ಸಪ್ತ ಗಣ್ಯರ ಸಮ್ಮುಖದಲ್ಲಿ ‘ನೀ ನಂಗೆ ಅಲ್ಲವಾ’ ಟ್ರೇಲ‌ರ್ ಅನಾವರಣ

ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ‘ನೀ ನಂಗೆ ಅಲ್ಲವಾ’ ಚಿತ್ರದ ಟ್ರೇಲರ್ ಬಿಡುಗಡೆ ಮಂದಿ ಶೀರ್ಷಿಕೆಯಿಂದಲೇ ಗಮನ ‘ನೀ ನಂಗೆ ಅಲ್ಲವಾ’ ಚಿತ್ರದ ಸಮಾರಂಭಕ್ಕೆ ಕನ್ನಡದ ಆರು ಮಂದಿ ನಿರ್ದೇಶಕರು ಮತ್ತು ಒಬ್ಬ ಯಶಸ್ವಿ ನಿರ್ಮಾಪಕ ಆಗಮಿಸಿ ಶುಭ ಕೋರಿದ್ದಾರೆ.

‘ನೀ ನಂಗೆ ಅಲ್ಲವಾ’ ಎನ್ನುವ ಶೀರ್ಷಿಕೆಯಲ್ಲೇ ಪಾಸಿಟಿವ್ ವೈಬ್ ಇದೆ ಎಂದರು ಕನ್ನಡದ ಜನಪ್ರಿಯ ನಿರ್ದೇಶಕ ಶಶಾಂಕ್. ಮತ್ತೋರ್ವ ನಿರ್ದೇಶಕ ಪವನ್ ಒಡೆಯರ್ ಮಾತನಾಡಿ, ಹೊಸ ಚಿತ್ರಗಳ ಗೆಲುವು ಚಿತ್ರರಂಗಕ್ಕೆ ಶಕ್ತಿ ನೀಡುತ್ತದೆ ಎಂದರು. “ಈ ಚಿತ್ರದ ಛಾಯಾಗ್ರಾಹಕ ಉದಯ್ ಲೀಲ ಈ ಹಿಂದೆ ತಮ್ಮ ನಿರ್ದೇಶನದ ಭರ್ಜರಿ ಮತ್ತು ಬಹದ್ದೂ‌ರ್ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದನ್ನು ನೆನಪಿಸಿಕೊಂಡರು, ನಿರ್ದೇಶಕ ಚೇತನ್. ಯುವ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ ಈ ಚಿತ್ರದ ನಾಯಕ, ನಾಯಕಿ ಇಬ್ಬರೂ ಭರವಸೆಯ ಕಲಾವಿದರಾಗಿ ಕಾಣಿಸುತ್ತಾರೆ ಎಂದರು. ಮತ್ತೋರ್ವ ನಿರ್ದೇಶಕರಾದ ಗುರುದತ್ ಮಾತನಾಡಿ, ‘ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಇದುವರೆಗೆ ಮಾಡಿರುವ ಚಿತ್ರಗಳೆಲ್ಲವೂ ಹೊಸಬರದ್ದೇ. ಹೀಗೆ ಹೊಸಬರಿಗೆ ಪ್ರೋತ್ಸಾಹ ನೀಡುವ ನಿರ್ಮಾಪಕರು ಗೆಲ್ಲಬೇಕು’ ಎಂದರು. ನಿರ್ದೇಶಕ ರೋಹಿತ್ ಪದಕಿ ಕೂಡ ಚಿತ್ರತಂಡಕ್ಕೆ ಶುಭಕೋರಿದರು. ಶುಭ ಕೋರಲು ಬಂದ ನಿರ್ದೇಶಕರ ನಡುವೆ ಸದ್ಯದ ಯಶಸ್ವಿ ನಿರ್ಮಾಪಕ, ‘ಪ್ರೇಮದ ಊರಲಿ’ ಖ್ಯಾತಿಯ ನಿರ್ಮಾಪಕ ದೇವೇಂದ್ರ ಮೇದರಮೆಟ್ಲ ಕೂಡ ಆಗಮಿಸಿ ಚಿತ್ರತಂಡಕ್ಕೆ ಪ್ರೋತ್ಸಾಹದ ಮಾತುಗಳನ್ನಾಡಿದರು.

ಚಿತ್ರದ ನಿರ್ದೇಶಕ ಮನೋಜ್ ಪಿ.ನಡಲಮನೆ ಮಾತನಾಡಿ, ಇದು ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಸಿನೆಮಾ ಮೂಲಕವಾದರೂ ನಾನು ಹೊಸಬ ಎನ್ನುವ ಹಣೆ ಪಟ್ಟಿಯಿಂದ ದೂರಾಗುವ ಹಾಗೆ ಆಗಲಿ ಎಂದು ಹೇಳಿಕೊಂಡರು, ನಾಯಕ ನಟ ರಾಹುಲ್ ಮಾತನಾಡಿ, ಈ ಚಿತ್ರದ ನಿರ್ದೇಶಕ ಮನೋಜ್ ಪಿ.ನಡಲಮನೆ ನನಗೆ ಅಣ್ಣನಂತೆ. ಅದೇ ರೀತಿ ನಿರ್ಮಾಪಕರು ದೇವರಂತೆ ಬಂದಿದ್ದಾರೆ. ಎಲ್ಲರ ಸಹಕಾರ ದೊಡ್ಡದು. ಡಾಬ ಸೆಟ್ ಮಳೆ ಬಂದು ಹಾಳಾಗಿದ್ದಾಗ ಆರ್ಟ್ ಡಿಪಾರ್ಟೆಂಟ್ ಒಂದೇ ದಿನದಲ್ಲಿ ಮತ್ತೆ ಸರಿ ಮಾಡಿತ್ತು ಎಂದು ತಂಡದ ಒಗ್ಗಟ್ಟನ್ನು ನೆನಪಿಸಿಕೊಂಡರು.

ಯುವ ನಟಿ ಕಾಶಿಮಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ‘ಖುಷಿ’ ಎನ್ನುವ ಪಾತ್ರ ಮಾಡಿದ್ದೇನೆ. ಸಮಾಜದಲ್ಲಿ ಹೆಣ್ಣು ಮಗಳೊಬ್ಬಳ ಕಷ್ಟವನ್ನು ತುಂಬ ರಿಯಲಿಸ್ಟಿಕ್ ಆಗಿ ತೋರಿಸಿರುವ ಚಿತ್ರ ಇದು ಎಂದರು. ತಮ್ಮ ಮನೆ ಮಂದಿ ನೀಡುತ್ತಿರುವ ಸಹಕಾರವನ್ನು ನೆನೆದು ಭಾವುಕರಾದರು. ನಾಯಕನ ತಂದೆಯ ಪಾತ್ರ ಮಾಡಿರುವ ಮಂಜುನಾಥ ಹೆಗ್ಡೆ ಮಾತನಾಡಿ, “ನಿರ್ದೇಶಕ ಮನೋಜ್ ತುಂಬ ವೇಗವಾಗಿ ಚಿತ್ರೀಕರಣ ಮಾಡುತ್ತಾರೆ. ಅವರ ಪೂರ್ವತಯಾರಿ ಮೆಚ್ಚಬೇಕಾದ ಅಂಶ” ಎಂದರು.

ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ, ‘ಇದು ಒಂದು ಮನರಂಜನಾತ್ಮಕ ಚಿತ್ರ. ಎಲ್ಲರಿಗೂ ಇಷ್ಟವಾಗುತ್ತೆ ಎಂದು ಅಂದೊಂಡಿದ್ದೇನೆ. ಪತ್ನಿ ಪಲ್ಲವಿ ನನ್ನ ಬೆಂಬಲವಾಗಿದ್ದಾರೆ” ಎಂದರು. ಸೌಂಡ್ ಡಿಸೈನರ್ ನವೀನ್, ಸಂಗೀತ ನಿರ್ದೇಶಕ ಸೂರಜ್, ಛಾಯಾಗ್ರಾಹಕ ಉದಯ್ ಲೀಲ, ನಟಿ ಆರತಿ ಪಡುಬಿದ್ರಿ ಮೊದಲಾದವರು ಉಪಸ್ಥಿತರಿದ್ದು ತಮ್ಮ ಅನುಭವ ಹಂಚಿಕೊಂಡರು.

Recommended For You

Leave a Reply