ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ: ದುನಿಯಾ ವಿಜಯ್

ನಟ ದುನಿಯಾ ವಿಜಯ್ ತಮ್ಮ ಸಲಗ ಚಿತ್ರದಲ್ಲಿ ನಟಿಸಿದ ಸುಶೀಲ್ ಅವರ ಆತ್ಮಹತ್ಯೆ ಬಗ್ಗೆ ನೊಂದು ಫೇಸ್ಬುಕ್ ನಲ್ಲಿ ಬರೆದ ವಿಚಾರ ಇದು. ‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ.... Read more »

‘ಚಾರ್ಲಿ’ಯ ಸಾರಥಿ ಕಿರಣ್ ರಾಜ್ ಹೇಳಿದ ಸಂಗತಿ..

“ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್…” ಈಚೆಗೆ ಸಿನಿರಸಿಕರ ಬಾಯಲ್ಲಿ ಈ ಪದಗಳದೇ ಕಾರುಬಾರು. ಅಂದಹಾಗೆ ರಕ್ಷಿತ್ ಶೆಟ್ಟಿ ಅಭಿನಯದ ಹೊಸ ಚಿತ್ರ ‘ 777 ಚಾರ್ಲಿ’ ಯಲ್ಲಿ ನಾಯಕ ಧರ್ಮನ ದಿನಚರಿಯನ್ನು ಸರಳವಾಗಿ ಹೇಳುವ ಸಲುವಾಗಿ ಚಿತ್ರದ ನಿರ್ದೇಶಕ ಕಿರಣ್ ರಾಜ್... Read more »

ಸರೋಜ್ ಖಾನ್ ಕನ್ನಡಿಗನ ನೆನಪಲ್ಲಿ..

ಬಾಲಿವುಡ್ ನ ಜನಪ್ರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್(71) ಇಂದು‌ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ‌ಬಳಲುತ್ತಿದ್ದ ಸರೋಜ್ ಖಾನ್ ಅವರು ಗುರುವಾರ ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 1972 ರಲ್ಲಿ ನೃತ್ಯ ಸಂಯೋಜಕಿಯಾಗಿ ಪರಿಚಿತರಾದ ಅವರು ಸಾವಿರಾರು ಗೀತೆಗಳಿಗೆ ಕೊರಿಯೋಗ್ರಫಿ‌ ಮಾಡಿದ್ದು, 3 ಬಾರಿ ರಾಷ್ಟ್ರ... Read more »

ಆರ್ಟ್ ಡೈರೆಕ್ಷನ್ ಟೀಮ್ ಹುಡುಗನ ಆತ್ಮಹತ್ಯೆ

ಹೆಸರು ಲೋಕೇಶ್. ನೋಡಲು ಮಾತ್ರವಲ್ಲ ವ್ಯಕ್ತಿತ್ವವೂ ಆಕರ್ಷಕ ಎನ್ನುವುದು ಆತ್ಮೀಯ ಸ್ನೇಹಿತರ ಮಾತು. ಆದರೆ ಅವೆಲ್ಲವನ್ನು ಆತ್ಮಹತ್ಯೆಯ ನಿರ್ಧಾರದೊಂದಿಗೆ ಕೊನೆಯಾಗಿಸಿದ್ದ ಹುಡುಗನಿಗೆ ವಯಸ್ಸು ಕೇವಲ ಇಪ್ಪತ್ತೈದು ದಾಟಿತ್ತಷ್ಟೇ! ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಾದ ರಕ್ಷಿತ್ ಶಟ್ಟಿ, ರಿಷಭ್ ಶೆಟ್ಟಿ ತಂಡದಲ್ಲಿ ಕಲಾನಿರ್ದೇಶನದ ಇನ್ ಚಾರ್ಜ್... Read more »

ಮಿಮಿಕ್ರಿ ರಾಜ್ ಗೋಪಾಲ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ, ವೇದಿಕೆ ಹಾಸ್ಯ ಕಾರ್ಯಕ್ರಮಗಳ ಮೂಲಕ ಗುರುತಾಗಿದ್ದ ಮಿಮಿಕ್ರಿ ರಾಜ್ ಗೋಪಾಲ್ ನಿಧನರಾಗಿದ್ದಾರೆ. ಕಿಡ್ನಿ ತೊಂದರೆಯಿಂದ ಉಂಟಾದ ಪ್ರಾಥಮಿಕ ಹಂತದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ತಡರಾತ್ರಿ ಒಂದೂವರೆ ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ತಮಗೆ ಕಿಡ್ನಿಯ ಸಮಸ್ಯೆ ಇದೆ... Read more »

ಅಂದದ ಬೆಡಗಿ ಕುಂದನಾ

ಚಿಕ್ಕಂದಿನಲ್ಲೇ ನನಗೆ ಸೆಲೆಬ್ರಿಟಿಯಾಗುವ ಆಸೆ. ಸಾಮಾನ್ಯವಾಗಿ ಮಕ್ಕಳಾಸೆಗಳು ಬೆಳೆಯುತ್ತಿದ್ದಂತೆ ಬದಲಾಗುತ್ತವೆ. ಆದರೆ ಕುಂದನಾ ವಿಚಾರ ಹಾಗಲ್ಲ. ತನ್ನ ಅಂದಿನ ಆಸೆಯನ್ನು ನಿಜಗೊಳಿಸುವ ಹಂತ ಸೇರಿದ್ದಾರೆ. ಶಾಲಾ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಕುಂದನಾ ಅದರಲ್ಲಿ ಗೆಲುವನ್ನು ಕಾಣುತ್ತಿದ್ದರು. ಇದೀಗ `ಪಂಖುರಿ’ ಎನ್ನುವ ಚಿತ್ರಕ್ಕೆ... Read more »

‘ಸುನಿ – ಗಣಿ‌’ ಹ್ಯಾಟ್ರಿಕ್ ಜೋಡಿ!

ಸಿಂಪಲ್ ಸುನಿ ಇಂದು ತಮ್ಮ ಫೇಸ್ಬುಕ್ ವಾಲ್ ನಲ್ಲಿ ‘ದಿ ಸ್ಟೋರಿ ಆಫ್ ರಾಯಗಢ’ ಎಂಬ ಶೀರ್ಷಿಕೆಯುಳ್ಳ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ನಾಯಕ, ನಾಯಕಿ, ಚಿತ್ರ ತಂಡ ಯಾವುದರ ಬಗ್ಗೆಯೂ ಮಾಹಿತಿ ಇಲ್ಲದ ಪೋಸ್ಟರ್ ಸಕ್ಕತ್ ವೈರಲ್ ಆಗಿದೆ. ಪೋಸ್ಟರ್ ಬಗ್ಗೆ ಸುನಿ ಸಿನಿಕನ್ನಡ.ಕಾಮ್... Read more »

‘ವಿಜಯ ಟೈಮ್ಸ್’ ಶಿಬರೂರು ಚಾನೆಲ್ ಶುರು

ಕನ್ನಡದ ಮಾಧ್ಯಮ ಲೋಕದ ದಿಟ್ಟ ಹೆಣ್ಣು ಮಗಳಾಗಿ ಗುರುತಿಸಿಕೊಂಡವರು ವಿಜಯಲಕ್ಷ್ಮಿ ಶಿಬರೂರು. ಇಂದು ಅವರ ಕನಸಿನ ವಾಹಿನಿಯಾದ ‘ವಿಜಯ್ ಟೈಮ್ಸ್’ ಲಾಂಚ್ ಮಾಡಲಾಯಿತು. ಬೆಂಗಳೂರಿನ ಕೋರಮಂಗಲದಲ್ಲಿರುವ ವಿನೂತನ ಕಚೇರಿಯ ಉದ್ಘಾಟನೆಯನ್ನು ಎನ್ ಎ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಎಂ ಅಲ್ತಾಫ್ ಹುಸೇನ್ ನಿರ್ವಹಿಸಿದರು. ಇದೇ... Read more »

‘ದಿಲ್ ಮಾರ್’ ನಿರ್ದೇಶಕರ ಕಿರುಚಿತ್ರ ‘ಅಪ್ಪ’

ಸಿನಿಮಾ ಪ್ರಮೋಶನ್ ಹಲವು ರೂಪ ಪಡೆಯುತ್ತಿದೆ. ಅವುಗಳಲ್ಲೊಂದು ಕಿರುಚಿತ್ರದ ಮೂಲಕ ನೀಡಲಾಗುತ್ತಿರುವ ಪ್ರಚಾರ. ಬಹುಶಃ ಇಂಥದೊಂದು ‌ಪ್ರಯತ್ನ ಕನ್ನಡದ ಮಟ್ಟಿಗೆ ಇದೇ ಪ್ರಥಮ ಎನ್ನಬಹುದು ಎನ್ನುತ್ತಾರೆ ನಿರ್ದೇಶಕ ಚಂದ್ರಮೌಳಿ. ಅವರು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ‘ದಿಲ್ಮಾರ್’ ನ ಪ್ರಚಾರಕ್ಕಾಗಿ ‘ಫಾದರ್ಸ್ ಡೇ’ ಪ್ರಯುಕ್ತ... Read more »

ಥ್ರಿಲ್ಲರ್ ಚಿತ್ರದ ತಯಾರಿಯಲ್ಲಿ ‘ಲುಂಗಿ’ ನಿರ್ದೇಶಕ

ಕಳೆದ ವರುಷ ಬಿಡುಗಡೆಯಾದ ‘ಲುಂಗಿ’ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ, ಚಿತ್ರ ನೋಡಿದವರಿಗೆ ವಿಭಿನ್ನ ಅನುಭವ ನೀಡಿದ್ದು ನಿಜ. ಉತ್ಸಾಹಿ ಯುವಕನ ಜೀವನಗಾಥೆಯನ್ನು ಉತ್ತಮ ಸಾಹಿತ್ಯ, ಸಂಗೀತ, ಛಾಯಾಗ್ರಹಣ ಸೇರಿದಂತೆ ಮಂಗಳೂರು ಪ್ರದೇಶದ ನೈಜ ಚಿತ್ರಣದೊಂದಿಗೆ ತೆರೆ ಮೇಲೆ ತಂದಿದ್ದ ‘ಲುಂಗಿ’ ಚಿತ್ರದ ನಿರ್ದೇಶಕ... Read more »

‘ಅಯ್ಯಪ್ಪನುಂ ಕೋಶಿಯುಂ’ ನಿರ್ದೇಶಕ ನಿಧನ

ಪೃಥ್ವಿರಾಜ್ ಮತ್ತು ಬಿಜು ಮೆನನ್ ಜೋಡಿಯು ಪ್ರಧಾನ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಮಲಯಾಳಂ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ.’ ಫೆಬ್ರುವರಿ ತೆರೆಕಂಡಿದ್ದ ಈ ಸಿನಿಮಾ ಥಿಯೇಟರ್ ನಲ್ಲಿ ಗಮನ ಸೆಳೆದಿದ್ದು ಮಾತ್ರವಲ್ಲ, ಅಮೆಜಾನ್ ಪ್ರೈಮ್ ಮೂಲಕ ವೀಕ್ಷಿಸಿದವರಿಂದಲೂ ಮೆಚ್ಚುಗೆ ಗಳಿಸಿತು. ಬಹುಶಃ ಈ ಲಾಕ್ಡೌನ್... Read more »

ಸಂಭಾಷಣೆಗಳ ಫುಲ್ ಪ್ಯಾಕೇಜ್ ಆಸ್ತಿ: ಮಾಸ್ತಿ!

‘ಕಡ್ಡಿಪುಡಿ’ ಸಿನಿಮಾ ನೋಡಿದವರು ಒಂದು ದೃಶ್ಯವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಅದು ಚಿತ್ರದ ನಾಯಕ ಶಿವರಾಜ್ ಕುಮಾರ್ ಮತ್ತು ರಂಗಾಯಣ ರಘು ವಾಹನವೊಂದರಲ್ಲಿ ಸಾಗುವ ಸನ್ನಿವೇಶ. ಹೊರಗೆ ಜೋರಾಗಿ ಸುರಿಯುತ್ತಿರುವ ಮಳೆ, ಸಿಗ್ನಲ್ ಒಂದರಲ್ಲಿ ಬೈಕ್ ಸವಾರನೊಂದಿಗೆ ಮಾತಿನ ಸಂಘರ್ಷ ನಡೆಯುತ್ತದೆ. ಬೈಕ್ ಸವಾರ... Read more »

ಆತ್ಮಹತ್ಯೆಯ ಆಲೋಚನೆಯೇ ತಪ್ಪು ಎನ್ನುತ್ತಾರೆ ದುನಿಯಾ ವಿಜಯ್

ನಿನ್ನೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ದೇಶದ ಜನತೆಯನ್ನು, ಸಿನಿ ಪ್ರಿಯರನ್ನು ದಂಗು ಬಡಿಸಿತ್ತು. ಅವರ ಆತ್ಮಹತ್ಯೆಗೆ ಕಾರಣವೇನು ಇರಬಹುದು ಎನ್ನುವುದರ ಚರ್ಚೆಯ ಜತೆಯಲ್ಲೇ `ಆತ್ಮಹತ್ಯೆ ಹಲವೊಮ್ಮೆ ಅನಿವಾರ್ಯ’ ಎನ್ನುವಂಥ ಸಂದೇಶಗಳು ಕೂಡ ಹರಿದಾಡುತ್ತಿವೆ. ಆದರೆ ಆತ್ಮಹತ್ಯೆ ಎನ್ನುವ ಬಗ್ಗೆ ಯೋಚಿಸುವುದೇ ಎಷ್ಟು ದೊಡ್ಡ... Read more »

ಸುಶಾಂತ್ ಸಾವಿಗೆ ಕಾರಣಗಳೇನು..?

ಸರಿಯಾಗಿ ಹತ್ತು ವರ್ಷದ ಹಿಂದೆ ‘ಪವಿತ್ರ ರಿಷ್ತ’ ಎನ್ನುವ ಧಾರಾವಾಹಿಯಲ್ಲಿ ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದ ಯುವಕ ಸುಶಾಂತ್ ಸಿಂಗ್ ರಾಜ್ ಪೂತ್. ದಶಕದೊಳಗೆ ಬಾಲಿವುಡ್ ನ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದ ಪ್ರತಿಭಾವಂತ. ಆದರೆ ಆತನ ಈ ಬೆಳವಣಿಗೆ ಕಂಡ ಯಾರು ಕೂಡ ಆತ್ಮಹತ್ಯೆಯ ಬಗ್ಗೆ... Read more »

ಹುಚ್ಚ ವೆಂಕಟ್ ಪರಿಸ್ಥಿತಿಗೆ ಮರುಗಿದ ದುನಿಯಾ ವಿಜಯ್

ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರಿಗೆ ಬೀದಿ ಬೀದಿಯಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದರ ವಿರುದ್ಧ ನಟ ದುನಿಯಾ ವಿಜಯ್ ದನಿಯೆತ್ತಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ ನಲ್ಲಿ ಹಾಕಿರುವ ಪೋಸ್ಟ್ ಹೀಗಿದೆ. ಹುಚ್ಚ ವೆಂಕಟ್ ಅವರಿಗೆ ಬೀದಿಯಲ್ಲಿ ‌ಹೊಡೆಯುವ... Read more »

ಚಿರು ವಯಸ್ಸು‌ 39 ಅಲ್ಲ 35..!

ಚಿರಂಜೀವಿ ಸರ್ಜಾ 39ನೇ ವರ್ಷದಲ್ಲಿ ನಮ್ಮನ್ನು ಅಗಲಿದ್ದಾರೆ. ಇದು ಸಾಯುವ ವಯಸ್ಸಲ್ಲ; ಎನ್ನುವುದು ಎಲ್ಲರ ಮಾತು. ಆದರೆ ನಿಜಕ್ಕೆ ಅವರಿಗೆ ವಯಸ್ಸು 39 ಕೂಡ ಆಗಿರಲಿಲ್ಲ 35 ಆಗಿತ್ತಷ್ಟೇ ಎನ್ನುವುದು ವಾಸ್ತವ. ಇದನ್ನು ಅವರ ಸರ್ಟಿಫಿಕೇಟ್ ಮೂಲಕ‌ ಕಣ್ಣಾರೆ ಕಂಡಿರುವ ನಿರ್ದೇಶಕ ಪನ್ನಗಾಭರಣ ಸಿನಿಕನ್ನಡ.ಕಾಮ್... Read more »

ಚಿರು ಸರ್ಜಾ ಸಾವಿನ ಸುದ್ದಿ ಮೊದಲು ತಿಳಿಸಿದ್ದೇ ಪ್ರೊ. ಬರಗೂರು !

ಚಿರಂಜೀವಿ ಸರ್ಜ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದು ಸಹೋದರ ಧ್ರುವ ಸರ್ಜಾ. ಅವರು ಬಸವನಗುಡಿಯ ಮನೆಯಿಂದ ಆಸ್ಪತ್ರೆ ಸೇರುತ್ತಿದ್ದಂತೆ, ಅವರ ಹಿಂದೆಯೇ ಕಾರಿನಲ್ಲಿ ಆಸ್ಪತ್ರೆಗೆ ಹೋದವರು ಮೇಘನಾ ರಾಜ್ ಮತ್ತು ಅವರ ತಂದೆ ತಾಯಿ. ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಹೀಗೆ... Read more »

ನಟ ಚಿರಂಜೀವಿ ಸರ್ಜಾ ನಿಧನ

ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಿರಂಜೀವಿ ಸರ್ಜ ಅವರು ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ತೀವ್ರ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಲ್ಲಿ ಚಿಕಿತ್ಸೆಗೆ ಸರಿಯಾದ ಪ್ರತಿಕ್ರಿಯೆ ನೀಡಿರಲಿಲ್ಲ. ತೀವ್ರ ಹೃದಯಾಘಾತಕ್ಕೊಳಗಾದ ಚಿರಂಜೀವಿ ಸರ್ಜಾ ಅವರು ದುರಂತ ಸಾವಿಗೊಳಗಾಗಿದ್ದಾರೆ. ಖ್ಯಾತ ನಟ... Read more »

ಸಾಹಸ ಸಿಂಹ ಬರೆದ ಪತ್ರ..!

ಈ ಪತ್ರ ಎನ್ನುವುದೇ ಹಾಗೆ ಒಂದು‌ ಇತಿಹಾಸವನ್ನೇ ತೆರೆದಿಡುತ್ತದೆ. ಈಗಿನಂತೆ ವಾಟ್ಸ್ಯಾಪ್ ನಲ್ಲಿ‌ ಸಂದೇಶ ಕಳಿಸಿ ಕ್ಲಿಯರ್ ಚಾಟ್ ಮೂಲಕ ಅಳಿಸಿ‌ ಹಾಕುವಂಥದ್ದಲ್ಲ. ನಾಡಿನ‌ ಜನಪ್ರಿಯ ನಟ ವಿಷ್ಣುವರ್ಧನ್ ಅವರು ಆರಂಭ ಕಾಲದಲ್ಲಿ ಒಂದೆರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅದನ್ನು ಕನ್ನಡದ ಮೇಲೆ... Read more »

ಕುಟುಂಬದ ಜತೆ ಸಿಂಪಲ್ ಬರ್ತ್ ಡೇ ಆಚರಿಸಿದ ರಕ್ಷಿತ್ ಶೆಟ್ಟಿ!

ರಕ್ಷಿತ್ ಶೆಟ್ಟಿ ಹೇಳಿದ ಮಾತಿನಂತೆ ಉಡುಪಿಯಲ್ಲಿದ್ದಾರೆ. ಈ ಬಾರಿ ತಮ್ಮ ಜನ್ಮದಿನವನ್ನು ಅವರು ಅಲ್ಲೇ ಆಚರಿಸಿಕೊಂಡಿದ್ದಾರೆ. `ಅವನೇ ಶ್ರೀಮನ್ನಾರಾಯಣ’ದಂಥ ನಾಲ್ಕು ಭಾಷೆಯ ಚಿತ್ರ ನೀಡಿದ ಮೇಲೆಯೂ, ತವರೂರಿನ ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಸರಳವಾಗಿ ಜನ್ಮದಿನ ಆಚರಿಸಿದ್ದಾರೆ. ಅದಕ್ಕೆ ಒಂದು ರೀತಿಯಲ್ಲಿ ಕೊರೊನಾದ ಪರಿಸ್ಥಿತಿ... Read more »

ಕಿಚ್ಚನ ಫ್ಯಾನ್ಸ್ ಗೆ ಇಂದು ಸಿಗಲಿದೆ ಉತ್ತರ..!

ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ‘ಬದಲಾಗು ನೀನು ಬದಲಾಯಿಸು ನೀನು' ಎನ್ನುವ ಹಾಡು. ಕೊರೊನ ವೈರಸ್ ವಿರುದ್ಧ ಮೂಡಿಬಂದ ಈ ಜಾಗೃತಿ ಗೀತೆಯಲ್ಲಿ ಡಾ. ಶಿವರಾಜ್ ಕುಮಾರ್ ಅವರಿಂದ ಹಿಡಿದು ಧ್ರುವ ಸರ್ಜಾ ತನಕ ಕನ್ನಡದ... Read more »