ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಟ್ಟರೆ ಏನೆಲ್ಲ ಆಗಬಹುದು? ಅದಕ್ಕೊಂದು ಒಳ್ಳೆಯ ಘಟನೆ ಉದಾಹರಣೆಯಾಗಿ ಸಿಕ್ಕಿದೆ. ಅದು ಕತೆಗಾರ ಟಿ.ಕೆ ದಯಾನಂದ್ ಅವರ ಮನೆಯಿಂದ. ಅವರ ನಾದಿನಿಯ ನಾಲ್ಕು ವರ್ಷದ ಮಗಳು ಆದ್ಯ ಮಾಡಿದ ಕಿತಾಪತಿ ಏನು ಎನ್ನುವುದನ್ನು ತಮ್ಮದೇ ಮಾತುಗಳಲ್ಲಿ ಹೀಗೆ ಹೇಳಿಕೊಂಡಿದ್ದಾರೆ!... Read more »
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ಟಿ.ಆರ್ ಪನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುವಿನಲ್ಲಿ ರವಿತೇಜ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಟೈಟಲನ್ನು ಲೋಕಾರ್ಪಣೆ ಮಾಡಲಾಗಿದೆ. ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ.... Read more »
ಆರಂಭದಿಂದಲೂ ಚಿತ್ರರಂಗದ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಸದಾ ಕೈ ಜೋಡಿಸಿರುವ ನಟ ಡಾ. ಶಿವರಾಜ್ ಕುಮಾರ್. ಇದೀಗ ತಮ್ಮ ಖಾಸಗಿ ಸಂತೋಷವನ್ನು ಕೂಡ ಚಿತ್ರರಂಗದ ಸದಸ್ಯರೊಡನೆ ಹಂಚಿಕೊಂಡಿದ್ದಾರೆ. ಅದಕ್ಕೆ ಎಡೆ ಮಾಡಿಕೊಟ್ಟಿರುವುದು ಅವರ ಮುದ್ದಿನ ಮಡದಿ ಗೀತಾ ಅವರ ಜನ್ಮದಿನ. ಇಂದು ಹುಟ್ಟಿದ ದಿನಾಚರಣೆಯ... Read more »
ಅನಿರುದ್ಧ ಜಟ್ಕರ್ ಅವರು ಈಗ ಜನಪ್ರಿಯತೆಯ ತುದಿ ತಲುಪಿರುವುದು ‘ಜೊತೆ ಜೊತೆಯಲಿ ಎನ್ನುವ ಕಿರುತೆರೆ ಧಾರಾವಾಹಿಯ ಮೂಲಕ. ಆದರೆ ಅವರ ಹಿನ್ನೆಲೆ, ಬೆಳೆದು ಬಂದ ದಾರಿ, ಅವರಿಗಿರುವ ಅನುಭವ, ಪ್ರತಿಭೆಯನ್ನು ಗಮನಿಸಿದರೆ ಇಂದಿನ ಯಾವ ಸಿನಿಮಾ ಸ್ಟಾರ್ ಗೂ ಕಡಿಮೆ ಇಲ್ಲ. ಆದರೆ ಇಂಥ... Read more »
ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ಅವರು ಜೀವನದಲ್ಲಿ ಸಾಕಷ್ಟು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು. ಅದರಲ್ಲಿ ‘ಉಸಿರು’ ಎನ್ನುವ ಸಂಘಟನೆಯೊಂದಿಗೆ ಅವರು ಹಂಚಿಕೊಂಡ ವಿಚಾರಗಳೂ ಇದ್ದವು. ಅವುಗಳನ್ನು ನೆರವೇರಿಸಲು ‘ಉಸಿರು’ ಕೋವಿಡ್ ಆಕ್ಸಿಜನ್ ಕೇರ್ ಸೇವಾ ಸಂಸ್ಥೆಯ ಸ್ಥಾಪಕ ಕವಿರಾಜ್ ತಮ್ಮ ಸಂಘಟನೆಯೊಂದಿಗೆ ಮುಂದೆ... Read more »
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಥಮ ಬಾರಿಗೆ ಅರ್ಧಕ್ಕೆ ಸ್ಥಗಿತವಾಗಿತ್ತು. ಆದರೆ ಕಲರ್ಸ್ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ ಗುಂಡ್ಕಲ್ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮುಂದುವರಿಸುವ ಪಣ ತೊಟ್ಟಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ ನಲ್ಲಿ ಹಂಚಿಕೊಂಡ ಮಾಹಿತಿಯನ್ನು ಅದೇ ರೀತಿ ಇಲ್ಲಿ... Read more »
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಮೆದುಳು ನಿಧನವಾಗಿದೆ. ಶನಿವಾರ ರಾತ್ರಿ ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಏಟು ಮಾಡಿಕೊಂಡಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇದನ್ನು ವೈದ್ಯರು ಬ್ರೈನ್ ಡೆತ್ ಎಂದಿದ್ದಾರೆ. ಲಾಕ್ಡೌನ್ ದಿನಗಳಲ್ಲಿಯೂ ಕೋವಿಡ್ ಸೋಂಕಿತರ ಸಹಾಯ... Read more »
ಭಾರತೀಯ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲೋರ್ವರಾದ ಕನ್ನಡಿಗ ಕೆ.ಸಿ.ಎನ್ ಚಂದ್ರಶೇಖರ್ ಅವರು ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ನಿರ್ಮಾಪಕ ಕೆ ಸಿ ಎನ್ ಚಂದ್ರು ಅವರ ನಿಧನಕ್ಕೆ ವಯೋಸಹಜ ಕಾಯಿಲೆಯೇ ಕಾರಣ ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಭಾನುವಾರ ತಡರಾತ್ರಿ... Read more »
ನಟ ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿದೆ. ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಏಟು ಮಾಡಿಕೊಂಡಿರುವ ವಿಜಯ್ ಬನ್ನೇರುಘಟ್ಟ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ಸ್ನೇಹಿತನ ಜೊತೆಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹಿಂಬದಿ ಸವಾರನಾಗಿ ಕುಳಿತಿದ್ದ... Read more »
ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾಗಿ, ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದ ಹಿರಿಯ ಕವಿ ಸಿದ್ದಲಿಂಗಯ್ಯ (67) ಇಂದು ನಿಧನರಾಗಿದ್ದಾರೆ. ಅವರ ಸಾವಿಗೆ ಕೂಡ ಕೋವಿಡ್ 19 ಕಾರಣವಾಗಿರುವುದು ದುರಂತದ ಸಂಗತಿಯಾಗಿದೆ. ತಿಂಗಳ ಹಿಂದೆ ಕೊರೊನಾ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಲಿಂಗಯ್ಯ ಗೆದ್ದು ಬರುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು.... Read more »
ಹಿರಿಯ ನಟ ಮತ್ತು ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಸುರೇಶ್ಚಂದ್ರ (69) ನಿಧನರಾಗಿದ್ದಾರೆ. ಕೊರೊನಾ ಕಾರಣದಿಂದಾಗಿ ಈ ಸಾವು ಸಂಭವಿಸಿದೆ ಎಂದು ಅವರ ಪುತ್ರ ವಿನಯ ಚಂದ್ರ ಸಿನಿಕನ್ನಡ.ಕಾಮ್ ಗೆ ತಿಳಿಸಿದ್ದಾರೆ. ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ಅಮೂಲ್ಯನ ತಂದೆಯ ಪಾತ್ರ ನಿರ್ವಹಿಸಿದ್ದ ಸುರೇಶ್ಚಂದ್ರ ಅವರು ಆ ಮೂಲಕವೇ... Read more »
ಕನ್ನಡ ಚಿತ್ರರಂಗದ ಸಮಸ್ತರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಅಭಿಯಾನವನ್ನು ಕಳೆದ ತಿಂಗಳಾಂತ್ಯದಲ್ಲಿ ಆರಂಭಿಸಿದ್ದು ಕಲಾವಿದರ ಭವನದಲ್ಲಿ. ಆದರೆ ಅದರ ಪೋಸ್ಟರ್ ಒಂದರ ಬಿಡುಗಡೆಯ ವಿಚಾರದಲ್ಲಿ ಮೂಡಿರುವ ವಿವಾದ ಮತ್ತು ಮುಂದುವರಿದ ಪ್ರತಿಕ್ರಿಯೆಗಳಿಗೆ ಚಿತ್ರ ಸಾಹಿತಿ, ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಅವರು ಸಿನಿಕನ್ನಡದ... Read more »
ಹಿರಿಯ ನಟಿ ಜಯಾ ಅವರು ನಿನ್ನೆ ನಿಧನರಾದ ಬಗ್ಗೆ ಈಗಾಗಲೇ ನಾವು ಮಾಹಿತಿ ನೀಡಿದ್ದೇವೆ. ಆದರೆ ಇಂದು ಅವರ ಮೃತದೇಹವನ್ನು ರಸ್ತೆ ಬದಿಯಲ್ಲಿರಿಸಿ ಅವಮಾನ ಮಾಡಲಾಗಿದೆ ಎನ್ನುವ ವಿಡಿಯೋ ಒಂದು ಹರಿದಾಡುತ್ತಿದ್ದು, ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಇದು ನಟಿ ಜಯಾ... Read more »
ರಾಕ್ಷಸ ಎನ್ನುವ ಪದವನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಪ್ರೀತಿಯ ಕೆಲವರಿಗೆ ಬಳಸುತ್ತಿದ್ದರು. ಅದು ಅವರ ಮೆಚ್ಚಿನ ಮಂದಿಯ ಅಗಾಧ ಪ್ರತಿಭೆಯನ್ನು ವರ್ಣಿಸಲು ಪದ ಸಿಗದೆ ಹಾಗೆ ಹೇಳುತ್ತಿದ್ದರು. ನಮ್ಮ ಪಾಲಿಗೆ ಅಂಥ ರಾಕ್ಷಸರಲ್ಲಿ ಎಸ್ ಪಿ ಬಿಯವರೂ ಒಬ್ಬರು. ಇನ್ನು ಒಂದೇ... Read more »
ಹಿರಿಯ ನಟಿ ಜಯಾ ಬಿ (75) ನಿಧನರಾಗಿದ್ದಾರೆ. ಇಂದು ಅವರು ಸಾವಿಗೆ ಒಳಗಾಗಿದ್ದಾರೆ. ಎರಡು ತಿಂಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿದ್ದ ಅವರು ಒಂದಷ್ಟು ಕಾಲ ಚಿಕಿತ್ಸೆಯಲ್ಲಿದ್ದರು ಎಂದು ಅವರ ಸಹೋದರನ ಪುತ್ರಿ ಸಿನಿಕನ್ನಡ.ಕಾಮ್ ಗೆ ಮಾಹಿತಿ ನೀಡಿದ್ದಾರೆ. ‘ಕುಳ್ಳಿ ಜಯಮ್ಮ’ ಎಂದೇ ಖ್ಯಾತರಾಗಿರುವ ನಟಿ... Read more »
ಪೊರ್ಕಿ ಚಿತ್ರ ನೋಡಿದವರು ಇದು ಪರಭಾಷೆಯ ನಟಿ ಎಂದೇ ತಿಳಿದಿದ್ದರು. ಆ ಮಟ್ಟಿಗೆ ಆಮದು ಬೆಡಗಿಯದ ಅಂಗಸೌಂದರ್ಯದೊಡನೆ ಆಗಮಿಸಿದ ನಟಿ ಪ್ರಣೀತಾ. ನಿನ್ನೆ ಭಾನುವಾರ ಅವರ ವಿವಾಹ ನೆರವೇರಿರುವುದಾಗಿ ತಿಳಿದು ಬಂದಿದೆ. ಕೋವಿಡ್ ಕಾಲದ ನಿಯಮಗಳಂತೆ ಬೆರಳೆಣಿಕೆಯ ಮಂದಿಯ ಉಪಸ್ಥಿತಿಯಲ್ಲಿ ಪ್ರಣೀತಾ ವಿವಾಹಿತೆಯಾಗಿದ್ದಾರೆ. ಬೆಂಗಳೂರಿನ... Read more »
ಸಮಸ್ತ ಚಿತ್ರರಂಗಕ್ಕಾಗಿ ವ್ಯಾಕ್ಸಿನ್ ಡ್ರೈವ್ ನಾಳೆಯಿಂದ ಪ್ರಾರಂಭವಾಗುತ್ತಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಲಭ್ಯವಾಗಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ. ನಾಳೆ ಸೋಮವಾರ ದಿನಾಂಕ 31.5.2021ರಿಂದ ನಿರಂತರವಾಗಿ ಎರಡು ದಿನ ಬೆಳಗ್ಗೆ 10 ಘಂಟೆ ಯಿಂದ ಸಂಜೆ 5.00 ಘಂಟೆಯ ವರೆಗೂ ಚಾಮರಾಜಪೇಟೆ ಎಲ್ಲಿರುವ ನಮ್ಮ... Read more »
ರವಿಚಂದ್ರನ್ ಅವರ ವಿನೂತನ ಸಿನಿಮಾ ‘ಕನ್ನಡಿಗ’ದ ಟೀಸರ್ ನಾಳೆ ಬಿಡುಗಡೆಯಾಗಲಿದೆ. ಕನಸುಗಾರ ಅರವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಕ್ರೇಜಿಸ್ಟಾರ್ ಅಂದರೇನೇ ಕನ್ನಡ ಚಿತ್ರರಂಗದ ಅದ್ಧೂರಿ ಆಸ್ತಿ. ಅವರನ್ನು ಇರಿಸಿಕೊಂಡು ಕನ್ನಡಿಗ ಹೆಸರಿನಚಿತ್ರ ಮಾಡಿರುವವರು... Read more »
ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಅಭಿರಾಮ್ (34) ಕೋವಿಡ್ ನಿಂದ ನಿಧನರಾಗಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೋವಿಡ್ ಎರಡನೇ ಅಲೆ ಆರಂಭದಲ್ಲಿ ಉಸಿರು ಚೆಲ್ಲಿದ ಮೊದಲ ವ್ಯಕ್ತಿ ಡಿ.ಎಸ್. ಮಂಜುನಾಥ್. ಸಂಯುಕ್ತ-2 ಸಿನಿಮಾದ ಮೂಲಕ ನಿರ್ಮಾಪಕರಾಗಿ ಮತ್ತು ನಟನಾಗಿ ಮಂಜುನಾಥ್ ಚಿತ್ರರಂಗಕ್ಕೆ ಬಂದಿದ್ದವರು. ನಂತರ ಕೆಮಿಸ್ಟ್ರಿ... Read more »
ರೆಬಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಾಳೆ ದಿನಾಂಕ 29ರಂದು ಶನಿವಾರ ಮಂಡ್ಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಮತೆಯ ಮಡಿಲು ಸಂಸ್ಥೆಯ ಸಹಕಾರದೊಡನೆ ನೀಡಲಾಗುವುದಾಗಿ ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಹೊರ ರೋಗಿಗಳಿಗೆ... Read more »
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆಯವರು ಮಾಧ್ಯಮದ ಮೂಲಕ ಚಲನಚಿತ್ರ ಅಕಾಡೆಮಿ ಮತ್ತು ಮುಖ್ಯಮಂತ್ರಿಗಳಿಗೆ ಒಂದು ವಿಶೇಷ ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬದಲಾಗಿ ಅದಕ್ಕೆ ಕಾಯ್ದಿರಿಸಿದ ಹಣವನ್ನು ದುಸ್ಥಿತಿಯಲ್ಲಿರುವ ಚಿತ್ರರಂಗದ ಕಾರ್ಮಿಕರ, ಕಲಾವಿದರಿಗಾಗಿ ವಿನಿಯೋಗಿಸಲು ವಿನಂತಿಸಿದ್ದಾರೆ. ಸಿನಿಕನ್ನಡ.ಕಾಮ್ ಗೆ ದೊರಕಿರುವ ಅವರ... Read more »
