‘ಒರಟ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ತಿರುಗಿ ನೋಡುವಂಥ ಚಿತ್ರ ನೀಡಿದವರು ಶ್ರೀ. ಅಂಥ ಶ್ರೀ ನಿರ್ದೇಶನದ ಹೊಸ ಚಿತ್ರ ‘ಶಬರಿ’ಯ ಟೀಸರ್ ಇದೀಗ ಬಿಡುಗಡೆಯಾಗಿದೆ.
ಟೀಸರ್ ರಿಲೀಸ್ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಲಹರಿ ವೇಲು ಅವರು ಮಾತ ಪ್ರಕರಣನಾಡಿ, ನಿರ್ದೇಶಕ ಶ್ರೀ ಅವ ಜಲಜನಕ ಜಲಜನಕರು ನಮ್ಮ ಕಚೇರಿಗೆ ಬಂದಿದ್ದರು. ಅವರು ಕಾರ್ಪೊರೇಟ್ ಶೈಲಿಯಲ್ಲಿ ಹೇಳಿದ ಬಜೆಟ್ ನಲ್ಲೇ ಚಿತ್ರ ಮುಗಿಸಿರುವುದಾಗಿ ತಿಳಿಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಬರಿ ಚಿತ್ರದ ಹಾಡುಗಳನ್ನು ಈಗಾಗಲೇ ಆಲಿಸಿದ್ದೇನೆ. ಹೇಮಂತ್ ಕುಮಾರ್ ಅವರ ಸಂಗೀತ ನಿರ್ದೇಶನ ಅದ್ಭುತವಾಗಿದೆ ಎಂದ ವೇಲು ಅವರು ಆಡಿಯೋ ಹಕ್ಕು ತಾವೇ ಖರೀದಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಪ್ರೇಮಲೋಕ, ರಣಧೀರ ಮೊದಲಾದ ಚಿತ್ರದ ಹಾಡುಗಳನ್ನು ಲಹರಿಯಲ್ಲಿ ಕೇಳಿ ಬೆಳೆದವರು ನಾವು. ಅಂಥ ಹೆಸರು ಪಡೆದ ಲಹರಿಗೆ ನಮ್ಮಹಾಡುಗಳು ಪಡೆದಿರುವುದು ಖುಷಿಯಾಗಿದೆ ಎಂದರು ನಿರ್ದೇಶಕ ಶ್ರೀ. ಇನ್ನು ಕಾರ್ಪೋರೇಟ್ ರೀತಿಯಲ್ಲಿ ಅಗ್ರಿಮೆಂಟ್ ಮಾಡಲು ಕಾರಣ ನಾನೊಬ್ಬನೇ ಅಲ್ಲ. ಎಲ್ಲವೂ ಚಿತ್ರತಂಡ ಜತೆಯಾಗಿದ್ದರಿಂದಲೇ ಮಾಡಲು ಸಾಧ್ಯವಾಗಿದೆ. ನನ್ನ ಪ್ರಕಾರ ಯಾವಾಗಲೂ ನಿರ್ಮಾಪಕರಿಗೆ ಧೈರ್ಯ ಬೇಕು. ನಿರ್ದೇಶಕರಿಗೆ ಭಯ ಇರಬೇಕು. ಸಾಮಾನ್ಯವಾಗಿ ನಿರ್ಮಾಪಕರಲ್ಲಿ ಅನ್ನ ಸಾಂಬಾರು ಕೇಳಿದರೆ ಅನ್ನ ಮಾತ್ರ ಕೊಡುವವರೇ ಹೆಚ್ಚು. ಆದರೆ ಇಲ್ಲಿ ಮೃಷ್ಟಾನ್ನ ಸಿಕ್ಕಿದೆ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ಶ್ರೀ, ಶಬರಿ ಎನ್ನುವ ಈ ಕತೆ ಹುಟ್ಟಲು ನನ್ನ ಮಗನೇ ಸ್ಫೂರ್ತಿ. ಚಿತ್ರದಲ್ಲಿ
ಪ್ರಧಾನ ಪಾತ್ರವೇ ಜೀಪ್. ಮಕ್ಕಳ ಬಾಲ್ಯದ ಆಸೆಗಳು ದೊಡ್ಡ ಮಟ್ಟದಲ್ಲಿ ಬೆಳೆದಾಗ ಆಯಾ ವಸ್ತುಗಳ ಜತೆಗಿನ ಬಾಂಧವ್ಯ ಹೇಗಿರುತ್ತದೆ ಎನ್ನುವುದು ಈ ಚಿತ್ರದ ಒನ್ ಲೈನ್ ಸ್ಟೋರಿ ಎಂದು ಚಿಕ್ಕದಾಗಿ ವಿವರಿಸಿದರು. ಕಂಟೆಂಟೇ ಈ ಚಿತ್ರದ ಹೀರೋ. ಹಾಗಾಗಿ ಕಥಾ ನಾಯಕ ಸಮರ್ಥ್ ಗೆ ಸ್ಟಾರ್ ಇಮೇಜ್ ನೀಡುವ ಬದಲು ಕಲಾವಿದನಾಗಿ ತೋರಿಸಿರುವುದಾಗಿ ತಿಳಿಸಿದರು.
ನಾಯಕ ನಟ ಸಮರ್ಥ್ ಮಾತನಾಡಿ “ನಾನು 8 ವರ್ಷಗಳಿಂದ ರಂಗಭೂಮಿಯಲ್ಲಿದ್ದೇನೆ. ರಂಗಶಂಕರ, ಜಾಗೃತಿ ಮೊದಲಾದ ತಂಡಗಳಲ್ಲಿ ಸಾಕಷ್ಟು ನಾಟಕಗಳನ್ನು ಮಾಡಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಶೂಟಿಂಗ್ ಒಂದು ರೀತಿ ಪಿಕ್ನಿಕ್ ತರಹ ಇತ್ತು. ಶಬರಿ ಚಿತ್ರಕ್ಕಾಗಿ ರಕ್ತ, ಬೆವರು, ಕೂದಲು ಕೊಟ್ಟಿದ್ದೇನೆ’ ಎಂದರು. ನಾಯಕಿಯಾಗಿ ನಟಿಸುತ್ತಿರುವ ಕೃತ್ತಿಕಾ ತಾವು ಈ ಹಿಂದೆ ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದು,
ನಾಯಕ ನಟಿಯಾಗಿ ಇದು ತಮ್ಮ ಮೊದಲ ಚಿತ್ರ ಎಂದರು. ಶಬರಿಯಲ್ಲಿ ತಾನು ಗೌಡರ ಮಗಳ ಪಾತ್ರ ಮಾಡಿರುವುದಾಗಿ ಕೃತ್ತಿಕಾ ತಿಳಿಸಿದರು.
ಕಿರುತೆರೆಯ ಜನಪ್ರಿಯ ‘ರಾಣಿ’ ಧಾರಾವಾಹಿ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ಬಾಲನಟಿ ಧನ್ವಿ ಈ ಚಿತ್ರದಲ್ಲಿ ಒಂದು ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿ ಕೂಡ ಧಾರಾವಾಹಿಗಳಲ್ಲಿ ನಟಿಸಿರುವ ತನಗೆ ಇದು ಮೊದಲ ಚಿತ್ರ ಎಂದು ಧನ್ವಿ ತಿಳಿಸಿದರು. ಈ ವಯಸ್ಸಿನಲ್ಲೇ ತುಂಬಾ ವೃತ್ತಿಪರ ವಾಗಿರುವ ಈಕೆ ಕನ್ನಡದ ಬೇಬಿ ಶ್ಯಾಮಿಲಿ ಎಂದು ನಿರ್ದೇಶಕರು ಪ್ರಶಂಸಿಸಿದರು.

ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿರುವ ಸೀತಾ ಹರ್ಷವರ್ಧನ್ ಮಾತನಾಡಿ, ನಿರ್ದೇಶಕ ಶ್ರೀ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಣ್ಣ ಪಾತ್ರ ಮಾಡಿರುವ ತಮಗೂ ಕೂಡ ಪೂರ್ತಿ ಕಥೆಯನ್ನು ಹೇಳಿದ್ದಾರೆ. ಈ ರೀತಿ ಹೇಳಿದಾಗ ನಾವು ಕೂಡ ಪಾತ್ರದಲ್ಲಿ ಸಂಪೂರ್ಣ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಪರದೆ ಮೇಲೆ ಸೀತಾಗೆ ಜೋಡಿಯಾಗಿ ನಟಿಸಿರುವ ನೀನಾಸಂ ಅಶ್ವತ್ಥ್ ನಿರ್ದೇಶಕ ಶ್ರೀ ಅವರೊಂದಿಗೆ ಹಿಂದೆಯೂ ಸಿನಿಮಾ ಮಾಡಿದ್ದೇನೆ. ಕಲಾವಿದರಿಗೆ ಸ್ವಾತಂತ್ರ್ಯ ಕೊಡುತ್ತಾರೆ ಎಂದರು.
ಚಿತ್ರಕ್ಕೆ ಮೂವರು ನಿರ್ಮಾಪಕರು ಜತೆಯಾಗಿ ಬಂಡವಾಳ ಹೂಡಿದ್ದಾರೆ. ಅವರಲ್ಲಿ ಒಬ್ಬರಾದ ರಮೇಶ್ ಬಿ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ತಮ್ಮ ಪುತ್ರನೇ ಈ ಚಿತ್ರದ ನಾಯಕ ಎಂದ ರಮೇಶ್ ಆತ ಬಾಲ್ಯದಿಂದಲೇ ಪ್ರತಿಭಾವಂತ ಎಂದರು. ಮತ್ತೋರ್ವ ನಿರ್ಮಾಪಕ ಸುಧಾಕರ ರೆಡ್ಡಿ ಮಾತನಾಡಿ, ನಿರ್ದೇಶಕರು ನಿಜಕ್ಕೂ ಒರಟನೇ. 40 ದಿನಗಳಲ್ಲಿ ಮುಗಿಸುವುದಾಗಿ ಹೇಳಿದವರು ಹಾಗೆಯೇ ಮುಗಿಸಿಕೊಟ್ಟಿದ್ದಾರೆ ಎಂದರು. ಮಗದೋರ್ವ ನಿರ್ಮಾಪಕ ವಿಷ್ಣುಕಾಂತ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
‘ತಲೆದಂಡ’ ನಿರ್ದೇಶಕ ಪ್ರವೀಣ್ ಕೃಪಾಕರ್, ‘ಕಾಮನ್ ಮ್ಯಾನ್’ ನಿರ್ಮಾಪಕ ನರಸಿಂಹಮೂರ್ತಿ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.

