ತೆರೆಗೆ ಸಿದ್ಧನಾದ ಪ್ರಜ್ವಲ್ ‘ರಾಕ್ಷಸ’!

ಬಹುನಿರೀಕ್ಷಿತ ‘ರಾಕ್ಷಸ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶಿವರಾತ್ರಿಗೆ ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್ ದರ್ಶನ ನೀಡಲಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ವಿಭಿನ್ನ ಅವತಾರದಲ್ಲಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ರಾಕ್ಷಸ. ಚಿತ್ರದ ಟೈಟಲ್ ಕೇಳಿದ್ ತಕ್ಷಣ ಇದು ಬರೀ ಹಾರರ್ ಸಿನಿಮಾ ಅಂದುಕೊಳ್ಳುವುದು ಸಹಜ.... Read more »

‘ಪಿನಾಕ’ ಗೋಲ್ಡನ್​ ಸ್ಟಾರ್ ಗಣೇಶ್ ಟೀಸರ್ ಹೇಗಿದೆ?

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಹೊಸ ಚಿತ್ರ ‘ಪಿನಾಕ’ದ ಟೀಸರ್ ರಿಲೀಸಾಗಿದೆ. ‘ಮುಂಗಾರು ಮಳೆ’ಯ ಮೂಲಕ ಸ್ಟಾರ್ ನಟನಾದ ಗಣೇಶ್, ಈ ಬಾರಿ ಮಳೆಯಿಂದ ದೂರಾಗಿ ಬೆಂಕಿಯೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಪಿನಾಕ ಅಂದರೆ ಶಿವನ ಆಯುಧ ಎನ್ನುವ ಅರ್ಥ ಇದೆ. ಸೌಮ್ಯ ಸ್ವಭಾವದ ಗಣೇಶ ಇಲ್ಲಿ... Read more »

ಧ್ರುವ ಸರ್ಜಾ ರಿಲೀಸ್ ಮಾಡಿದ ಫಸ್ಟ್​ ಲುಕ್ ಇಲ್ಲಿದೆ

ಯೋಗರಾಜ್ ಭಟ್ ಕತೆಗೆ, ಕೆ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ಪ್ರಧಾನ ಪಾತ್ರದಲ್ಲಿರುವ ಚಿತ್ರದ ಫಸ್ಟ್ ಲುಕ್ ಧ್ರುಸರ್ಜಾ ರಿಲೀಸ್ ಮಾಡಿದ್ದಾರೆ. ಉತ್ತಮ ವಸ್ತು ಹೊಂದಿರುವ ಈ... Read more »

ಫೆಬ್ರವರಿಯಲ್ಲಿ ತೆರೆಗೆ ಬರಲಿದೆ ‘ಮಾಂಕ್ ದಿ ಯಂಗ್’

ಹೊಸಬರೇ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾಹಂದರದ ಹೊಂದಿರುವ ‘ಮಾಂಕ್ ದಿ ಯಂಗ್’ ಚಿತ್ರ ಫೆಬ್ರವರಿಯಲ್ಲಿ ತೆರೆಕಾಣಲಿದೆ. ಸಂಕ್ರಾಂತಿ ಸಂದರ್ಭದಲ್ಲಿ ಪ್ರಚಾರಕಾರ್ಯ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಗ್ಲಿಂಪ್ಸ್, ಹಾಡು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ. ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕತೆಯ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ... Read more »

ಯುಗಾದಿ ವೇಳೆಗೆ “ಗ್ಯಾಂಗ್ಸ್ ಆಫ್ ಯುಕೆ “

ಡೆಡ್ಲಿ ಸೋಮ, ಮಾದೇಶ ಖ್ಯಾತಿಯ ರವಿ ಶ್ರೀವತ್ಸ ಅವರ ನಿರ್ಮಾಣ ಹಾಗೂ ನಿರ್ದೇಶನದ ನೂತನ ಚಿತ್ರ ‘ಗ್ಯಾಂಗ್ಸ್ ಆಫ್ ಯುಕೆ’ 2025ರ ಯುಗಾದಿ ಹಬ್ಬದ ವೇಳೆಗೆ ರಾಜ್ಯಾದ್ಯಂತ ತೆರೆ ಕಾಣಲಿದೆ. ರವಿ ಶ್ರೀವತ್ಸ ಅವರು ತಮ್ಮದೇ ಆದ ಡೆಡ್ಲಿ ಆರ್ಟ್ಸ್ ಎಂಬ ಹೊಸ ನಿರ್ಮಾಣ... Read more »

ವ್ಯಾಲಂಟೈನ್ ಡೇ ಗೆ’ಭುವನಂ ಗಗನಂ’ ಪ್ರದರ್ಶನಂ!

ಪುನೀತ್ ರಾಜ್ ಕುಮಾರ್ ನಟನೆ ವಂಶಿ ಚಿತ್ರದ ಜನಪ್ರಿಯ ಗೀತೆ ‘ಭುವನಂ ಗಗನಂ..’ ಎಂದು ಆರಂಭವಾಗುತ್ತದೆ‌. ಇದೀಗ ಅದೇ ಸಾಲನ್ನೇ ಹೆಸರಾಗಿಸಿಕೊಂಡು ಚಿತ್ರವೊಂದು ತಯಾರಾಗಿದೆ. ಕನ್ನಡದ ಯುವನಟರು ಪ್ರಧಾನ ಪಾತ್ರದಲ್ಲಿರುವ ಈ ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ತೆರೆಕಾಣಲಿದೆ. ಎಸ್‌ವಿಸಿ ಫಿಲ್ಮ್ಸ್ ಬ್ಯಾನರ್‌ನಡಿ... Read more »

ವಿ.ಮನೋಹರ್ ಸಂಗೀತದ 150ನೇ ಚಿತ್ರದ ಹಾಡು ರಿಲೀಸ್

ವಿ ಮನೋಹರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿ 4 ದಶಕಗಳಾಗಿವೆ. ಎಸ್​ಪಿ ಬಾಲಸುಬ್ರಹ್ಮಣ್ಯಂಗೆ ಮೊದಲ ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಗಳಿಸಿಕೊಟ್ಟ ಹಾಡಿಗೆ ಸಂಗೀತ ನಿರ್ದೇಶಕ ಇವರೇ. ಓ ಮಲ್ಲಿಗೆ ಚಿತ್ರದಲ್ಲಿನ ಮುದ್ದಾದ ಬಲೆ ಹೆಣೆದ ಹಾಡಿನ ಮೂಲಕ ಮನೋಹರ್ ಈ ಸಾಧನೆ ಮಾಡಿದ್ದರು.... Read more »

ಕ್ಯಾನ್ಸರ್ ಗೆದ್ದ ಶಿವಣ್ಣನ ಭರವಸೆಯ ಸಂದೇಶ

ಅಮೆರಿಕಾದ ಫ್ಲೋರಿಡಾದಲ್ಲಿ ಚಿಕಿತ್ಸೆಯಲ್ಲಿರುವ ಶಿವರಾಜ್​ಕುಮಾರ್​ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಖುದ್ದು ಶಿವಣ್ಣ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹೊಸ ವರ್ಷದಂದು ಶಿವಣ್ಣ ಕಳಿಸಿರುವ ವಿಡಿಯೋ ಸಂದೇಶದಲ್ಲಿ ಕ್ಯಾನ್ಸರ್​ನಿಂದ ಪೂರ್ತಿಯಾಗಿ ಗುಣಮುಖರಾಗಿದ್ದಾಗಿ ಹೇಳಿದ್ದಾರೆ. ಶಿವಣ್ಣ ಜತೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಜತೆಯಲ್ಲೇ ಕುಳಿತು... Read more »

ಮರಿ ಟೈಗರ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾ ಆನಂದ್

ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿರುವ ಹೊಸ ಚಿತ್ರ ‘ಬಲರಾಮನ ದಿನಗಳು’. ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅದ್ದೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆ‌.ಎಂ.ಚೈತನ್ಯ ನಿರ್ದೇಶಕರು. ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಜಕುಮಾರ,... Read more »

ಸಹಾರಾ: ಸಾಧನೆಗೆ ಛಲವೇ ಆಧಾರ

ಚಿತ್ರ: ಸಹಾರಾನಿರ್ದೇಶನ: ಮಂಜೇಶ್ ಭಗವತ್ನಿರ್ಮಾಣ: ಎಮ್. ಗೌಡತಾರಾಗಣ: ಸಾರಿಕಾ ರಾವ್, ಅಂಕುಶ್ ರಜತ್ ಎರಡು ಹೆಣ್ಣುಮಕ್ಕಳಾದ ಬಳಿಕ ಪತ್ನಿ ಮತ್ತೊಮ್ಮೆ ಗರ್ಭಿಣಿ. ಮೂರನೆಯದು ಗಂಡು ಮಗುವೇ ಆಗಲೆಂದು ಕಾಯುತ್ತಿರುವಾಗ ಮತ್ತೆ ಹೆಣ್ಣು ಮಗು. ಹಳ್ಳಿಯ ಬಡ ತಂದೆಗೆ ಅನಪೇಕ್ಷಿತ ಮಗುವಾಗಿ ಮೂರನೆಯದೂ ಹೆಣ್ಣಾಗುತ್ತದೆ. ಆದರೆ... Read more »

‘ಕೋಟಿ’ ಮಾತನಾಡುವ ಟ್ರೈಲರ್

ಕೋಟಿ ಎನ್ನುವುದು ಈ ಸಿನಿಮಾಗೆ ಸಂಬಂಧಿಸಿ ಸಂಖ್ಯೆಯಷ್ಟೇ ಅಲ್ಲ. ನಾಯಕನ ಹೆಸರೂ ಹೌದು. ಟ್ರೈಲರ್ ಬಿಡುಗಡೆಯ ಬಳಿಕ ಮಾತನಾಡಿದ ಚಿತ್ರದ ನಾಯಕ ಧನಂಜಯ್ ಕೂಡ ಇದನ್ನೇ ಹೇಳಿದ್ದಾರೆ.ಕೋಟಿ ಪೂರ್ತಿ ಸೌತ್ ನಲ್ಲಿ ಮಾತ್ರವಲ್ಲ ಮುಂಬೈನಲ್ಲೂ ಸಿಗಲ್ಲ ಎನ್ನುವ ಸಂಭಾಷಣೆ ಟ್ರೈಲರ್ ನಲ್ಲಿದೆ. ಕೋಟಿಯಂಥ ವ್ಯಕ್ತಿ... Read more »

ದಿವ್ಯಾ ಉರುಡುಗ ಈಗ ಲೇಡಿ ಸೂಪರ್ ಸ್ಟಾರ್!

ಬಿಗ್ ಬಾಸ್ ತನಕದ ದಿವ್ಯಾ ಉರುಡುಗ ಒಂದು ಲೆಕ್ಕ ಆದ್ರೆ, ಬಿಗ್ ಬಾಸ್ ಸ್ಪರ್ಧೆಯ ಬಳಿಕದ ದಿವ್ಯಾ ಏರಿದ ಎತ್ತರವೇ ದೊಡ್ಡ ಮಟ್ಟದ್ದು. ಹುಲಿರಾಯದಂಥ ಚಿತ್ರಗಳಲ್ಲಿ ತಣ್ಣನೆ ಬಂದು ಹೋದ ಸುಂದರಿಯೊಳಗಿನ ನೈಜ ಪ್ರತಿಭೆ, ಮುಗ್ದತೆ ಎಲ್ಲವೂ ಅನಾವರಣವಾಗಿದ್ದು ಬಿಗ್​ಬಾಸ್ ರಿಯಾಲಿಟಿ ಶೋನಲ್ಲೇ. ಈಗಾಗಲೇ... Read more »

‘ಜೋಕಾಲಿ’ ಖ್ಯಾತಿಯ ನಟಿ ಪವಿತ್ರಾ ಜಯರಾಮ್ ಸಾವು

ಕನ್ನಡ ಕಿರುತೆರೆಯ ಮೂಲಕ ಹೆಸರು ಮಾಡಿದ ಮಂಡ್ಯದ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಶನಿವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಟಿ ಸ್ಥಳದಲ್ಲೇ ಅಸುನೀಗಿದ್ದಾರೆ. ಪವಿತ್ರಾ ಜಯರಾಮ್ ಎರಡು ತಿಂಗಳ ಹಿಂದೆಯಷ್ಟೇ ತಂದೆ ಜಯರಾಮ್ ಅವರನ್ನು ಕಳೆದುಕೊಂಡಿದ್ದರು. ಇದೀಗ ಸ್ನೇಹಿತ... Read more »

ಗ್ರೇ ಗೇಮ್ಸ್: ಕೊಲೆಯ ಹಿಂದಿನ ಆಟ!

ಚಿತ್ರ : ಗ್ರೇ ಗೇಮ್ಸ್ನಿರ್ದೇಶನ : ಗಂಗಾಧರ ಸಾಲಿಮಠನಿರ್ಮಾಣ : ಆನಂದ್ ಮುಗುದ್ತಾರಾಗಣ : ವಿಜಯ ರಾಘವೇಂದ್ರ, ಭಾವನಾ ರಾವ್ ಮತ್ತಿತರರು. ಆನ್ಲೈನ್ ವಿಡಿಯೋ ಗೇಮ್ ಸುತ್ತ ನಡೆಯುವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯೇ ಗ್ರೇ ಗೇಮ್ಸ್. ನಿರ್ದೇಶಕರು ಚಿತ್ರವನ್ನು ಕೌಟುಂಬಿಕ ಸನ್ನಿವೇಶಗಳೊಂದಿಗೆ ಕಂಡು... Read more »

O2: ಆತ್ಮಗೆಲ್ಲುವ ಕತೆ

ಚಿತ್ರ: o2ನಿರ್ದೇಶನ: ರಾಘವ ನಾಯಕ್, ಪ್ರಶಾಂತ್ನಿರ್ಮಾಣ: PRKತಾರಾಗಣ: ಪ್ರವೀಣ್ ತೇಜ್, ಆಶಿಕಾ ರಂಗನಾಥ್ ಹೃದಯ ಬಡಿತ ನಿಂತ ಬಳಿಕ ಮನುಷ್ಯನನ್ನು ಮತ್ತೆ ಬದುಕಿಸಲು ಸಾಧ್ಯವೇ? ಈ ಪ್ರಯೋಗದಲ್ಲಿ ತೊಡಗಿಕೊಂಡ ಯುವ ವೈದ್ಯೆಯ ವೈಯಕ್ತಿಕ ಬದುಕಿನಲ್ಲಿ ನಡೆಯುವ ವಿಚಿತ್ರ ಘಟನೆ ಏನು? ಇದೇ ಈ ಚಿತ್ರದ... Read more »

ಮರೆಯದ ಗಾಯಗಳಿಗೆ ಸಾಕ್ಷಿಯಾಗುವ ‘ಫೋಟೋ’

ಚಿತ್ರ : ಫೋಟೋನಿರ್ದೇಶನ: ಉತ್ಸವ್ ಗೋನವಾರನಿರ್ಮಾಣ: ಮಸಾರಿ ಟಾಕೀಸ್‌ತಾರಾಗಣ: ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ವೀರೇಶ್ ಗೋನವಾರ ಮತ್ತಿತರರು ಈ ಸಿನಿಮಾಗೆ ಇಟ್ಟಿರುವ ಫೋಟೋ ಎನ್ನುವ ಹೆಸರೇ ನಮ್ಮ ಯೋಚನೆಗಳನ್ನು ನಿಲ್ಲಿಸಿಬಿಡುತ್ತದೆ. ಚಿತ್ರ ನೋಡಿದ ಬಳಿಕ ನಮ್ಮ ಮನಸು ಕೂಡ ಒಂದರೆಕ್ಷಣ ನಿಶ್ಚಲವಾಗಿ ಬಿಡುತ್ತದೆ.... Read more »

ಪ್ರಕಾಶ್ ರಾಜ್ ಮಾತು ಮರೆಸಿದ ಫೊಟೊ ಈ ವಾರ ರಿಲೀಸ್

ಸೂಚನೆಯೇ ನೀಡದೆ ಕೇಂದ್ರ ಸರ್ಕಾರವು ಘೋಷಿಸಿದ ಲಾಕ್‌ಡೌನ್‌‌ ಏನೆಲ್ಲ ಪರಿಣಾಮ‌ ಮಾಡಿತ್ತು? ಮುಖ್ಯವಾಗಿ ವಲಸೆ ಕಾರ್ಮಿಕರಿಗೆ ಎದುರಾದ ಕಷ್ಟಗಳೇನು ಎನ್ನುವುದನ್ನು ಪರದೆಗೆ ಇಳಿಸಿರುವ ಚಿತ್ರವೇ ಫೊಟೋ. ಈ ವಾರ ತೆರೆಕಾಣುತ್ತಿರುವ ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ ಉತ್ಸಾಹದಿಂದ ಮಾತು... Read more »

ಜಾಗರಣೆಗೆ ಜತೆಯಾಗುವ ಭಕ್ತಿಗೀತೆ

ಅನುರಾಧ ಭಟ್ ಕನ್ನಡ ಚಿತ್ರರಂಗದ ಶ್ರೇಷ್ಠ ಗಾಯಕಿಯಾಗಿ ಹೆಸರು ಪಡೆದವರು. ಸಿನಿಮಾ ಗೀತೆಗಳಲ್ಲಿ ನವ ಭಾವಗಳಿಗೂ ಜೀವ ತುಂಬಬಲ್ಲ ಈ ಪ್ರತಿಭಾವಂತೆ ಇದೀಗ ಭಕ್ತಿರಸದಿಂದ ಮನಸೂರೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಶಂಕರ ಹೆಸರಲ್ಲಿ ಬಿಡುಗಡೆಗೊಂಡ ಭಕ್ತಿಗೀತೆ. ಶಿವರಾತ್ರಿಯಂದು ಶಿವನೊಲುಮೆ ಪಡೆಯಲು ಜಾಗರಣೆ ಮಾಡುತ್ತಾರೆ. ಇಂಥದೊಂದು... Read more »

ರವಿಕೆಯಲ್ಲ; ಮಹಿಳೆಯರ ಅಂತರಂಗ

ಚಿತ್ರ: ರವಿಕೆ ಪ್ರಸಂಗತಾರಾಗಣ: ಗೀತಾಭಾರತಿ ಭಟ್, ಪ್ರಶಾಂತ್ ಕುಮಾರ್ನಿರ್ದೇಶನ: ಸಂತೋಷ್ ಕೊಡೆಂಕೇರಿನಿರ್ಮಾಣ: ದೃಷ್ಟಿ ಬ್ಯಾನರ್ ಸೀರೆ ಹೇಗೆ ಭಾರತೀಯ ಮಹಿಳೆಯರ ಸಂಭ್ರಮವೋ, ಅದರೊಂದಿಗೆ ಸಂಗಮಿಸಿರುವ ರವಿಕೆ ಅವರೊಳಗಿನ ಸಂಚಲನ. ಈ ಭಾವಗಳ ಸಂಕಲನಕ್ಕೆ ಜೀವ ನೀಡಿರುವ ಚಿತ್ರವೇ ರವಿಕೆ ಪ್ರಸಂಗ. ಇದು ದಕ್ಷಿಣ ಕನ್ನಡ... Read more »

‘ಎಲ್ಲಾ ನಿನಗಾಗಿ’ ಧನ್ಯ..!

ಧನ್ಯಾ ರಾಮ್ ಕುಮಾರ್ ಮತ್ತೆ ಬಂದಿದ್ದಾರೆ. ಕಳೆದ ವಾರವಷ್ಟೇ ‘ಜಡ್ಜ್ ಮೆಂಟಲ್’ ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಧನ್ಯಾ ರಾಮ್ ಕುಮಾರ್. ಇದೀಗ ಮತ್ತೊಂದು ಹೊಸ ಚಿತ್ರ ‘ಎಲ್ಲಾ ನಿನಗಾಗಿ’ಗೂ ನಾಯಕಿಯಾಗಿದ್ದಾರೆ‌ ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ‘ಎಲ್ಲಾ ನಿನಗಾಗಿ’ ಎನ್ನುವ... Read more »

ಮತ್ತೆ ರವಿಚಂದ್ರನ್​ಗೆ ಜೋಡಿಯಾದ ಅಪೂರ್ವ

ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ ಗೌರಿ. ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಬರ್ಕಾ ಬಿಸ್ಟ್ ಎನ್ನುವ ನಟಿಯನ್ನು ಪರಿಚಯಿಸಲಾಗಿತ್ತು. ಆದರೆ ಇದೀಗ ಬರ್ಕಾ ಬದಲಿಗೆ ಅಪೂರ್ವ ಎಂಟ್ರಿಯಾಗಿದ್ದಾರೆ. ಮೈಸೂರಿನ ಚೆಲುವೆಗೆ ಎಂದು ಹೆಸರಿಟ್ಟು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕ್ರೇಜಿಸ್ಟಾರ್ ಅವರಿಗೇನೇ ಸಲ್ಲುತ್ತದೆ. 2016ರಲ್ಲಿ... Read more »
error: Content is protected !!