ವಿಕ್ರಾಂತ್ ರೋಣ; ಈ ಮೊದಲ ನೋಟಕೆ ಏನೆನ್ನೋಣ..?!

ಸುದೀಪ್ ನಟಿಸಿರುವ ‘ವಿಕ್ರಾಂತ್ ರೋಣ’ ಚಿತ್ರವು ಫ್ಯಾಂಟಂ ಎನ್ನುವ ಹೆಸರಿದ್ದಾಗಿನಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಚಿತ್ರ. ನಿರ್ದೇಶಕ ಅನೂಪ್ ಭಂಡಾರಿಯವರು ಪ್ರತಿಯೊಂದು ಪಾತ್ರದ ಸನ್ನಿವೇಶಗಳ ಅನಾವರಣವನ್ನು ಸಣ್ಣಪುಟ್ಟ ವಿಡಿಯೋಗಳ ಮೂಲಕ ಮಾಡುತ್ತಿದ್ದರೆ ಅಭಿಮಾನಿಗಳ ಗುಂಡಿಗೆ ಸದ್ದು ತಾರಕಕ್ಕೇರುವಂತಿದೆ. ಇದೀಗ ಕಿಚ್ಚ ಸುದೀಪ್ ಅವರ ಜನ್ಮದಿನದ... Read more »

ಬಿಗ್ ಬಾಸ್ ವಿಜೇತ ಸಿದ್ದಾರ್ಥ್ ಶುಕ್ಲ ನಿಧನ

ಸಿದ್ದಾರ್ಥ್ ಶುಕ್ಲ ಕಳೆದೊಂದು ದಶಕದಿಂದ ಹಿಂದಿ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ. ಕಳೆದ ಸೀಸನ್ ಬಿಗ್ ಬಾಸ್ ವಿಜೇತರಾಗಿಯೂ ಸುದ್ದಿ ಮಾಡಿದ್ದ ಸಿದ್ದಾರ್ಥ್ ಇಂದು ಮುಂಜಾನೆ ಎರಡು ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಾಲಿವುಡ್ ನ ಯುವನಟ ಸಿದ್ದಾರ್ಥ್ ಶುಕ್ಲ ಇನ್ನಿಲ್ಲ ಎನ್ನುವುದು... Read more »

ಶುಗರ್ ಫ್ಯಾಕ್ಟರಿಯಲ್ಲಿ ಬಾಬಾ ಸೆಹಗಲ್!

ಶುಗರ್ ಫ್ಯಾಕ್ಟ್ರಿ ಎನ್ನುವುದು ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು. ಈಗಾಗಲೇ ಸುದ್ದಿಯಲ್ಲಿರುವ ಈ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದು ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಶುಭದಿನದಂದು ‘ಶುಗರ್ ಫ್ಯಾಕ್ಟರಿ’ಯ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್... Read more »

ಈ ವಾರ ತೆರೆಕಾಣಲಿದೆ ‘ಸಹಿಷ್ಣು’

ಒಂದೇ ಟೇಕ್ ನಲ್ಲಿ ಸಿನಿಮಾವೊಂದನ್ನು ಚಿತ್ರೀಕರಿಸಿ ದಾಖಲೆ ಮಾಡಿರುವ ನಿರ್ದೇಶಕ ಡಾ.ಸಂಪತ್ ಕುಮಾರ್ ಸಿನಿಮಾವನ್ನು ಈ ವಾರ ತೆರೆಗೆ ತರುತ್ತಿದ್ದಾರೆ. ರಾಜೇಂದ್ರ ಸಿಂಗ್ ಬಾಬು, ಪಿ ಎಚ್ ವಿಶ್ವನಾಥ್ ಅವರ ಬಳಿ ಅಸೋಸಿಯೇಟಾಗಿ ಕೆಲಸ ಮಾಡಿರುವ ಡಾ.‌ಸಂಪತ್ ಕುಮಾರ್ ಅವರು ಪ್ರಥಮ ಬಾರಿ ನಿರ್ದೇಶಿಸಿರುವ... Read more »

ಹೊಸಬರ ವಿಭಿನ್ನ ಚಿತ್ರ ‘ಓಶೋ’

ಸಿನಿಮಾ ನಿರ್ದೇಶಕನಾಗಲು ಬಯಸುವ ಸಹಾಯಕ ನಿರ್ದೇಶಕನ ಕತೆ ಹೇಳುವ ಸಿನಿಮಾ ‘ಓಶೋ’. ಚಿತ್ರದ ಹೆಸರು ಮತ್ತು ಕತೆಗಿರುವ ಸಂಬಂಧ ಮತ್ತಿತರ ವಿಷಯಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಚಿತ್ರ ತಂಡ ನೀಡಿದ ಮಾಹಿತಿಗಳು ಇಲ್ಲಿವೆ. “ಓಶೋ ಚಿತ್ರದ ಮೂಲಕ ನಾನು ಒಂದಷ್ಟು ಫಿಲಾಸಫಿ ಹೇಳಲು ಹೊರಟಿದ್ದೇನೆ. ಹಾಗಾಗಿ... Read more »

ಈ ವಿಲನ್ ಸುದೀಪ್ ಫ್ಯಾನ್!

ಸಿನಿಮಾ ನೋಡಿದವರೆಲ್ಲ ತಾವು ಕೂಡ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂದುಕೊಳ್ಳುವುದು ಸಹಜ. ಆದರೆ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸುವವರು ವಿರಳ. ಆದರೆ ಹಾಗೆ ಚಿತ್ರ‌ರಂಗ ಪ್ರವೇಶಿಸಿ ಗುರುತಿಸಿಕೊಂಡವರ ಪಟ್ಟಿಯಲ್ಲಿ ಈ ಯುವ ನಟ ಕೂಡ ಸೇರುತ್ತಾರೆ. ಹೆಸರು ಶೋಯೆಬ್ ಇಮ್ರಾನ್ ಅಹಮ್ಮದ್. ಆದರೆ... Read more »

ಮರಳಿ ಬರಲಿದೆ ‘ಕಲಿವೀರ..!’

ಏಕಲವ್ಯ ಎನ್ನುವ ಯುವ ಸಾಹಸ ಪ್ರತಿಭೆಯ ಮೂಲಕ ಸುದ್ದಿಯಾದ ಚಿತ್ರ ಕಲಿವೀರ. ಥಿಯೇಟರ್ ಸಮಸ್ಯೆಯ ನಡುವೆಯೇ ತೆರೆಕಂಡ ಈ ಸಿನಿಮಾವನ್ನು ಸಮಸ್ಯೆಗಳೆಲ್ಕ‌ಮುಗಿದ ಮೇಲೆ ಮತ್ತೊಮ್ಮೆ ತೆರೆಗೆ ತರುವ ಯೋಜನೆ ಇದೆ ಎಂದು ಚಿತ್ರತಂಡ ತಿಳಿಸಿದೆ. ರಾಣೆಬೆನ್ನೂರಿನ ಹುಡುಗ ಏಕಲವ್ಯ ಹೆಸರಿಗೆ ತಕ್ಕಂತೆ ಸಾಹಸ ಕಲೆಗಳನ್ನು... Read more »

ಆಡಿಕೊಂಡವರು ಕೊಂಡಾಡುತ್ತಿದ್ದಾರೆ- ಭೂಮಿಕಾ

ಜೀವನ ಎನ್ನುವುದು ಯಾರಿಗೂ ಸುಲಭವಾಗಿರುವುದಿಲ್ಲ. ಪ್ರತಿ ಸಾಧಕರು ಕೂಡ ಕಷ್ಟಪಟ್ಟೇ ಮೇಲೆ ಬಂದಿರುತ್ತಾರೆ. ಹಿಂದೆಲ್ಲಾ ಪತ್ರಕರ್ತರಿಗೆ ಮೈಕಟ್ಟು ಆಕರ್ಷಕವಾಗಿ ಇರಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೆ ಇಂದು ದೃಶ್ಯ ಮಾಧ್ಯಮಗಳ ದೆಸೆಯಿಂದಾಗಿ ಮಾಧ್ಯಮ ಪ್ರತಿನಿಧಿಗಳು ಕೂಡ ದೈಹಿಕವಾಗಿ ಆಕರ್ಷಕ ಮೈಕಟ್ಟು ಹೊಂದಿರಬೇಕೆಂದು ಸುದ್ದಿ ಸಂಸ್ಥೆಗಳು ನಿರೀಕ್ಷಿಸುತ್ತವೆ.... Read more »

ಭರದ ಚಿತ್ರೀಕರಣದಲ್ಲಿ ‘ಆಪರೇಶನ್ D”

ಆಪರೇಷನ್ ಡಿ ಎನ್ನುವ ವಿಭಿನ್ನ ಹೆಸರಿನ ಚಿತ್ರವನ್ನು ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿದ್ದು ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದ್ದು, ನಾಲ್ಕು ಹಾಡು ಹಾಗೂ ಮೂರು ಸಾಹಸ... Read more »

‘ಕರ್ಮಣ್ಯೇವಾಧಿಕಾರಸ್ತೇ’ ತೆರೆಗೆ‌‌ ಸಿದ್ಧ

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಜನಪ್ರಿಯ ವಚನ ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ’ದಿಂದ ಮೊದಲಾರ್ಧ ತೆಗೆದು ಚಿತ್ರದ ಶೀರ್ಷಿಕೆ ಮಾಡಲಾಗಿದೆ!ಚಿತ್ರವನ್ನು ಸೆಪ್ಟೆಂಬರ್ 24 ರಂದು ಬಿಡುಗಡೆಗೊಳಿಸುವ ತಯಾರಿ ನಡೆದಿದೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶ್ರೀಹರಿ‌ ಆನಂದ್ ನಿರ್ದೇಶಿಸಿದ್ದಾರೆ. ನಲವತ್ತೈದು ದಿನಗಳ ಚಿತ್ರೀಕರಣ ನಡೆದಿದ್ದು,... Read more »

‘ಮನಸಾಗಿದೆ’ ಚಿತ್ರೀಕರಣ ಪೂರ್ಣ

ನವನಟ ಅಭಯ್ ನಾಯಕರಾಗಿ ಕನ್ನಡ ಚಿತ್ರರಂಕ್ಕೆ ಪದಾರ್ಪಣೆ ಮಾಡುತ್ತಿರುವ ಸಿನಿಮಾ ‘ಮನಸಾಗಿದೆ’ ಚಿತ್ರತಂಡದ ಮಾಧ್ಯಮಗೋಷ್ಠಿ ಇತ್ತೀಚೆಗೆ ನೆರವೇರಿತು. ನಾಯಕ ಅಭಯ್ ಮಾತನಾಡಿ, “ಚಿತ್ರೀಕರಣ ಚೆನ್ನಾಗಿ ಮೂಡಿ ಬಂದಿದೆ. ಇದರಲ್ಲಿ ಕಾಮಿಡಿ ಕಿಲಾಡಿ ತಂಡದ ಎಂಟರ್ಟೇನ್ಮೆಂಟ್ ಇರುತ್ತದೆ. ಥ್ರಿಲ್ಲರ್ ಮಂಜು‌ ಮಾಸ್ಟರ್ ಎರಡು ಫೈಟ್ ಎರಡು... Read more »

ಸಂದೇಶ ನೀಡಲಿರುವ ‘ಯೆಲ್ಲೋ ಬೋರ್ಡ್’

ಯೆಲ್ಲೋ ಬೋರ್ಡ್ ಎಂದೊಡನೆ ಕ್ಯಾಬ್ ಗಳ ನೆನಪಾಗುವುದು ಸಹಜ. ಕ್ಯಾಬ್ ಡ್ರೈವರ್ ವಿಚಾರವನ್ನೇ ಪ್ರಮುಖವಾಗಿಸಿಕೊಂಡು ಮಾಡಿರುವ ‘YELLOW ಬೋರ್ಡ್’ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ರೇಣುಕಾಂಬ ಪ್ರಿವ್ಯು ಥಿಯೇಟರಲ್ಲಿ ನೆರವೇರಿತು. ಒಬ್ಬ ಟ್ಯಾಕ್ಸಿ ಡ್ರೈವರ್ ಕನಸು ಮತ್ತು ಅದರ ನಡುವೆ ಅನಿರೀಕ್ಷಿತವಾಗಿ ಪ್ರೀತಿ, ಪ್ರೇಮ ಹಾಗೂ... Read more »

ಸದ್ಯದಲ್ಲೇ ಜಗ್ಗೇಶ್ ಪುತ್ರನ ‘ಕಾಗೆಮೊಟ್ಟೆ’

ಜನಪ್ರಿಯ ನಟ ಜಗ್ಗೇಶ್ ಅವರ ಹಿರಿಯಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿರುವ ಚಿತ್ರ ಕಾಗೆಮೊಟ್ಟೆ. ಈಗಾಗಲೇ ರಿಲೀಸ್‌ಗೆ ಸಿದ್ಧವಾಗಿರುವ ಕಾಗೆಮೊಟ್ಟೆ ಚಿತ್ರವನ್ನು ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ‌ ಚಂದ್ರಹಾಸ ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಕಾಗೆ ಶನೀಶ್ವರನ... Read more »

ಮನಮುಟ್ಟುವ ಭುಜ್

1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಹಾ ಸಂಗ್ರಾಮವೇ ನಡೆದಿತ್ತು. ಪಾಕಿಸ್ತಾನ ನಡೆಸಿದ ಆಪೇರಷನ್ ಚೆಂಗಿಝ್ ಖಾನ್ ನಿಂದ ಆರಂಭವಾದ ಯುದ್ಧ ಮುಂದೆ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶವು ಸಂಪೂರ್ಣ ಸ್ವತಂತ್ರಗೊಳ್ಳಲು ನಾಂದಿಯಾಯಿತು. ಆ ಸಮಯದಲ್ಲಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಲು ಹಲವಾರು ರೀತಿಯ... Read more »

ರಂಗನಾಯಕನಿಗೆ ರಚಿತಾ ಜೋಡಿ

ನಿರ್ದೇಶಕ ಗುರುಪ್ರಸಾದ್ ತಮಗೆ ಹೆಸರು ತಂದುಕೊಟ್ಟ ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಚಿತ್ರದ ನಾಯಕನ ಜೊತೆಗೆ ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ಒಂದಾಗಿರುವ ಚಿತ್ರ ‘ರಂಗನಾಯಕ’. ಅದರ ಚಿತ್ರೀಕರಣದ ಜಾಗದಲ್ಲಿ ನಡೆಸಲಾದ ಮಾಧ್ಯಮಗೋಷ್ಠಿಯ ವಿವರಗಳು ಹೀಗಿವೆ. ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಯಶಸ್ವಿಯಾಗಿರುವ... Read more »

ಒಂದು ಮುಹೂರ್ತದ ಹಿಂದಿನ‌ ಕತೆ!

ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಆಸ್ತಿಕನೊ/ನಾಸ್ತಿಕನೋ ಆತನ ಚಿತ್ರವನ್ನು ‘ಶುಭ ಮುಹೂರ್ತ’ದಲ್ಲಿ‘ಶುಭ ಘಳಿಗೆ’ಯಲ್ಲಿ ಪ್ರಾರಂಭಿಸಿಚಿತ್ರೀಕರಣದ ಮುಕ್ತಾಯಕ್ಕೆ ಕುಂಬಳಕಾಯಿ ಒಡೆದು ದೃಷ್ಟಿ ನಿವಾಳಿಸುವ ಸಂಪ್ರದಾಯವನ್ನು ಪಾಲಿಸುವುದು ವಾಡಿಕೆ..! ಅದಕ್ಕೆ ಬಹು ಮುಖ್ಯ ಕಾರಣ ಸಿನಿಮಾ ತಯಾರಿಕೆಯಲ್ಲಿ ಹೂಡುವ ಲಕ್ಷಾಂತರ/ಕೋಟ್ಯಂತರ ರೂಪಾಯಿಗಳು (ಪೂರ್ಣವಾಗಿ) ನಿಖರವಾಗಿ ಹಿಂತಿರುಗುತ್ತದೆ ಎಂಬ... Read more »

`ಕೋಮು-ದ್ವೇಷ’ ಮೈಗೂಡುವ ರೀತಿ..!

ಚಿತ್ರ: ಕುರುತಿತಾರಾಗಣ: ಪೃಥ್ವಿರಾಜ್, ಸ್ರಿಂಡನಿರ್ದೇಶನ: ಮನು ವಾರ್ಯರ್ನಿರ್ಮಾಣ: ಸುಪ್ರಿಯಾ ಮೆನನ್ ಮಲಯಾಳಂನಲ್ಲಿ ಕುರುತಿ ಎಂದರೆ ಬಲಿ ಎಂದು ಅರ್ಥ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ಇಂದು ನಮ್ಮ ಸಮಾಜದಲ್ಲಿ ಬಲಿಯಾಗುತ್ತಿರುವವರು ಯಾರು ಮತ್ತು ಯಾಕೆ ಎನ್ನುವ ಕುರಿತಾದ ಅರ್ಥಪೂರ್ಣ ವಿಚಾರಕ್ಕೆ ಕನ್ನಡಿ ಹಿಡಿಯಲಾಗಿದೆ.... Read more »

‘ಅಂಜನ್’ ಸಿನಿಮಾ ವಿಶೇಷ

ನಾಯಕ ನಟ ಅಂಜನ್ ನಟಿಸಿರುವ ಎರಡನೇ ಸಿನಿಮಾಕ್ಕೆ ‘ಅಂಜನ್’ ಎಂದೇ ನಾಮಕರಣ ಮಾಡಲಾಗಿದೆ. ಚಿತ್ರದ ಮೊದಲ ಮಾಧ್ಯಮಗೋಷ್ಠಿ ಸ್ವಾತಂತ್ರ್ಯ ದಿನದಂದು ನೆರವೇರಿತು. “ಈ ಹಿಂದೆ ‘ವಜ್ರಾಸ್ತ್ರ’ ಚಿತ್ರದಲ್ಲಿ ನಟಿಸಿದ ಬಳಿಕ ನಾನು ನಟಿಸುತ್ತಿರುವ ಎರಡನೇ ಚಿತ್ರ ಇದು. ತಂದೆ, ತಾಯಿ ಇರದೆ ಬೆಳೆದ ತಂಗಿಯನ್ನು... Read more »

ಧ್ರುವ ಇನ್ನು ‘ಮಾರ್ಟಿನ್’

ಎ.ಪಿ. ಅರ್ಜುನ್‌ ನಿರ್ದೇಶಿಸಿದ ‘ಅದ್ಧೂರಿ’ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ನಟ ಧ್ರುವ ಸರ್ಜ. ಆ ಕಾಲಕ್ಕೆ ‘ಅದ್ದೂರಿ’ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತ್ತು. ಇದೀಗ ಅದೇ ಜೋಡಿ ಮತ್ತೆ ಒಂದಾಗಿದೆ. ಹೊಸ ಸಿನಿಮಾದ ಹೆಸರು ‘ಮಾರ್ಟಿನ್’. ನಿರ್ದೇಶಕ ಅರ್ಜುನ್ ಮತ್ತು ಧ್ರುವ... Read more »

‘ಮತ್ತೆ ಮನ್ವಂತರ’ ಶುಭಾರಂಭ

ಕನ್ನಡದಲ್ಲಿ ಕಿರುತೆರೆ ಧಾರಾವಾಹಿಗಳಿಗೆ ಶ್ರೇಷ್ಠ ಮಾದರಿ ಹಾಕಿಕೊಟ್ಟವರು ಟಿ ಎನ್ ಸೀತಾರಾಮ್. ‘ಮಾಯಾಮೃಗ’ದ ಮೂಲಕ ಒಂದು ಮನ್ವಂತರ ಸೃಷ್ಟಿಸಿದ ಅವರು ಹೊಸದಾಗಿ ‘ಮತ್ತೆ ಮನ್ವಂತರ’ಕ್ಕೆ ಕಾಲಿಟ್ಟಿದ್ದಾರೆ. ಅಂದರೆ ಹೊಸ ಧಾರಾವಾಹಿಗೆ ‘ಮತ್ತೆ ಮನ್ವಂತರ’ ಎಂದು ಹೆಸರಿಟ್ಟು ಎಲ್ಲ ವರ್ಗದ ಪ್ರೇಕ್ಷಕರನ್ನು ಕಿರುತೆರೆಯೊಳಗೆ ಸೆರೆ ಮಾಡಲು... Read more »

ಶೇರ್ ಶಾ : ವೀರ ಯೋಧನ ಅಮರ ಕಥನ

ಯೆ ದಿಲ್ ಮಾಂಗೆ ಮೋರ್! ಭಾರತೀಯ ಸೇನೆಯ ಬಗ್ಗೆ, ಯೋಧರ ಬಗ್ಗೆ ಅದೆಷ್ಟೋ ಸಿನಿಮಾಗಳು ಬಂದಿದ್ದರು ನಮ್ಮ ಹೃದಯ ಮತ್ತಷ್ಟು ಸಿನಿಮಾಗಳನ್ನು ನೋಡಲು, ಇತಿಹಾಸದ ಕಥೆಗಳನ್ನು ತಿಳಿಯಲು ಪರಿತಪಿಸುತ್ತದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹೇಳುವ ಹಾಗೆ ಈ ವಿಷಯದಲ್ಲಿ ಯೆ ದಿಲ್ ಮಾಂಗೆ ಮೋರ್!... Read more »
error: Content is protected !!