ಕೌತುಕ ತಂದ ‘ಎನ್ ಎಚ್ 66’ ಪಯಣದ ಟೀಸರ್

‘ಇದುವರೆಗೆ ಖಾಕಿ ಹಾಕಿ ಸಾಕಷ್ಟು ಸಿನೆಮಾಗಳಲ್ಲಿ ಕಾಣಿಸಿದ್ದೇನೆ. ಆದರೆ ಈ ಬಾರಿ ವೈಟ್ ಯೂನಿಫಾರ್ಮ್ ಇದೆ. ಕ್ಯಾಬ್ ಡ್ರೈವರ್ ಎನ್ನುವುದು ಟೀಸರ್ ಮೂಲಕ ಕಾಣಿಸುತ್ತದೆ. ಇದೊಂದು ಸಸ್ಪೆನ್ಸ್ ಡ್ರಿಲ್ಲರ್ ಚಿತ್ರವಾದ ಕಾರಣ, ಅದರಾಚೆಗಿನ ಮಾಹಿತಿ ಹೇಳುವುದು ಕಷ್ಟ ಎಂದರು ಪ್ರಮೋದ್‌ ಶೆಟ್ಟಿ. ಎನ್‌ಎಚ್ 66 ಚಿತ್ರದ ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.

“ರಾಯರ ಮಠದಲ್ಲಿ ಮುಹೂರ್ತ ನಡೆಸಿ ಶುರು ಮಾಡಿದ ಚಿತ್ರ ಎನ್ ಎಚ್ 66. ಈ ಪಯಣ ಸುಗಮವಾಗುವಲ್ಲಿ ರಾಯರ ಅನುಗ್ರಹ ಮತ್ತು ಪ್ರಮೋದ್ ಶೆಟ್ಟಿಯವರ ಸಹಕಾರ ತುಂಬಾನೇ ಸಹಾಯ ಮಾಡಿದೆ” ಎಂದು ನಿರ್ದೇಶಕ ಹಾಗೂ ನಿರ್ಮಾಪಕರಾದ ಟಿ.ಆ‌ರ್ ಮಂಜುನಾಥ್ ಹೇಳಿದರು. ಪ್ರಿಪ್ರೊಡಕ್ಷನ್ ನಲ್ಲಿ ತುಂಬ ಯೋಜನೆ ಹಾಕಿ ಕೆಲಸ ಮಾಡಿದ ಕಾರಣ ಚಿತ್ರೀಕರಣ ‘ ಸುಗಮವಾಗಿ ಮುಗಿಯಲು ಸಾಧ್ಯವಾಯಿತು.

ಇದು ಒಂದೇ ಕಡೆ ಕ್ಯಾಂಪ್ ಹಾಕಿ ಶೂಟಿಂಗ್ ನಡೆಸಿದಂಥ ಚಿತ್ರವಲ್ಲ. ಪ್ರಮೋದ್ ಅವರ ಬಳಿಕ ಚಿತ್ರದಲ್ಲಿ ಎರಡು ಪ್ರಧಾನ ಪಾತ್ರಗಳನ್ನು ಶ್ರುತಿ ಹರಿಹರನ್ ಮತ್ತು ರಾಜೇಶ್ ನಟರಂಗ ಅವರು ನಿಭಾಯಿಸಿದ್ದಾರೆ. ಶ್ರುತಿ ಹರಿಹರನ್ ಅವರಿಗೆ ಗೂಗಲ್ ಮೀಟ್ ಮೂಲಕ ಕಥೆ ಹೇಳಿದಾಗ ಒಪ್ಪಿದ್ದರು. ರಾಜೇಶ್ ಅವರು ಪಾರ್ಕ್ ನಲ್ಲಿ ವಾಕ್ ಮಾಡುವಾಗಲೇ ಕಥೆ ಕೇಳಿ ಒಕೆ ಅಂದಿದ್ದರು ಎಂದ ಮಂಜುನಾಥ, ರಂಗಭೂಮಿಯಿಂದ ಬಂದವರೇ ಬೇಕು ಎನ್ನುವ ಕಾರಣಕ್ಕಾಗಿ ರಾಜೇಶ್ ನಟರಂಗ ಅವರನ್ನು ಆಯ್ಕೆ ಮಾಡಿದ್ದಾಗಿ ಹೇಳಿದರು.

ರಾಜೇಶ್ ನಟರಂಗ ತಾವು ಈ ಚಿತ್ರದಲ್ಲಿ ತುಂಬಾನೇ ಇನ್ವಾಲ್ ಆಗಿದ್ದು, ಪ್ರೊಡಕ್ಷನ್ ನಲ್ಲೂ ಕೆಲಸ ಮಾಡಿದ್ದಾಗಿ ಹೇಳಿ ನಕ್ಕರು. ಕಥೆ ಇಷ್ಟವಾಗಿ ಒಪ್ಪಿಕೊಂಡ ಮೇಲೆ ನಟಿಸುವುದು ನೈತಿಕತೆ, ವೃತ್ತಿ ಧರ್ಮವೇ ಹೊರತು ಅದನ್ನೇ ವಿಶೇಷವೆಂದುಕೊಳ್ಳುವಂಥದ್ದೇನೂ ಇಲ್ಲ ಎಂದರು ರಾಜೇಶ್. ಅದೇ ರೀತಿ ಪ್ರಮೋದ್ ಶೆಟ್ಟಿಯವರೊಂದಿಗೆ ಕೆಲಸ ಮಾಡುವುದು ತುಂಬ ಸುಲಭವಾಗಿತ್ತು. ಸರಳವಾಗಿ ಬೆರೆಯುವ ಅವರ ಗುಣವೇ ಅದಕ್ಕೆ ಕಾರಣ ಎಂದರು.

ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುವುದೇ ಸ್ವಾಮಿನಾಥನ್‌ ಅವರ ಸಂಗೀತ ಎನ್ನುವ ನಿರ್ದೇಶಕರ ಹೊಗಳಿಕೆ ಪ್ರತಿಕ್ರಿಯಿಸಿದ ಸ್ವಾಮಿನಾಥನ್, “ಮಂಜುನಾಥ್ ಅವರು ಸ್ವತಃ ಸಂಗೀತಜ್ಞ ಆಗಿದ್ದು, ಹಾಡುಗಳಿಗೆ ಅವರು ಕೂಡ ಸಲಹೆ ನೀಡಿದ್ದಾಗಿ ಹೇಳಿದರು.

ಛಾಯಾಗ್ರಾಹಕ ಸುನೀತ್ ಹಲಗೇರಿಯವರು ಮಾತನಾಡಿ, ಈ ಚಿತ್ರದಲ್ಲಿ ರಸ್ತೆಯೇ ಒಂದು ಪಾತ್ರ. ಅದೇ ನಾಲ್ಕು ರಾಜ್ಯಗಳನ್ನು ಸೇರಿಸುತ್ತದೆ. ಎಲ್ಲರೂ ಸ್ಪರ್ಧಾತ್ಮಕವಾಗಿ ಬಾಗಿಯಾಗಿದ್ದಾರೆ. ಚಿತ್ರದಲ್ಲಿ ಮಂಗಳೂರಿನಿಂದ ಗೋವಾದ ಕಡೆಗಿನ ಸುಮಾರು 650ಕಿ.ಮೀಗಳ ಪ್ರಯಾಣದಲ್ಲಿ ಕಥೆ ನಡೆಯಲಿದೆ ಎಂದರು.

Recommended For You

Leave a Reply