ಫಿಲ್ಮ್ ಫೆಸ್ಟಿವಲ್ ನಲ್ಲಿ ‘ಪಿಂಗಾರ’ ಪ್ರದರ್ಶನ

“ಮಂಗಳೂರು ಕರಾವಳಿಯಲ್ಲಿ ಜನರು ದೇವರ ಜತೆಗೆ ದೈವಾರಾಧನೆಯನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ. ಕೋಲ‌ ಕಟ್ಟುವವರು ದೈವವನ್ನು ತಮ್ಮ ಮೈಯ್ಯಲ್ಲಿ ಆವಾಹಿಸಿಕೊಂಡು ದರ್ಶನ ನೀಡಿ‌ ಹೇಳುವ ಮಾತನ್ನು ದೇವರ ಮಾತೇ ಎಂದು ನಂಬುತ್ತಾರೆ” ಎಂದು ಭೂತಕೋಲದ ಸಂಸ್ಕೃತಿಯ ಬಗ್ಗೆ ಯುವ ನಿರ್ಮಾಪಕ ಅವಿನಾಶ್ ಶೆಟ್ಟಿಯವರು... Read more »

‘ ಬಿಚ್ಚುಗತ್ತಿ’ ಟೈಗರ್ ಟೀಸರ್ ಬಿಡುಗಡೆ

“ತ.ರಾ.ಸು ಅವರ ಸಾಕಷ್ಟು ಕಾದಂಬರಿಗಳನ್ನು ಓದಿ ನಾವೇ ದುರ್ಗದಲ್ಲಿದ್ದ ಭಾವ ಮೂಡಿತ್ತು. ಬಿ. ಎಲ್ ವೇಣು ಅವರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಕೆಲಸ ಮಾಡುವಾಗ ಅವೆಲ್ಲವೂ ಸಹಾಯವಾಯಿತು” ಎಂದರು ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್. ಅವರು ‘ಬಿಚ್ಚುಗತ್ತಿ’ ಚಿತ್ರದ ಟೀಸರ್ ಪ್ರದರ್ಶನದ ಬಳಿಕ... Read more »

ಪ್ರಥಮ್ ಗೆ ಶುಭ ಕೋರಿದ ಅಭಿಷೇಕ್!

ಇಂದು ಪ್ರಥಮ್ ಜನ್ಮದಿನ. ಅವರು ಖುಷಿಯಲ್ಲಿದ್ದರು. ತಮ್ಮ ಖುಷಿ ಹೆಚ್ಚಿಸಿಕೊಳ್ಳಲು‌ ಹೊಸ ಚಿತ್ರದ ಹೆಸರು ಘೋಷಣೆ ಮಾಡಿದರು. ಅವರ ಖುಷಿ ದುಪ್ಪಟ್ಟಾಗುವ ಹಾಗೆ ಅಭಿಷೇಕ್ ಗೌಡ ಬಂದು ಶುಭಕೋರಿದರು. ಅಪರೂಪದ ಅತಿಥಿಯಾಗಿ ಬಂದ ಅಭಿಷೇಕ್ ಅವರನ್ನು ಪ್ರಥಮ್ ಅಷ್ಟೇ ಆದರದಿಂದ ಸನ್ಮಾನಿಸಿ‌ ಗೌರವಿಸಿದರು. ಚರ್ಚೆ... Read more »

‘ಒಂದು ಶಿಕಾರಿಯ ಕಥೆ’ ಟ್ರೇಲರ್ ಲಾಂಚ್

ಈ ಬಾರಿಯ ಬೆಂಗಳೂರು ‌ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶಿಸಲ್ಪಡುತ್ತಿರುವ ಸಿನಿಮಾ ‘ಒಂದು ಶಿಕಾರಿಯ ಕಥೆ’. ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮಲ್ಲೇಶ್ವರದ ಎಸ್ ಆರ್ ವಿ ಥಿಯೇಟರ್ ನಲ್ಲಿ‌ ನೆರವೇರಿತು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಡುವ ಕನ್ನಡ ಸಿನಿಮಾ ಮತ್ತು ಭಾರತೀಯ ಸಿನಿಮಾಗಳ... Read more »

ಜೆ.ಕೆ ನಟನೆಯ ಹಿಂದಿ ಚಿತ್ರ ಈ ವಾರ ತೆರೆಗೆ

“ದಿನಕರ ಕಪೂರ್ ಅವರ ಕತೆ ಚಿತ್ರಕತೆ ಇರುವ ಚಿತ್ರ ಇದು. ಹಿಂದಿಯಲ್ಲಿ ಅಬ್ಬಾಸ್ ಮಸ್ತಾನ್ ಅವರೊಂದಿಗೆ ಕೆಲಸ ಮಾಡಿರುವ ದಿನಕರ್ ಅವರು ತಮ್ಮ ಚಿತ್ರದಲ್ಲಿ ನೀಡುವುದಾಗಿ ಹೇಳಿದಾಗ ಖುಷಿಯಾಯಿತು” ಎಂದರು ಜೆ.ಕೆ. ಅವರು ಈ ವಾರ ಬಿಡುಗಡೆಯಾಗುತ್ತಿರುವ ‘ಪುಷ್ಪಾ ಐ ಹೇಟ್ ಟಿಯರ್ಸ್’ ಚಿತ್ರದ... Read more »

‘ಶಿವಾಜಿ’ಯ ದಿಗ್ವಿಜಯ ಶುರು

“ಡಾ.ವಿಷ್ಣುವರ್ಧನ್ ಅವರ ಒಂದು‌ ಮೂಗನ್ನು ಮಾತ್ರ ತೋರಿಸಿ ಇದು ಯಾರು ಎಂದರೆ ಕನ್ನಡದ ಪ್ರೇಕ್ಷಕರು ಅದು ವಿಷ್ಣುವರ್ಧನ್ ಎಂದು ಕಂಡು‌ಹಿಡಿಯುತ್ತಾರೆ. ಗುಳಿಕೆನ್ನೆ ತೋರಿಸಿ ಯಾರೆಂದು ಕೇಳಿದರೆ ‘ರಚಿತಾ ರಾಮ್’ ಅಂತಾರೆ. ಇಂಥ ಬುದ್ಧಿವಂತ ಪ್ರೇಕ್ಷಕರ ನಡುವೆ ನಾನು ಹೊಸ ಇಮೇಜ್ ನಲ್ಲಿ ಬರಬೇಕು ಎಂದರೆ... Read more »

ಎಂ ಆರ್ ಪಿ ಟ್ರೇಲರ್ ಲಾಂಚ್

“ನನ್ನ ಸಿನಿಮಾ ಬದುಕಿನ ಮೊದಲ ತಂಡ ಇಲ್ಲಿ ಸೇರಿದೆ. ಸಿನಿಮಾದವರ ಜತೆಗೆ ನಾನು ಹೇಗೆ ಬೆರೆಯುವುದು ಎನ್ನುವ ಆತಂಕದಲ್ಲಿದ್ದ ನನಗೆ ಎರಡೇ ದಿನದಲ್ಲಿ ಆತ್ಮೀಯರಾದ ತಂಡ ಎಂ.ಡಿ ಶ್ರೀಧರ್ ಅವರದ್ದು. ಈಗ ಈ ತಂಡದಲ್ಲಿರುವ ಹರಿಯವರು ನಾಯಕರಾಗಿರುವುದು ಖುಷಿಯ ವಿಷಯ. ತಂಡಕ್ಕೆ ಗೆಲುವು ”... Read more »

ಮನ ಸೆಳೆಯುವ `ತುರ್ತು ನಿರ್ಗಮನ’

ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ಅವರ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಆಗಮನವಾಗಿದೆ. ತಾವು ಬರುವುದರ ಜತೆಗೆ ವರ್ಷಗಳಿಂದ ಸಿನಿಮಾ ಕ್ಷೇತ್ರದ ಜತೆಗೆ ಸಂಪರ್ಕವೇ ಇಲ್ಲವೇನೋ ಎಂಬಂತಿರುವ ಸುನೀಲ್ ರಾವ್ ಅವರನ್ನು ಕೂಡ ನಾಯಕರಾಗಿ ವಾಪಾಸು ಕರೆತಂದಿದ್ದಾರೆ. ಸುನೀಲ್ ರಾವ್... Read more »

‘ನಿನ್ನ ಸನಿಹಕೆ’ ಸಾರಥಿಯಾದ ಸೂರಜ್ ಗೌಡ..!

ರಥದಲ್ಲಿ ಪ್ರಯಾಣಕ್ಕೆ ಬಂದಾತ ತಾನೇ ಸಾರಥಿಯೂ ಆಗಿಬಿಟ್ಟರೆ ಹೇಗೆ? ಅಂಥದೊಂದು ಅವಕಾಶ ಯುವನಟ ಸೂರಜ್ ಗೌಡನ ಪಾಲಿಗೆ ದೊರಕಿದೆ. `ನಿನ್ನ ಸನಿಹಕೆ’ ಚಿತ್ರವನ್ನು ನಿರ್ದೇಶಕ ಸುಮನ್ ಜಾದೂಗಾರ್ ನಿರ್ದೇಶಿಸಬೇಕಿತ್ತು. ಆದರೆ ಆ ಜಾಗಕ್ಕೆ ನಾಯಕ ಸೂರಜ್ ಬಂದಿರುವ ಬಗ್ಗೆ ಚಿತ್ರತಂಡ ಮಾಧ್ಯಮಗೋಷ್ಠಿಯಲ್ಲಿ ನೀಡಿದ ಮಾಹಿತಿ... Read more »

‘ದ ಚೆಕ್ ಮೇಟ್’ ಟೀಸರ್ ಲಾಂಚ್

ಜಗದ್ ಜ್ಯೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ಬರುತ್ತಿರುವ ಚಿತ್ರ ‘ದ ಚೆಕ್ ಮೇಟ್’ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಗರದ ಸಿಟಡಲ್ ಹೋಟೆಲ್ ನಲ್ಲಿ ನೆರವೇರಿತು. ಚಿತ್ರದ ನಿರ್ಮಾಪಕ ಮತ್ತು ನಾಯಕರಾಗಿರುವ ರಂಜನ್ ಹಾಸನ್ ಮಾತನಾಡಿ, ‘ಈ ಹಿಂದೆ ನಾನು ‘ಪಾರು ಐ ಲವ್... Read more »

‘ರುಸ್ತುಂ’ ನಲ್ಲಿತ್ತು ನನ್ನ ಕೆಟ್ಟ ಹಾಡು ಎಂದರು ರಘು ದೀಕ್ಷಿತ್!

“ನಿನ್ನ ಪೂಜೆಗೆ ಬಂದೆ ಮಾದೇಶ್ವರಾ..” ಎಂದು ಹಾಡಿ ಕೇಳುಗರೆಲ್ಲರೂ ಭಕ್ತರಾಗುವಂತೆ ಮಾಡಿದ ರಘು ದೀಕ್ಷಿತ್ ಇತ್ತೀಚೆಗೆ ಹಾಡಿರುವ ಕೆಲವು ಗೀತೆಗಳ ಬಗ್ಗೆ ಅಸಮಾಧಾನ ಇತ್ತು ಎನ್ನುವುದನ್ನು ಹೊರಗೆಡಹಿದ್ದಾರೆ. ಅದರಲ್ಲೊಂದು ಹೇಳಿ ಎಂದು ಮಾಧ್ಯಮದವರು ಒತ್ತಾಯ ಮಾಡಿದಾಗ ಅವರು ನೆನಪಿಸಿಕೊಂಡಿದ್ದು ‘ರುಸ್ತುಂ‌’ ಚಿತ್ರದ ‘ಯು ಆರ್... Read more »

‘ಶಿವಾರ್ಜುನ’ ಟ್ರೇಲರ್ ಬಿಡುಗಡೆ

ಚಿರಂಜೀವಿ ಸರ್ಜ ನಟನೆಯ ‘ಶಿವಾರ್ಜುನ’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಸಂಸದ ತೇಜಸ್ವಿ ಸೂರ್ಯ ‌ನೆರವೇರಿಸಿದರು. ಪ್ರೊಡಕ್ಷನ್ ಕಂಟ್ರೋಲರ್ ಆಗಿ ಹಲವಾರು ತಾರೆಯರ ಚಿತ್ರಗಳಿಗೆ ಕೆಲಸ ಮಾಡಿದ್ದ ಶಿವಾರ್ಜುನ ಅವರು ತಮ್ಮದೇ ಹೆಸರಿನ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಶಿವಾರ್ಜುನ ಚಿತ್ರವನ್ನು ‘ಮಳೆ’ ಚಿತ್ರದ ಶಿವ ತೇಜಸ್ ನಿರ್ದೇಶಿಸಿದ್ದು... Read more »

‘ಕನ್ನಡಿಯ ಮಾಯ’ ಹೇಳುತ್ತಾರೆ ಶ್ರೀ ಶ್ರೇಯ..!

ಕಲೆ ರಕ್ತದಲ್ಲೇ ಬರುತ್ತದೆ ಎನ್ನುತ್ತಾರೆ. ಅದು ನಿಜವಾದರೆ ಈ ಹುಡುಗಿಯ ರಕ್ತದ ಕಣಕಣದಲ್ಲಿಯೂ ಕಲೆಯಿದೆ ಎನ್ನಬಹುದು. ಯಾಕೆಂದರೆ ನಾಯಕಿಯಾಗಬೇಕು ಎನ್ನುವವರ ನಡುವೆ ಶ್ರೇಷ್ಠನಟಿಯಾಗಬೇಕು ಎನ್ನುವ ಗುರಿ ಇರಿಸಿಕೊಂಡು ಹೊರಟಂಥ ಪ್ರತಿಭೆ ಈಕೆ. ಹೆಸರು ಶ್ರೀ ಶ್ರೇಯ. ಊರು ಉಡುಪಿ. ಹೇಳಿ ಕೇಳಿ ಕಲೆಗಳ ತವರು!... Read more »

ಶಬರಿಮಲೆಗಾಗಿ ಮಾಲೆ ಧರಿಸಿದ ಶಿವಣ್ಣ

ಚಂದನವನದ ಎವರ್ ಗ್ರೀನ್ ಸುಪರ್ ಸ್ಟಾರ್ ಡಾ. ಶಿವರಾಜ್ ಕುಮಾರ್ ಶಬರಿ ಮಲೆಗೆ ಹೋಗಲು ಮಾಲೆ ಧಾರಣೆ ಮಾಡಿಕೊಂಡಿದ್ದಾರೆ. ಲಗ್ಗೆರೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಾಸ್ತ್ರ ವಿಧಿಗಳನ್ನು ಪೂರೈಸಲಾಗಿದ್ದು, ಎಂದಿನಂತೆ ಹಿರಿಯ ನಟ ಶಿವರಾಮ್ ಅವರು ಗುರುಸ್ವಾಮಿಗಳಾಗಿದ್ದಾರೆ. ಮಾರ್ಚ್ 14ರಂದು ಶಬರಿ‌ಮಲೆಗೆ ಹೊರಡಲಿದ್ದಾರೆ. ತಂಡದಲ್ಲಿ... Read more »

ಹರಿಕಥೆ ಒಂದು ಸಂಯುಕ್ತ ಕಲೆ : ಮಂಜುಳಾ ಜಿ.ರಾವ್

ನಗರದಾದ್ಯಂತ ಎಲ್ಲ ದೇವಾಲಯಗಳಲ್ಲಿ ಅದ್ಧೂರಿಯಾದ ಶಿವರಾತ್ರಿ ಜಾಗರಣೆ ನಡೆಯುತ್ತಿದ್ದರೆ ಹಂಪಿನಗರದ ಮುನೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಹರಿಕಥಾ ಸಮಾರಂಭ ಇತ್ತು. ಅದನ್ನು ಮಹಿಳೆಯೊಬ್ಬರು ನಡೆಸಿಕೊಡುತ್ತಿದ್ದರು. ವಿಚಾರಿಸಿದಾಗ ಅವರು ಮಂಜುಳಾ ಗುರುರಾಜ್ ಎನ್ನುವ ಅರಿವಾಯಿತು. ಸಮಾಧಾನ, ಇವರು ಮಂಗಳೂರಿನ ಮಂಜುಳಾ ಗುರುರಾಜ್! ಸಾಮಾನ್ಯ ಎಲ್ಲ ಹರಿದಾಸರಂತೆ... Read more »

ಕೋಬ್ರ ಜತೆಗೆ ಡಾಲಿ ಕ್ರಿಕೆಟ್ ಶುರು!

ಬಸವನಗುಡಿಯ ನ್ಯಾಶನಲ್ ಗ್ರೌಂಡ್ ನಲ್ಲಿ ಶಿವರಾತ್ರಿ ಪ್ರಯುಕ್ತ ಸಲಗ ಚಿತ್ರತಂಡ ಫ್ಲಡ್ ಲೈಟ್ ಕ್ರಿಕೆಟ್ ಮ್ಯಾಚ್ ಹಮ್ಮಿಕೊಂಡಿದೆ. ಅದರಲ್ಲಿ ಆಟಗಾರರಾಗಿರುವುದು ಬ್ಲಾಕ್‌ ಕೋಬ್ರ ವಿಜಯ್ ಮತ್ತು ಡಾಲಿ ಧನಂಜಯ್ ಎನ್ನುವುದು ವಿಶೇಷ. ಇಂದು ಸಂಜೆ 6.30ಕ್ಕೆ ಸಲಗ ಕ್ರಿಕೆಟ್ ಮ್ಯಾಚ್ ಎಂದು ಮೊದಲೇ ತೀರ್ಮಾನಿಸಲಾಗಿತ್ತು.... Read more »

‘ಘಾರ್ಗಾ’ ಎಂಬ ಅರುಣನ ಹೊಸ ಮಾರ್ಗ!

‘ಘಾರ್ಗಾ’ ಎಂದರೆ ಬಹುಶಃ ನಿಮಗೆ ಯಾವ ಭಾಷೆಯಲ್ಲಿಯೂ ಅರ್ಥ ಸಿಗದು. ಅದರೆ ಈ‌ ಚಿತ್ರ ನೋಡಿ ಹೊರ ಬಂದಾಗ ಖಂಡಿತವಾಗಿ ಒಂದು ಅರ್ಥ ಕಂಡುಕೊಂಡಿರುತ್ತೀರಿ ಎಂದರು ನವ ನಿರ್ದೇಶಕ ಎಂ ಶಶಿಧರ್. ಬಹುಶಃ ಒಬ್ಬ ನವ ನಿರ್ದೇಶಕ ಇಷ್ಟೊಂದು ಆತ್ಮವಿಶ್ವಾಸದಿಂದ ಮಾತನಾಡಬೇಕಾದರೆ ಆ ಚಿತ್ರ... Read more »

ಲೀಲಾವತಿಯಂಥ ಅನು ಪ್ರಭಾಕರ್..!

ಅಂದಿನ ಕಾಲದ ಜನಪ್ರಿಯ ನಾಯಕಿ ಲೀಲಾವತಿ. ಅನುಪ್ರಭಾಕರ್ ಇಂದಿನ ಯುವ ನಟಿ. ಹಾಗಾದರೆ ಈ ಹೋಲಿಕೆ ಯಾಕೆ ಎನ್ನುವ ಸಂದೇಹ ಸಹಜ. ಆದರೆ ಹೋಲಿಸಿದವರು ವಿ ಮನೋಹರ್. ಅದಕ್ಕೆ ಕಾರಣವಾಗಿದ್ದು ‘ಸಾರಾ ವಜ್ರ’ ಎನ್ನುವ ಚಿತ್ರ. ಹೆಸರೇ ವಿಭಿನ್ನ ಎನ್ನುವಂತಿರುವ ಚಿತ್ರ ಸಾರಾ ವಜ್ರ.... Read more »

ಮತ್ತೆ ಜೊತೆಜೊತೆಯಲಿ ಎಂದ ಎಸ್ಪಿ!

ಎಸ್ಪಿ ಅಂದರೆ ಸಿನಿಮಾ ಲೋಕಕ್ಕೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಒಬ್ಬರೇ. ಮೂಲತಃ ಆಂಧ್ರ ಪ್ರದೇಶದವರಾದರೂ ಕರ್ನಾಟಕ ಸೇರಿದಂತೆ ತಮಿಳು ನಾಡಿನ ಚಿತ್ರರಂಗಕ್ಕೆ ಅವರೊಬ್ಬರೇ ಶ್ರೇಷ್ಠ ಗಾಯಕ ಎಂದು ಗುರುತಾದವರು! ಕರ್ನಾಟಕದ ಜತೆಗಂತೂ ಅವರ ಸಂಬಂಧ ಇನ್ನಷ್ಟು ಗಾಢವಾಗಿರುವಂಥದ್ದು. ಅವರ ಕರ್ನಾಟಕದ ಜತೆಗಿನ ಸಂಬಂಧದಲ್ಲಿ ಅವರ ಪತ್ನಿ... Read more »

ದರ್ಶನ್ ಆಗುತ್ತಾರ ಟಿಪ್ಪು ಸುಲ್ತಾನ್.?!

‘ರಾಬರ್ಟ್’ ಸಿನಿಮಾ ನಿರ್ಮಾಪಕ ಉಮಾಪತಿಯವರು ದರ್ಶನ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಅದು ರಾಬರ್ಟ್ ಮುಗಿದಾಕ್ಷಣ ಅವರು ದರ್ಶನ್ ಅವರದೇ ಮತ್ತೊಂದು ಚಿತ್ರ ನಿರ್ಮಿಸಲು ತಯಾರಾಗುತ್ತಿದ್ದಾರೆ. ಚಿತ್ರದ ಹೆಸರು ತೀರ್ಮಾನಿಸಲಾಗಿಲ್ಲ. ಆದರೆ ಸಬ್ಜೆಕ್ಟ್ ಒಪ್ಪಿಗೆಯಾಗಿದೆ ಎಂದು ಸ್ವತಃ ಉಮಾಪತಿಯವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ.... Read more »

ಮತ್ತೆ ಹೋರಾಟಕ್ಕಿಳಿದ ಅಶ್ವಿನಿ ಗೌಡ

ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾದ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ಕಾರ್ಯಕರ್ತರೊಂದಿಗೆ ಆಸ್ಪತ್ರೆಗೆ ತೆರಳಿ ಪ್ರತಿಭಟಿಸಿದ್ದರು. ಕೊನೆಗೆ ವೈದ್ಯರೇ ಕರವೇ ಕಾರ್ಯಕರ್ತರ ವಿರುದ್ಧ ಪ್ರತಿಭಟಿಸುವ ಹಂತಕ್ಕೆ ಘಟನೆ ಹೋಗಿತ್ತು.... Read more »
error: Content is protected !!