ್ರಕೃತಿ ಕಶ್ಯಪ್ ಮುಂತಾದ ವರ ತಾರಾಬಳಗ ಈ ಚಿತ್ರದಲ್ಲಿದೆ. ಮಾಧ್ಯಮ... Read more »

ಸಹಾಯ ಬೇಡಿದ ದುನಿಯಾ‌ ವಿಜಯ್!

ಸದಾ ಯಾರಿಗಾದರೂ ಸಹಾಯ ಹಸ್ತ ಚಾಚುವ ದುನಿಯಾ ವಿಜಯ್ ಯಾರಿಂದ ಸಹಾಯ ಕೇಳಿದ್ರು ಅಂತ ಯೋಚನೆ ಮಾಡಬೇಡಿ. ಅವರು ಬೇಡಿದ್ದು ಸರ್ಕಾರವನ್ನು. ಅದು‌ ತಮ್ಮ ಬಳಿ ಬಂದ ದಿನಗೂಲಿ ಕಾರ್ಮಿಕಾರಿಗಾಗಿ. ಅವರು ಫೇಸ್ಬುಕ್ ನಲ್ಲಿ ಬರೆದಿರುವುದು ಹೀಗೆ. “ನಾನು ಇದನ್ನು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಆದರೆ... Read more »

ಲಾಕ್ಡೌನ್ ಬಗ್ಗೆ ಸಿ ಎಂ ಗೆ ಉಪ್ಪಿ ಮನವಿ

ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯದ ಲಾಕ್ಡೌನ್ ಪರಿಸ್ಥಿತಿಯ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಾಮಾಜಿಕ ಜಾಲತಾಣದ ಮೂಲಕ ಒಂದು ಮನವಿ ನೀಡುವುದಾಗಿ ಸೂಚಿಸಿರುವ ಉಪೇಂದ್ರ ಉಲ್ಲೇಖಿಸಿರುವ ವಿಚಾರಗಳು ನಿಜಕ್ಕೂ ಯೋಚಿಸಬೇಕಾದಂಥ ಸಂಗತಿಗಳಾಗಿವೆ . ಮಾನ್ಯ... Read more »

ಉಪ್ಪಿ ಹೇಳಿದ ದೀಪ ಯಾವುದು..?!

ಪ್ರಧಾನ ಮಂತ್ರಿಗಳ ಕರೆಯಂತೆ ಭಾನುವಾರ ದೇಶದೆಲ್ಲೆಡೆ ದೀಪಾವಳಿಯಾಗಿದೆ. ಮುಂದಿನ ದಿನಗಳಲ್ಲಿ ಜನರು ಇನ್ನಷ್ಟು ಸಂಭ್ರಮಿಸುವ ಸಂದರ್ಭ ಸೃಷ್ಟಿಸಲಿ ಎನ್ನುವುದು ನಮ್ಮ ಹಾರೈಕೆಯೂ ಹೌದು. ಆದರೆ ಇದರ ನಡುವೆ ಪ್ರಧಾನಿಯವರ ದೀಪ ಬೆಳಗಿಸುವ ಕರೆಯನ್ನು ವಿರೋಧಿಸಿದವರೂ ಇದ್ದರು. ಅದಕ್ಕೆ ಕಾರಣ ಪ್ರಸ್ತುತ ಸಂದರ್ಭದಲ್ಲಿ ಭಾರತದ ಪ್ರಧಾನಿ... Read more »

‘ಬುಲೆಟ್’ ಎಂದು ಹೆಸರಿಟ್ಟಿದ್ದೇ ರವಿಚಂದ್ರನ್..!

ಜನಪ್ರಿಯ ನಟ ಬುಲೆಟ್ ಪ್ರಕಾಶ್ ಅವರು ಹಾಸ್ಯ ನಟನಾಗಿ ಮಾತ್ರ ಎಲ್ಲರಿಗೂ ಗೊತ್ತು. ಆದರೆ ಅವರನ್ನು ಬಾಲನಟನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಆ ಚಿತ್ರವೇ `ಶಾಂತಿ ಕ್ರಾಂತಿ’. ಆ ಚಿತ್ರ ನಿರೀಕ್ಷಿತ ಗೆಲುವು ಪಡೆಯದೇ ಇರಬಹುದು. ಆದರೆ ಅದು ಮಾಡಿದಂಥ... Read more »

ಸಂಗೀತದಲ್ಲೇ ಸಂಕಟ ತೋಡಿಕೊಂಡ ವಹಾಬ್ ಸಲೀಮ್

ವಹಾಬ್ ಸಲೀಮ್ ಸಿನಿಮಾ ಸಂಗೀತ ನಿರ್ದೇಶಕ. ಎರಡು ಕನ್ನಡ ಹಾಗೂ ಒಂದು ತುಳು ಚಿತ್ರದ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ. ಆದರೆ ಅವರು ಈಗ ಸುದ್ದಿಯಾಗಿರುವುದು `ಬಾಹುಬಲಿ’ ಚಿತ್ರದಲ್ಲಿ ಕೈಲಾಶ್ ಖೇರ್ ಹಾಡಿರುವ ಗೀತೆಯ ಮೂಲಕ! ಅಂದರೆ ಆ ಹಾಡನ್ನು ಸಾಂದರ್ಭಿಕವಾಗಿ ಕನ್ನಡಗೊಳಿಸಿದ್ದಾರೆ. ಸ್ವತಃ ಸಾಹಿತ್ಯವನ್ನು... Read more »

‘ಬಸಣ್ಣಿ ಬಾ..’ ಈಗ ‘ಕೊರೊನ ಗೋ..!’

ಕಳೆದ ವರ್ಷದ ಜನಪ್ರಿಯ ಹಾಡುಗಳಲ್ಲೊಂದು ಬಸಣ್ಣಿ ಬಾ..' ಹಾಡು! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದಯಜಮಾನ’ ಚಿತ್ರದ ಈ ಗೀತೆಯದೇ ರಾಗ ಬಳಸಿಕೊಂಡು ಕೊರೋನ ಗೋ..' ಎನ್ನುವ ಹಾಡು ತಯಾರಾಗಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ... Read more »

ನಿರ್ಮಾಪಕರ ಸಹಾಯಕ್ಕಾಗಿ ವಾಣಿಜ್ಯ ಮಂಡಳಿಗೆ ಮನವಿ ನೀಡಿದ ಭಾ.ಮಾ ಹರೀಶ್

ದಿಢೀರ್ ಲಾಕ್ಡೌನ್ ನಿಂದಾಗಿ ಎಲ್ಲ ಕಡೆಯೂ ಸಮಸ್ಯೆಯಾಗಿರುವುದು ಗೊತ್ತೇ ಇದೆ. ಎಂದಿನ ಹಾಗೆ ಸಮಾಜ ಸೇವಕರ ಜತೆಗೆ ಚಲನಚಿತ್ರರಂಗದ ಪ್ರಮುಖರು ಕಷ್ಟದಲ್ಲಿರುವವರಿಗೆ ಅಗತ್ಯದ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ವಿಚಿತ್ರ ಏನೆಂದರೆ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಾರಣವಾಗುವ ನಿರ್ಮಾಪಕರು ಕೂಡ ಪ್ರಸ್ತುತ ಸಂಕಷ್ಟದಲ್ಲಿದ್ದಾರೆ. ಆದರೆ... Read more »

ಸೆಲ್ಫೀಗೂ ಕೂಡ ಮಾಸ್ಕ್ ಬಿಚ್ಚದ ಪ್ರಥಮ್!

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಈಗ ಎಲ್ಲರ ಪ್ರಥಮ ಆದ್ಯತೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಹಿಡಿದು, ಅದೆಂಥ ಸೆಲೆಬ್ರಿಟಿಗಳನ್ನು ಕೂಡ ಸಲೀಸಾಗಿ ಸಮೀಪಿಸಿ ಸಲುಗೆಯಿಂದ ಎನ್ನುವಂತೆ ಸೆಲ್ಫೀ ಗಿಟ್ಟಿಸಿಕೊಳ್ಳುವಲ್ಲಿ ಪ್ರಥಮ್ ನನ್ನು ಮೀರಿಸಿದವರಿಲ್ಲ. ಮಾತ್ರವಲ್ಲ ತಮ್ಮ ಬಳಿಗೆ ಬಂದು ಸೆಲ್ಫೀ ಕೇಳುವವರಿಗೆ ಕೂಡ ಅಷ್ಟೇ ಆತ್ಮೀಯತೆಯಿಂದ... Read more »
error: Content is protected !!