“ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾರೆಲ್ಲ ಕಾನೂನು ಬಾಹಿರವಾಗಿ ಸಿನಿಮಾ ಪ್ರದರ್ಶಿಸುತ್ತಿದ್ದಾರೆಯೋ ಅವರೆಲ್ಲರಿಗೂ ಕೋರ್ಟ್ ನಿಂದ ಸ್ಟೇ ತರಲಾಗಿದೆ ಎಂದು ಹಿರಿಯ ನಿರ್ಮಾಪಕ, ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. ಈ ಮೂಲಕ ನಾವು ಹಕ್ಕು ಸಾಧಿಸುವ ಪ್ರಯತ್ನ ಅಥವಾ ನಮ್ಮ ಗೆಲುವು ತೋರಿಸುವ... Read more »
ಮೂಲ ದಕ್ಷಿಣ ಕನ್ನಡದ ಬೆಳ್ತಂಗಡಿ. ಓದಿದ್ದು ಮೆಕ್ಯಾನಿಕಲ್ ಎಂಜನಿಯರಿಂಗ್. ವೃತ್ತಿಯಿಂದಲೂ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಪ್ರತಿಭೆಯೊಂದು ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹಟಕ್ಕಾಗಿ ಬಹುರಾಷ್ಟ್ರೀಯ ಕಂಪನಿಯ ಕೆಲಸವನ್ನು ತೊರೆದು ಗೆದ್ದೇ ತೀರುವೆ ಎಂದು ಟೊಂಕಕಟ್ಟಿ ನಿಲ್ಲುತ್ತದೆ. ಸರಿಯಾಗಿ ಏಳು ವರ್ಷದ ನಂತರ ಮಾಡಿದ ತ್ಯಾಗಗಳಿಗೆ ತಕ್ಕ... Read more »
ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕೂಡ ಕೊರೊನ ಶಂಕಿತರಾಗಿದ್ದು, ಕ್ವಾರಂಟೈನಲ್ಲಿದ್ದಾರೆ ಎನ್ನುವ ಸುದ್ದಿ ಬೆಳಗ್ಗಿನಿಂದ ಹರಡುತ್ತಲಿತ್ತು. ಈ ಬಗ್ಗೆ ದೊಡ್ಡಣ್ಣ ಅವರನ್ನೇ ನೇರವಾಗಿ ಸಂಪರ್ಕಿಸಿದ ಸಿನಿಕನ್ನಡ.ಕಾಮ್ ಜತೆಗೆ ಅವರು ನೀಡಿರುವ ಮಾಹಿತಿಗಳು ಇಲ್ಲಿವೆ. “ನಾನು ಆರಾಮಾಗಿದ್ದೀನಿ. ತುಂಬ ಚೆನ್ನಾಗಿದ್ದೀನಿ, ಆರೋಗ್ಯವಾಗಿಯೂ ಇದ್ದೇನೆ. ಈಗಷ್ಟೇ... Read more »
ನಟ ದುನಿಯಾ ವಿಜಯ್ ತಮ್ಮ ಸಲಗ ಚಿತ್ರದಲ್ಲಿ ನಟಿಸಿದ ಸುಶೀಲ್ ಅವರ ಆತ್ಮಹತ್ಯೆ ಬಗ್ಗೆ ನೊಂದು ಫೇಸ್ಬುಕ್ ನಲ್ಲಿ ಬರೆದ ವಿಚಾರ ಇದು. ‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ.... Read more »
“ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್…” ಈಚೆಗೆ ಸಿನಿರಸಿಕರ ಬಾಯಲ್ಲಿ ಈ ಪದಗಳದೇ ಕಾರುಬಾರು. ಅಂದಹಾಗೆ ರಕ್ಷಿತ್ ಶೆಟ್ಟಿ ಅಭಿನಯದ ಹೊಸ ಚಿತ್ರ ‘ 777 ಚಾರ್ಲಿ’ ಯಲ್ಲಿ ನಾಯಕ ಧರ್ಮನ ದಿನಚರಿಯನ್ನು ಸರಳವಾಗಿ ಹೇಳುವ ಸಲುವಾಗಿ ಚಿತ್ರದ ನಿರ್ದೇಶಕ ಕಿರಣ್ ರಾಜ್... Read more »
ಬಾಲಿವುಡ್ ನ ಜನಪ್ರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್(71) ಇಂದು ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಅವರು ಗುರುವಾರ ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 1972 ರಲ್ಲಿ ನೃತ್ಯ ಸಂಯೋಜಕಿಯಾಗಿ ಪರಿಚಿತರಾದ ಅವರು ಸಾವಿರಾರು ಗೀತೆಗಳಿಗೆ ಕೊರಿಯೋಗ್ರಫಿ ಮಾಡಿದ್ದು, 3 ಬಾರಿ ರಾಷ್ಟ್ರ... Read more »
ಹೆಸರು ಲೋಕೇಶ್. ನೋಡಲು ಮಾತ್ರವಲ್ಲ ವ್ಯಕ್ತಿತ್ವವೂ ಆಕರ್ಷಕ ಎನ್ನುವುದು ಆತ್ಮೀಯ ಸ್ನೇಹಿತರ ಮಾತು. ಆದರೆ ಅವೆಲ್ಲವನ್ನು ಆತ್ಮಹತ್ಯೆಯ ನಿರ್ಧಾರದೊಂದಿಗೆ ಕೊನೆಯಾಗಿಸಿದ್ದ ಹುಡುಗನಿಗೆ ವಯಸ್ಸು ಕೇವಲ ಇಪ್ಪತ್ತೈದು ದಾಟಿತ್ತಷ್ಟೇ! ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಾದ ರಕ್ಷಿತ್ ಶಟ್ಟಿ, ರಿಷಭ್ ಶೆಟ್ಟಿ ತಂಡದಲ್ಲಿ ಕಲಾನಿರ್ದೇಶನದ ಇನ್ ಚಾರ್ಜ್... Read more »
‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಕನ್ನಡ ಸಿನಿಮಾ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಅವರು ಹಾಡಿನ ಸಂಗೀತದ ಜತೆಗೆ ಹಿನ್ನೆಲೆ ಸಂಗೀತದಲ್ಲೂ ತಮ್ಮದೇ ಆದ ಗುರುತು ಮೂಡಿಸಿದವರು. ಅನೂಪ್ ಭಂಡಾರಿ ನಿರ್ದೇಶನದ ‘ರಂಗಿತರಂಗ’ ಮತ್ತು ‘ರಾಜರಥ’ ಸಿನಿಮಾದ ಹಿನ್ನೆಲೆ... Read more »
ಕನ್ನಡ ಚಿತ್ರರಂಗದ ಹಿರಿಯ ನಟ, ವೇದಿಕೆ ಹಾಸ್ಯ ಕಾರ್ಯಕ್ರಮಗಳ ಮೂಲಕ ಗುರುತಾಗಿದ್ದ ಮಿಮಿಕ್ರಿ ರಾಜ್ ಗೋಪಾಲ್ ನಿಧನರಾಗಿದ್ದಾರೆ. ಕಿಡ್ನಿ ತೊಂದರೆಯಿಂದ ಉಂಟಾದ ಪ್ರಾಥಮಿಕ ಹಂತದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ತಡರಾತ್ರಿ ಒಂದೂವರೆ ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ತಮಗೆ ಕಿಡ್ನಿಯ ಸಮಸ್ಯೆ ಇದೆ... Read more »
ಚಿಕ್ಕಂದಿನಲ್ಲೇ ನನಗೆ ಸೆಲೆಬ್ರಿಟಿಯಾಗುವ ಆಸೆ. ಸಾಮಾನ್ಯವಾಗಿ ಮಕ್ಕಳಾಸೆಗಳು ಬೆಳೆಯುತ್ತಿದ್ದಂತೆ ಬದಲಾಗುತ್ತವೆ. ಆದರೆ ಕುಂದನಾ ವಿಚಾರ ಹಾಗಲ್ಲ. ತನ್ನ ಅಂದಿನ ಆಸೆಯನ್ನು ನಿಜಗೊಳಿಸುವ ಹಂತ ಸೇರಿದ್ದಾರೆ. ಶಾಲಾ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಕುಂದನಾ ಅದರಲ್ಲಿ ಗೆಲುವನ್ನು ಕಾಣುತ್ತಿದ್ದರು. ಇದೀಗ `ಪಂಖುರಿ’ ಎನ್ನುವ ಚಿತ್ರಕ್ಕೆ... Read more »
ಸಿಂಪಲ್ ಸುನಿ ಇಂದು ತಮ್ಮ ಫೇಸ್ಬುಕ್ ವಾಲ್ ನಲ್ಲಿ ‘ದಿ ಸ್ಟೋರಿ ಆಫ್ ರಾಯಗಢ’ ಎಂಬ ಶೀರ್ಷಿಕೆಯುಳ್ಳ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ನಾಯಕ, ನಾಯಕಿ, ಚಿತ್ರ ತಂಡ ಯಾವುದರ ಬಗ್ಗೆಯೂ ಮಾಹಿತಿ ಇಲ್ಲದ ಪೋಸ್ಟರ್ ಸಕ್ಕತ್ ವೈರಲ್ ಆಗಿದೆ. ಪೋಸ್ಟರ್ ಬಗ್ಗೆ ಸುನಿ ಸಿನಿಕನ್ನಡ.ಕಾಮ್... Read more »
ವೃತ್ತಿಜೀವನದ ಶುರುವಿನಿಂದಲೂ ಪ್ರಯೋಗಾತ್ಮಕ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ರಾಧಿಕಾ ನಾರಾಯಣ್ ಪಾತ್ರಪೋಷಣೆಯಲ್ಲಿ ತಮ್ಮದೇ ವಿಭಿನ್ನ ಶೈಲಿಯಿಂದ ಚಿತ್ರ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವರು. ‘ಶಿವಾಜಿ ಸುರತ್ಕಲ್’ ಚಿತ್ರದ ನಂತರ ಹೊರಬರುತ್ತಿರುವ ರಾಧಿಕಾ ನಾರಾಯಣ್ ಅವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ‘ಚೇಸ್’ ಉತ್ತರವಾಗಿದೆ.... Read more »
ಸಿನಿಮಾ ಪ್ರಮೋಶನ್ ಹಲವು ರೂಪ ಪಡೆಯುತ್ತಿದೆ. ಅವುಗಳಲ್ಲೊಂದು ಕಿರುಚಿತ್ರದ ಮೂಲಕ ನೀಡಲಾಗುತ್ತಿರುವ ಪ್ರಚಾರ. ಬಹುಶಃ ಇಂಥದೊಂದು ಪ್ರಯತ್ನ ಕನ್ನಡದ ಮಟ್ಟಿಗೆ ಇದೇ ಪ್ರಥಮ ಎನ್ನಬಹುದು ಎನ್ನುತ್ತಾರೆ ನಿರ್ದೇಶಕ ಚಂದ್ರಮೌಳಿ. ಅವರು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ‘ದಿಲ್ಮಾರ್’ ನ ಪ್ರಚಾರಕ್ಕಾಗಿ ‘ಫಾದರ್ಸ್ ಡೇ’ ಪ್ರಯುಕ್ತ... Read more »
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಕೊಡುಗೆಯನ್ನು ನೀಡಿದವರು ಸುಬ್ಬಯ್ಯ ನಾಯ್ಡು. ಕನ್ನಡದ ಮೊದಲ ವಾಕ್ಚಿತ್ರವಾದ ಸತಿ ಸುಲೋಚನಾ'ಗೆ ನಾಯಕರಾದವರು ಅವರು. ಅವರ ಪುತ್ರ ಲೋಕೇಶ್ ಅವರಂತೂ ರಂಗಭೂಮಿ ಕಲಾವಿದರಾಗಿ, ಸಿನಿಮಾ ನಾಯಕನಾಗಿ, ಪೋಷಕನಾಗಿ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದವರು. ಅವರ ಪುತ್ರ ಸೃಜನ್ ಲೋಕೇಶ್... Read more »
ಕಳೆದ ವರುಷ ಬಿಡುಗಡೆಯಾದ ‘ಲುಂಗಿ’ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ, ಚಿತ್ರ ನೋಡಿದವರಿಗೆ ವಿಭಿನ್ನ ಅನುಭವ ನೀಡಿದ್ದು ನಿಜ. ಉತ್ಸಾಹಿ ಯುವಕನ ಜೀವನಗಾಥೆಯನ್ನು ಉತ್ತಮ ಸಾಹಿತ್ಯ, ಸಂಗೀತ, ಛಾಯಾಗ್ರಹಣ ಸೇರಿದಂತೆ ಮಂಗಳೂರು ಪ್ರದೇಶದ ನೈಜ ಚಿತ್ರಣದೊಂದಿಗೆ ತೆರೆ ಮೇಲೆ ತಂದಿದ್ದ ‘ಲುಂಗಿ’ ಚಿತ್ರದ ನಿರ್ದೇಶಕ... Read more »
ನಟ, ನಿರ್ಮಾಪಕ ಜೈ ಜಗದೀಶ್ ಅವರಿಗೆ ಇಂದು 66ನೇ ವರ್ಷದ ಜನ್ಮ ದಿನಾಚರಣೆ. ಕನ್ನಡದ ಜನಪ್ರಿಯ ನಟರಲ್ಲೋರ್ವರಾದ ಅವರು ಇತ್ತೀಚೆಗೆ ಸುದ್ದಿಯಾಗಿದ್ದು ಸಣ್ಣದೊಂದು ವಿವಾದದ ಮೂಲಕ. ಅದು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರ ವಿರುದ್ಧ ನಡೆಸಿದ ಮಾತಿನ ಸಮರ. ಆದರೆ... Read more »
ಪೃಥ್ವಿರಾಜ್ ಮತ್ತು ಬಿಜು ಮೆನನ್ ಜೋಡಿಯು ಪ್ರಧಾನ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಮಲಯಾಳಂ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ.’ ಫೆಬ್ರುವರಿ ತೆರೆಕಂಡಿದ್ದ ಈ ಸಿನಿಮಾ ಥಿಯೇಟರ್ ನಲ್ಲಿ ಗಮನ ಸೆಳೆದಿದ್ದು ಮಾತ್ರವಲ್ಲ, ಅಮೆಜಾನ್ ಪ್ರೈಮ್ ಮೂಲಕ ವೀಕ್ಷಿಸಿದವರಿಂದಲೂ ಮೆಚ್ಚುಗೆ ಗಳಿಸಿತು. ಬಹುಶಃ ಈ ಲಾಕ್ಡೌನ್... Read more »
‘ಕಡ್ಡಿಪುಡಿ’ ಸಿನಿಮಾ ನೋಡಿದವರು ಒಂದು ದೃಶ್ಯವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಅದು ಚಿತ್ರದ ನಾಯಕ ಶಿವರಾಜ್ ಕುಮಾರ್ ಮತ್ತು ರಂಗಾಯಣ ರಘು ವಾಹನವೊಂದರಲ್ಲಿ ಸಾಗುವ ಸನ್ನಿವೇಶ. ಹೊರಗೆ ಜೋರಾಗಿ ಸುರಿಯುತ್ತಿರುವ ಮಳೆ, ಸಿಗ್ನಲ್ ಒಂದರಲ್ಲಿ ಬೈಕ್ ಸವಾರನೊಂದಿಗೆ ಮಾತಿನ ಸಂಘರ್ಷ ನಡೆಯುತ್ತದೆ. ಬೈಕ್ ಸವಾರ... Read more »
‘ಮಗಳು ಜಾನಕಿ’ ಧಾರಾವಾಹಿ ನಿಂತ ಬಳಿಕ ಪ್ರೇಕ್ಷಕರು ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಹೊಸ ಧಾರಾವಾಹಿಯನ್ನು ಎಷ್ಟು ನಿರೀಕ್ಷೆ ಮಾಡುತ್ತಿದ್ದಾರೆಯೋ ಅಷ್ಟೇ ಆಸಕ್ತಿಯನ್ನು ಜಾನಕಿಯ ಬಗ್ಗೆ ಕೂಡ ಇರಿಸಿಕೊಂಡಿದ್ದಾರೆ. ಆದರೆ ಜಾನಕಿ ಪಾತ್ರಧಾರಿ ಸಿನಿಮಾದ ಮೂಲಕ ರಿಷಭ್ ಶೆಟ್ಟಿಯವರಿಗೆ ಜೋಡಿಯಾಗಿ ಬರಲಿದ್ದಾರೆ. ಆ... Read more »
ನಿನ್ನೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ದೇಶದ ಜನತೆಯನ್ನು, ಸಿನಿ ಪ್ರಿಯರನ್ನು ದಂಗು ಬಡಿಸಿತ್ತು. ಅವರ ಆತ್ಮಹತ್ಯೆಗೆ ಕಾರಣವೇನು ಇರಬಹುದು ಎನ್ನುವುದರ ಚರ್ಚೆಯ ಜತೆಯಲ್ಲೇ `ಆತ್ಮಹತ್ಯೆ ಹಲವೊಮ್ಮೆ ಅನಿವಾರ್ಯ’ ಎನ್ನುವಂಥ ಸಂದೇಶಗಳು ಕೂಡ ಹರಿದಾಡುತ್ತಿವೆ. ಆದರೆ ಆತ್ಮಹತ್ಯೆ ಎನ್ನುವ ಬಗ್ಗೆ ಯೋಚಿಸುವುದೇ ಎಷ್ಟು ದೊಡ್ಡ... Read more »
