‘ರಾಜ ನಿವಾಸ’ ಚಿತ್ರೀಕರಣ ಪೂರ್ಣ

ಯುವ ಪ್ರತಿಭೆ ರಾಘವ್ ನಾಯಕ್ ಮತ್ತು ಕೃತ್ತಿಕಾ ರವೀಂದ್ರ ಜೋಡಿಯಾಗಿ ನಟಿಸುತ್ತಿರುವ ‘ರಾಜ‌ನಿವಾಸ’ದ ಚಿತ್ರೀಕರಣ ಪೂರ್ತಿಯಾಗಿದೆ. ‘ಡಿಎಎಂ 36 ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜನಿವಾಸ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಡೈಮಂಡ್... Read more »

‘ಮೈಸೂರು’ ಎನ್ನುವ ಮ್ಯೂಸಿಕಲ್ ಲವ್ ಸ್ಟೋರಿ..!

ಇದುವರೆಗೆ ರಾಜ್ಯದ ಸಾಂಸ್ಕೃತಿಕ ರಾಜ ಧಾನಿಯಾಗಿದ್ದ ಮೈಸೂರು ಹೇಗೆ ಈ ರೀತಿ ಬದಲಾಗಲು ಸಾಧ್ಯ ಅಂತ ಯೋಚಿಸುತ್ತಿದ್ದೀರ? ನಿಮ್ಮ ಅನಿಸಿಕೆ ನಿಜ; ಇಲ್ಲಿ ಮೈಸೂರು ಎನ್ನುವುದು ಹೊಸ ಕನ್ನಡ ಸಿನಿಮಾದ ಹೆಸರು! ಪ್ರಸ್ತುತ ‘ಮೈಸೂರು’ ಹೆಸರಿನ ಚಿತ್ರವೊಂದು ಸಿದ್ದವಾಗುತ್ತಿದ್ದು, ಚಿತ್ರೀಕರಣ ಪೂರ್ಣವಾಗಿದೆ. ಇದು ಹೊರ... Read more »

‘ಹೊಂಬಾಳೆ’ ನಿರ್ಮಿಸಲಿದೆ ಜಗ್ಗೇಶ್ ಸಿನಿಮಾ..!

ಕೆಜಿಎಫ್ ಚಿತ್ರ ನಿರ್ಮಿಸಿ ಜಗತ್ಪ್ರಸಿದ್ಧಗೊಂಡ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಒಂದಷ್ಟು ಹೊಸ ಸಿನಿಮಾಗಳನ್ನು ಘೋಷಿಸುತ್ತಿದೆ. ಅವುಗಳಲ್ಲಿ ಇಂದು ಸುದ್ದಿಯಾಗಿರುವ ಚಿತ್ರರಾಘವೇಂದ್ರ ಸ್ಟೋರ್ಸ್’. ಚಿತ್ರದ ಮೂಲಕ ಹೊಂಬಾಳೆ ಬ್ಯಾನರ್‌ನಲ್ಲಿ ಜಗ್ಗೇಶ್ ಪ್ರಥಮ ಬಾರಿಗೆ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ರಾಘವೇಂದ್ರ ಸ್ಟೋರ್ಸ್’ ಎನ್ನುವುದು ಒಂದು ಕೌಟುಂಬಿಕ... Read more »

ಕುಶಲಕರ್ಮಿಗಳಿಗೆ ವಿಶೇಷ ಸ್ಟುಡಿಯೋ

ಫ್ಯಾಷನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಲೇ, ಆ ಜಗತ್ತಿಗೆ ಪ್ರತಿಭಾವಂತರನ್ನು ಕೊಡಮಾಡಿರುವ ಸಂಸ್ಥೆ ‘ಕ್ರೀಮ್ ಕಲರ್ಸ್’ ಸ್ಟುಡಿಯೋಸ್. ಸಂಸ್ಥೆಯು ಇದೀಗ ಈ ನೆಲದ ನೈಜ ಘಮವನ್ನು ಫ್ಯಾಶನ್ ಜಗತ್ತಿಗೆ ಪರಿಚಯಿಸುವ ಕ್ರಿಯೆಗೆ ಚಾಲನೆ ನೀಡಿದೆ. ದೇಸೀ ಕುಶಲಕರ್ಮಿಗಳಿಂದ ನಮ್ಮ ಸೊಗಡಿನ ಕಾಸ್ಟ್ಯೂಮ್‌ಗಳೊಂದಿಗೆ ವಿಶಿಷ್ಟವಾದೊಂದು ಫ್ಯಾಶನ್... Read more »

ಒರಿಸ್ಸಾದ‌ ಕಡಲ ತೀರದಲ್ಲಿ ವಿಷ್ಣುವರ್ಧನ್ ಮರಳಶಿಲ್ಪ

ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ದಶಕವಾಗಿದೆ. ಆದರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಅವರ ಮೇಲಿರುವ ಅಭಿಮಾನ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ. ಈ‌ ಫೊಟೊದಲ್ಲಿರುವುದುಒರಿಸ್ಸಾದ ಸಮುದ್ರ ತೀರ. ಇಲ್ಲಿ ಕಾಣಿಸುತ್ತಿರುವುದು ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!... Read more »

ಶ್ರೀನಗರ ಕಿಟ್ಟಿಯ ‘ಗೌಳಿ’ಗೆ ಮುಹೂರ್ತ ಸಂಭ್ರಮ

ಬೆಂಗಳೂರಿನ ಹಂಪಿ ನಗರದಲ್ಲಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದ ವಾತಾವರಣ.ಕಾರಣ ಶ್ರೀನಗರ ಕಿಟ್ಟಿ ನಟನೆಯಗೌಳಿ’ ಚಿತ್ರದ ಮಹೂರ್ತ. ನಿರ್ಮಾಪಕರ ತಂದೆ ಡಿ ಮರಿದೊಡ್ಡಯ್ಯ ಗೌಳಿ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ನಿರ್ಮಾಪಕ ಸಿಂಘಂ ರಘು ಅವರ ಪುಟ್ಟ ಮಕ್ಕಳಾದ ಸೋಹನ್ ಮತ್ತು... Read more »

‘ಪ್ರೇಮಮಯಿ’ ಚಿತ್ರಕ್ಕೆ ಮುಹೂರ್ತ

ನವ ನಿರ್ದೇಶಕ ರಘುವರ್ಮ ನಿರ್ದೇಶನದ ‘ಪ್ರೇಮಮಯಿ’ ಸಿನಿಮಾದ ಮುಹೂರ್ತ ಇಂದು ಸೆ.15ರಂದು ವಸಂತಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು. ನಿರ್ದೇಶಕ ರಘುವರ್ಮ ಅವರು ಈ ಹಿಂದೆ ಆರ್ ಚಂದ್ರು ಅವರ ಬಳಿಯಲ್ಲಿ ಕೆಲಸ ಮಾಡಿದ ಅನುಭವಿಯಾಗಿದ್ದು, ಈಗಾಗಲೇ ‘ದೌಲತ್’ ಎನ್ನುವ ಹೊಸಬರ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದು... Read more »

‘ಹಿಂದಿ ದಿವಸ್’ ಆಚರಣೆ ನಮಗೇಕೆ ಬೇಡ – ಕವಿರಾಜ್

ಸಪ್ಟೆಂಬರ್ 14 ರಂದು ಹಿಂದಿ ದಿವಸ್ ಅಂತೆ! ಇಂಥದೊಂದು ಆಚರಣೆಯ ಅಗತ್ಯವಿದೆಯೇ? ಕನ್ನಡಿಗರು ಇದನ್ನು ಆಚರಿಸಬೇಕೇ ಎನ್ನುವ ಕುರಿತಾದ ಎಲ್ಲ ಸಂದೇಹಗಳಿಗೆ ವಿವರವಾದ ಉತ್ತರ ಇಲ್ಲಿದೆ. ಕನ್ನಡದ ಜನಪ್ರಿಯ ಗೀತರಚನೆಕಾರ, ನಿರ್ದೇಶಕ, ಸಮಾಜ ಸೇವಕ ಹಾಗೂ ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಕವಿರಾಜ್ ಅವರು ಇದನ್ನು... Read more »

ಶಿವಣ್ಣನಿಂದ ‘ಮೊದಲ ಮಿಡಿತ’ದ ಟೀಸರ್

ಚಿತ್ರದ ಹೆಸರು ಮೊದಲ ಮಿಡಿತ. ಆದರೆ ಸಿನಿಮಾ ತಂಡ ಮಾತ್ರ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ವಿವಿಧ ವಿಭಾಗದಲ್ಲಿ ಪರಿಣತಿ ಪಡೆದವರೇ ಎನ್ನುವುದು ವಿಶೇಷ. ಹಾಗಾಗಿ ಸ್ವತಃ ಶಿವರಾಜ್ ಕುಮಾರ್ ಅವರು ಕೂಡ ಮೆಚ್ಚುವಂತೆ ಟೀಸರ್ ಮೂಡಿ ಬಂದಿದ್ದು ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಮೊದಲ... Read more »

ನೈಜ ಘಟನೆಯಾಧರಿತ ‘ಕುಂತಿ ಪುತ್ರ’

ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಶಶಿಕುಮಾರ್ ನಟನೆಯಲ್ಲಿ ದಶಕಗಳ ಹಿಂದೆ ‘ಕುಂತೀಪುತ್ರ’ ಎನ್ನುವ ಚಿತ್ರ ತೆರೆಕಂಡಿತ್ತು. ಇದೀಗ ಅದೇ ಹೆಸರಿನಲ್ಲಿ ಹೊಸಬರ ತಂಡವೊಂದು‌ ಚಿತ್ರ ಮಾಡಿದೆ. ಸರಿಯಾಗಿ ಗಮನಿಸಿದರೆ ಶೀರ್ಷಿಕೆಯಲ್ಲಿ ಸ್ವಲ್ಪ ಬದಲಾವಣೆಯೂ ಇದೆ. ಚಿತ್ರದಲ್ಲಿ ನಾಯಕನಿಗೆ ಹುಟ್ಟಿನಿಂದ ತಂದೆ, ತಾಯಿ ಯಾರು ಎನ್ನುವ... Read more »

ಲಂಬಾಣಿಯಾದ ಶುಭಾ ಪೂಂಜಾ !

ಬಿಗ್ ಬಾಸ್ ನಿಂದ ಮರಳಿದ ಬಳಿಕ ಯಾವ ಸಿನಿಮಾಗಳಲ್ಲಿಯೂ ಕಾಣಿಸಿರದ ಶುಭಾಪೂಂಜಾ ಇದೀಗ ಹೊಸ ಸಿನಿಮಾದಲ್ಲಿ ಲಂಬಾಣಿ ಹುಡುಗಿಯಾಗಿ ಬರಲಿದ್ದಾರೆ. ಚಿತ್ರದ ಕುರಿತಾದ ವಿವರವಾದ ಮಾಹಿತಿ ಇಲ್ಲಿದೆ. ‘ಕೆಲವು ದಿನಗಳ ನಂತರ’ ಎನ್ನುವ ಸಿನಿಮಾದ ನೀಡಿದ ನಿರ್ದೇಶಕ ಶ್ರೀನಿ ಕೆಲವು ವರ್ಷಗಳ ನಂತರ ಮರಳಿದ್ದಾರೆ.... Read more »

ಶುಭ ಮುಹೂರ್ತದಲ್ಲಿ ‘1975′

ದಿನಾಂಕ ನೋಡಿ ಮುಹೂರ್ತ ಮಾಡುವುದು ವಾಡಿಕೆ.‌ ಆದರೆ 1975 ಎನ್ನುವ ವರ್ಷಕ್ಕೇನೇ ಮುಹೂರ್ತ ನೆರವೇರಿಸಿದೆ ಚಿತ್ರತಂಡ. ಹೌದು, ಇದು ವಸಿಷ್ಠ ಬಂಟನೂರು ನಿರ್ದೇಶನದ 1975 ಎನ್ನುವ ಚಿತ್ರದ ಮುಹೂರ್ತದ ಸುದ್ದಿ. ನಿರ್ದೇಶಕ ವಸಿಷ್ಠ ಬಂಟನೂರು ಅವರು ಈ ಹಿಂದೆ ‘ಒನ್ ಲವ್ ಟು ಸ್ಟೋರಿ’... Read more »

ಉಗ್ರಂ ನಾಯಕನಿಂದ ‘ಸಮುದ್ರಂ’ ಶೀರ್ಷಿಕೆ

ಉಗ್ರಂ ಮುರಳಿ ಒಂದುಕಡೆ ಮದಗಜನಾಗಿ ಹೂಂಕರಿಸಲು ಸಿದ್ಧರಾಗುತ್ತಿದ್ದಾರೆ. ಮತ್ತೊಂದು ಕಡೆತೆರೆಗಳ ನಡುವಿನ ಕತೆ ತೆರೆದಿಡಲಿರುವ ಚಿತ್ರವೊಂದರ ಶೀರ್ಷಿಕೆ ಬಿಡುಗಡೆಗೊಳಿಸಿದ್ದಾರೆ. ಅದುವೇ ಅನಿತಾಭಟ್ ನಾಯಕಿ, ನಿರ್ಮಾಪಕಿಯಾಗಿರುವ ‘ಸಮುದ್ರಂ’ ಕಡಲ ಕಿನಾರೆಯ ನಿಗೂಢತೆಯನ್ನು ಬಚ್ಚಿಟ್ಟುಕೊಂಡಿರುವ ಕತೆ ‘ಸಮುದ್ರಂ’ನಲ್ಲಿದೆಯಂತೆ. ಪ್ರತಿಭಾನ್ವಿತ ನಟಿ ಅನಿತಾ ಭಟ್ ಸದ್ದೇ ಇಲ್ಲದೆ ಒಂದು... Read more »

ಮರಳಿ ಬಂದಿತು ‘ಜಿಲ್ಕಾ’

ಸಾಮಾನ್ಯವಾಗಿ ಗಣೇಶ ಚತುರ್ಥಿಯ ದಿನ ಸಾಕಷ್ಟು ಸ್ಟಾರ್ ಸಿನಿಮಾಗಳು ತೆರೆಕಾಣುತ್ತವೆ. ಆದರೆ ಈ ಬಾರಿ ಚಿತ್ರಮಂದಿರದಲ್ಲೇ ಪೂರ್ಣಪ್ರಮಾಣದಲ್ಲಿ ಕುಳಿತು ನೋಡಲು ಅವಕಾಶ ಇಲ್ಲವಲ್ಲ! ಹಾಗಂತ ಒಟಿಟಿ ಫ್ಲಾಟ್ ಫಾರ್ಮ್ ಸುಮ್ಮನಿಲ್ಲ. ವರ್ಷದ ಹಿಂದೆ ತೆರೆಕಂಡು ಹೊಸಬರ ನಡುವೆ ಸುದ್ದಿ ಮಾಡಿದ್ದ ಜಿಲ್ಕಾ ಚಿತ್ರವನ್ನು ಅಮೆಜಾನ್... Read more »

ಶಿವಣ್ಣನ ಕೈಲಿ ‘ಗಾಂಧಿ ಮತ್ತು ನೋಟು’

ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದ ‘ಸೆಕೆಂಡ್ ಹಾಫ್’ ಚಿತ್ರ ನಿರ್ದೇಶಿಸಿದ್ದ ಯೋಗಿ ದೇವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹೊಸ ಚಿತ್ರ ‘ಗಾಂಧಿ ಮತ್ತು ನೋಟು’. ಚಿತ್ರದ ಟ್ರೇಲರ್ ಬಿಡುಗಡೆಯನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನೆರವೇರಿಸಿದ್ದಾರೆ. ಸಾಹಿತಿ ವಿ.ನಾಗೇಂದ್ರಪ್ರಸಾದ್ ಪುತ್ರಿ ದಿವಿಜಾ... Read more »

ಬಪ್ಪನ ಹಬ್ಬಕ್ಕೆ ಬಂತು ‘ಬರ್ಕ್ಲಿ’ ಹಾಡು

ಬರ್ಕ್ಲಿ ಚಿತ್ರಕ್ಕಾಗಿ ಬಹದೂರ್ ಚೇತನ್ ಬರೆದಿರುವ ಹಾಡಿನ ಲಿರಿಕಲ್ ವರ್ಶನ್ ಬಿಡುಗಡೆಯಾಗಿದೆ. ಸಂತೋಷ್ ಬಾಲರಾಜ್ ನಾಯಕನಾಗಿರುವ ಬರ್ಕ್ಲಿ ಚಿತ್ರಕ್ಕೆ ನಿರ್ದೇಶಕರು ಸುಮಂತ್ ಕ್ರಾಂತಿ. ಸಂಜಿತ್ ಹೆಗ್ಡೆಯ ಕಂಠದಲ್ಲಿನ ಒಂದು ಹಾಡು ನಿನ್ನೆಯಿಂದ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಜ್ಯೂಡಾ ಸ್ಯಾಂಡಿ ಸಂಗೀತದಲ್ಲಿ ಮೂಡಿಬಂದ ಈ... Read more »

‘ಲವ್ ಮಿ or ಹೇಟ್ ಮಿ’ ಮುಹೂರ್ತ

ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ನಟನೆಯ ‘ಲವ್ ಮಿ or ಹೇಟ್ ಮಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಿಲನ ನಾಗರಾಜ್ ಆರಂಭ ಫಲಕ ತೋರಿದರು.‌ ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ... Read more »

ಸದ್ಯದಲ್ಲೇ ಶಿವಾಜಿಯ ಚಿತ್ರೀಕರಣ

ವರ್ಷದ ಹಿಂದೆ ತೆರೆಕಂಡ ‘ಶಿವಾಜಿ ಸುರತ್ಕಲ್’ ಚಿತ್ರವನ್ನು ನೋಡಿದವರು ಮೆಚ್ಚಿದ್ದರು. ಅದೇ ಕಾರಣದಿಂದಲೇ ಚಿತ್ರ ತಂಡ ಮತ್ತೊಮ್ಮೆ ಒಂದಾಗಿದ್ದು ಸೆಪ್ಟಂಬರ್ 10ರಂದು ರಮೇಶ್ ಅರವಿಂದ್ ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಪೋಸ್ಟರ್ ಲಾಂಚ್ ಮಾಡಿದೆ. ರಮೇಶ್ ಅರವಿಂದ್ ಅಭಿನಯದಲ್ಲಿ, ನಿರ್ದೇಶಕರಾದ ಆಕಾಶ್ ಶ್ರೀವತ್ಸರ ಸಾರಥ್ಯದಲ್ಲಿ... Read more »

ಗಣೇಶ ಚತುರ್ಥಿ‌ ಜೊತೆಗೆ ರಮೇಶ್ ಜನ್ಮದಿನ..!

ನಾಡಿನಾದ್ಯಂತ ಇಂದು ಗಣೇಶನ ಹಬ್ಬ.‌ ಕನ್ನಡ ಸಿನಿ ಪ್ರಿಯರು ಅದರೊಂದಿಗೆ ‌ರಮೇಶ್ ಅವರಿಗೂ ಇವತ್ತು ಶುಭ ಕೋರುತ್ತಾರೆ. ಯಾಕೆಂದರೆ ಇಂದು ನಟ ರಮೇಶ್ ಅರವಿಂದ್ ಜನ್ಮದಿನ. ಪತ್ರಕರ್ತ ನವೀನ್ ಸಾಗರ್ ಅವರು ರಮೇಶ್ ಅವರನ್ನು ನೆನಪಿಸಿಕೊಂಡ ರೀತಿ ಇದು. ರಮೇಶ್ ಅರವಿಂದ್ ಏನಿದ್ರೂ ಅನ್ಯಭಾಷಿಗರಿಗೆ.... Read more »

‘ಕದ್ದ ಚಿತ್ರ’ದಲ್ಲಿ ವಿಜಯರಾಘವೇಂದ್ರ..!

ನಮ್ಮದೇ ಕತೆ ಎಂದು ಚಿತ್ರ ಮಾಡುವ ಎಷ್ಟೋ ಚಿತ್ರತಂಡಗಳು ಸಿನಿಮಾ ತೆರೆಗೆ ಬಂದ ಮೇಲೆ ಇದು ಯಾವುದೋ ಚಿತ್ರದ ರಿಮೇಕ್ ಎಂದೋ, ಸೀನ್ ಟು ಸೀನ್ ಕದ್ದಿದ್ದಾರೆ ಎಂದೋ ಪ್ರೇಕ್ಷಕರೇ ಪತ್ತೆ ಮಾಡಿದ ಹಲವಾರು ಉದಾಹರಣೆಗಳಿವೆ. ಆದರೆ ‘ಕದ್ದ ಚಿತ್ರ’ ಎನ್ನುವ ಹೆಸರನ್ನೇ ಇಟ್ಕೊಂಡು... Read more »

ಮಿಲನ ಪ್ರಕಾಶ್ ತಂದೆ ನಿಧನ

ಕನ್ನಡದ ಜನಪ್ರಿಯ ನಿರ್ದೇಶಕ, ಕಿರುತೆರೆ ಧಾರಾವಾಹಿಗಳ ‌ನಿರ್ಮಾಪಕ ಮಿಲನ ಪ್ರಕಾಶ್ ಅವರ ತಂದೆ ಹಿರಿಯ ನಿರ್ಮಾಪಕ ಸಿ.ಜಯರಾಮ್ ನಿಧನರಾಗಿದ್ದಾರೆ. ನಿರ್ಮಾಣರಂಗದಲ್ಲಿ ದಶಕಗಳಿಂದ ಹೆಸರು ಮಾಡಿರುವ ಇವರು ಚಂದನವನದಲ್ಲಿ ಸಿ.ಜಯರಾಮ್ ಎಂದೇ ಗುರುತಾಗಿದ್ದರು. ಕಳೆದರಾತ್ರಿ 2 ಗಂಟೆಗೆ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಜಯರಾಮ್ ಅವರ... Read more »